ಕರ್ನಾಟಕ

karnataka

ETV Bharat / entertainment

4ನೇ ಮದುವೆ ಬಗ್ಗೆ ಕುತೂಹಲಕಾರಿ ಮಾತುಗಳನ್ನಾಡಿದ ಟಾಲಿವುಡ್‌ ಹಿರಿಯ ನಟ ನರೇಶ್! - ಹಿರಿಯ ನಟಿಯೊಂದಿಗೆ ನರೇಶ್​ ಮದುವೆ

ನಟ ನರೇಶ್ ಹಿರಿಯ ನಟಿಯೊಬ್ಬರನ್ನು ವರಿಸಲು ಮುಂದಾಗಿದ್ದಾರೆ. ಈಗಾಗಲೇ ಅವರಿಬ್ಬರೂ ಒಟ್ಟಿಗೆ ವಾಸಿಸಲು ಶುರು ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

Tollywood Senior Actor Naresh
ಟಾಲಿವುಡ್​​ನ ಹಿರಿಯ ನಟ ನರೇಶ್

By

Published : Jun 23, 2022, 3:57 PM IST

ಟಾಲಿವುಡ್​​ನ ಹಿರಿಯ ನಟ ನರೇಶ್ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಸರಣಿ ಚಿತ್ರಗಳನ್ನು ಮಾಡುತ್ತಾ ವೃತ್ತಿಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಮೂರು ಮದುವೆಯಾಗಿ ವಿಚ್ಛೇದನ ಪಡೆದಿರುವ ಅವರು, ಕೆಲ ದಿನಗಳಲ್ಲೇ ನಾಲ್ಕನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ನರೇಶ್ ಹಿರಿಯ ನಟಿಯೊಬ್ಬರನ್ನು ವರಿಸಲು ಮುಂದಾಗಿದ್ದಾರೆ. ಈಗಾಗಲೇ ಅವರಿಬ್ಬರೂ ಒಟ್ಟಿಗೆ ವಾಸಿಸಲು ಶುರು ಮಾಡಿದ್ದಾರೆ ಎಂಬ ಮಾತುಗಳು ಜೋರಾಗಿಯೇ ಕೇಳಿಬರುತ್ತಿವೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಇವರ ಬಗ್ಗೆ ಬಿಸಿ-ಬಿಸಿ ಚರ್ಚೆ ಆಗುತ್ತಿದೆ.

ಮದುವೆ ಅನ್ನೋದು ಆಟವಲ್ಲ...'ಸಿನಿಮಾದವರು ಮದುವೆ ವಿಷಯ ಬೇಗ ಬಯಲಿಗೆ ಕಾಣಿಸುತ್ತದೆ, ಬೇರೆಯವರು ಕಾಣಿಸುವುದಿಲ್ಲ. ಮದುವೆ ಅನ್ನೋದು ಆಟವಲ್ಲ. ಅದು ಒಂದು ಜೀವನ. ಜೀವನದಲ್ಲಿ ಎಷ್ಟೋ ಮಾನಸಿಕ ತಳಮಳಗಳನ್ನು ಅನುಭವಿಸಿದರೆ ಅದರಿಂದ ಹೊರಗೆ ಬರುತ್ತೇವೆ' ಎಂದು ನರೇಶ್​ ಹೇಳಿದ್ಧಾರೆ.

ಇವತ್ತು ಅಂತಹ ಪರಿಸ್ಥಿತಿ ಇಲ್ಲ...'ಹಿಂದೊಮ್ಮೆ ಒಂದೇ ಕುಟುಂಬಿಕ ನ್ಯಾಯಾಲಯ ಇತ್ತು. ಆದರೆ, ಈಗ ಎಂಟು ನ್ಯಾಯಾಲಯಗಳಿವೆ. ಹಾಗೆ, ಹಿಂದೊಮ್ಮೆ ಗಂಡ ಸಂಪಾದನೆ ಮಾಡಿ ತಂದರೆ, ಹೆಂಡ್ತಿ ಮನೆಗೆಲಸ, ಮಕ್ಕಳು, ಹಿರಿಯರನ್ನು ನೋಡಿಕೊಂಡು ಇರುತ್ತಿದ್ದಳು. ಆದರೆ, ಇವತ್ತು ಅಂತಹ ಪರಿಸ್ಥಿತಿ ಇಲ್ಲ. ಆಕೆ ಕೂಡ ಸಂಪಾದನೆ ಮಾಡುತ್ತಿದ್ದಾಳೆ. ಆಕೆ ತನ್ನದೇ ಆದ ಸೆಲ್ ಫೋನ್ ಖರೀದಿಸುತ್ತಾಳೆ. ಆಕೆಗೂ ಸ್ನೇಹಿತರಿದ್ದಾರೆ, ತನ್ನದೇ ಆದ ಜೀವನವಿದೆ' ಎಂದಿದ್ದಾರೆ.

ಅರ್ಥ ಮಾಡಿಕೊಳ್ಳುವವರೊಂದಿಗೆ ಬದುಕಬಲ್ಲೆ...'ಈ ನಡುವೆ ಗಂಡ-ಹೆಂಡ್ತಿ ಬೇಗ ದೂರವಾಗುತ್ತಾರೆ. ಭವಿಷ್ಯದಲ್ಲಿ ಮದುವೆ ವ್ಯವಸ್ಥೆಯೇ ಇರದೇ ಹೋಗಬಹುದು. ಒಬ್ಬ ನಟನಿಗೆ ಸ್ಥಿರತೆ ಇರುವುದಿಲ್ಲ. ಅವನು ಸಮಯಕ್ಕೆ ಮನೆಗೆ ಬರುವುದಿಲ್ಲ. ನಾನು ತಿಂಗಳಿಗೆ 28 ​​ದಿನ ಶೂಟಿಂಗ್ ಮಾಡುತ್ತೇನೆ. ನನ್ನ ವೃತ್ತಿ ಜೀವನವನ್ನು ಅರ್ಥಮಾಡಿಕೊಳ್ಳುವ ಜನರೊಂದಿಗೆ ನಾನು ಬದುಕಬಲ್ಲೆ' ಎಂದು ನರೇಶ್​ ತಿಳಿಸಿದ್ದಾರೆ.

ಇದನ್ನೂ ಓದಿ:ಡಾ. ರಾಜ್​ಕುಮಾರ್ ಅವರಿಗೂ ಕ್ರಿಕೆಟ್ ಮೇಲೆ ಪ್ರೀತಿಯಿತ್ತು: ಅನಿಲ್ ಕುಂಬ್ಳೆ

ABOUT THE AUTHOR

...view details