ಕರ್ನಾಟಕ

karnataka

ETV Bharat / entertainment

ಪತ್ನಿ ಜೊತೆ ಸಹಜ ಲುಕ್​ನಲ್ಲಿ ಟಾಲಿವುಡ್​ ಪ್ರಿನ್ಸ್​ ಮಹೇಶ್ ಬಾಬು - ಈಟಿವಿ ಭಾರತ್​ ಕನ್ನಡ ನ್ಯೂಸ್

ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹೇಶ್​ ಬಾಬು ಹಾಗೂ ಪತ್ನಿ ನಮ್ರತಾ ಶಿರೋಡ್ಕರ್ ಜೊತೆಗಿದ್ದರು.

ಟಾಲಿವುಡ್​ ಪ್ರಿನ್ಸ್​ ಮಹೇಶ್ ಬಾಬು
ಟಾಲಿವುಡ್​ ಪ್ರಿನ್ಸ್​ ಮಹೇಶ್ ಬಾಬು

By

Published : Jul 10, 2023, 7:43 PM IST

ಹೈದರಾಬಾದ್ : ಟಾಲಿವುಡ್​ ಪ್ರಿನ್ಸ್​ ಮಹೇಶ್ ಬಾಬು ಅವರು ತಮ್ಮ ಸಮಾಜಮುಖಿ ಕಲೆಸಗಳಿಂದ ಆಗಾಗ್ಗೆ ಸುದ್ದಿ ಮಾಡುತ್ತಲೇ ಇರುತ್ತಾರೆ. ವಯಸ್ಸು 48 ಆದರೂ ಇನ್ನು ಇಳಿ ವಯಸ್ಸಿನ ಯುವಕನಂತಿರುವ ನಟ, ಪತ್ನಿ ನಮ್ರತಾ ಶಿರೋಡ್ಕರ್ ಅವರೊಂದಿಗೆ ಹೈದರಾಬಾದ್​ನಲ್ಲಿ​ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡ ಪ್ರಿನ್ಸ್​ ಗಮನ ಸೆಳೆದರು. ಇಡೀ ಕಾರ್ಯಕ್ರಮದಲ್ಲಿ ಆರ್ಕಷಣೆಯ ಕೇಂದ್ರ ಬಿಂದುವಾದರು.

ಇನ್‌ಸ್ಟಾಗ್ರಾಮ್‌ನಲ್ಲಿ 10 ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್​ ಇದ್ದರೂ ಸಹ ಮಹೇಶ್​ ಬಾಬು ಸೋಷಿಯಲ್​ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿಲ್ಲ. ಮತ್ತೊಂದೆಡೆ ತನ್ನ ಸ್ಟೈಲಿಶ್​ ಫೋಟೋಗಳನ್ನು ಇನ್​ಸ್ಟಾದಲ್ಲಿ ಹಂಚಿಕೊಂಡು ಅತಿ ಹೆಚ್ಚು ಫ್ಯಾನ್​ ಪೇಜ್ ಹೊಂದಿರುವ ​ನಟರಲ್ಲಿ ಒಬ್ಬರಾಗಿದ್ದಾರೆ. ಅದೇ ಫ್ಯಾನ್​ ಪೇಜ್​ಗಳು ಇದೀಗ ವಿಡಿಯೋ ಪೋಟೋಗಳನ್ನು ಹಂಚಿಕೊಂಡಿರುವುದರಲ್ಲಿ ಸಖತ್​ ಹಾಟ್​ ಆಗಿ ಕಾಣಿಸುವ ಕ್ಯಾಶುಯಲ್ ಉಡುಪನ್ನು ಧರಿಸಿರುವುದನ್ನು ನೋಡಬಹುದು. ಮಹೇಶ್​ ಬಾಬು ಮರೂನ್ ಹೂಡಿಯನ್ನು ಧರಿಸಿದ್ದು, ಕಡು ನೀಲಿ ಬಣ್ಣದ ಪ್ಯಾಂಟ್​ನೊಂದಿಗೆ ಕಪ್ಪು ಬಣ್ಣ ಶೂ ಧರಿಸಿದ್ದಾರೆ. ಇದರ ನಡುವೆ ಅವರ ಹೊಸ ಹೇರ್ ಸ್ಟೈಲ್ ಎಲ್ಲರ ಗಮನ ಸೆಳೆದಿದೆ. ಇನ್ನು ಪತ್ನಿ ನಮ್ರತಾ ಕೂಡ ಅನಾರ್ಕಲಿ ಉಡುಪನ್ನು ಧರಿಸಿದ್ದು, ಪ್ರಿನ್ಸ್​ ಜೊತೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ :ನ್ಯೂಯಾರ್ಕ್​ನ ಟೈಮ್​ ಸ್ಕ್ವೇರ್​ನಲ್ಲಿ ಮಿಂಚಿದ ಮಹೇಶ್​ ಬಾಬು ಪುತ್ರಿ.. ಸಿತಾರಾಗೆ ಪ್ರಶಂಸೆಯ ಸುರಿಮಳೆ

ಆರ್​ಆರ್​ಆರ್ ಸಿನಿಮಾವನ್ನು ಎಸ್​ಎಸ್​ಎಂಬಿ29 ಮೀರಿಸಲಿದೆ :ಈಗಾಗಲೇ ಖ್ಯಾತ ನಿರ್ದೇಶಕ ರಾಜಮೌಳಿ ಅವರು ತಮ್ಮ ಮುಂದಿನ ಸಿನಿಮಾವನ್ನು ಮಹೇಶ್​ ಬಾಬು ಜೊತೆ ಮಾಡುತ್ತಿರುವುದು ಅಧಿಕೃತವಾಗಿದೆ. ಮಹೇಶ್​ ಬಾಬು ಅವರ 'ಎಸ್​ಎಸ್​ಎಂಬಿ29' ಪ್ಯಾನ್​ ವರ್ಲ್ಡ್​​ ಪ್ರಾಜೆಕ್ಟ್​​ ಆಗಿದ್ದು, ಇದಕ್ಕಾಗಿ ಅವರು ರಾಜಮೌಳಿ ತಂಡವನ್ನು ಸೇರಿದ್ದಾರೆ. ಈ ಕುರಿತು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಖ್ಯಾತ ಬರಹಕಾರ ಕೆವಿ ವಿಜಯೇಂದ್ರ ಪ್ರಸಾದ್​​ ಕೂಡ ಚಿತ್ರದ ಮಾಹಿತಿ ಹಂಚಿಕೊಂಡಿದ್ದು, 'ಎಸ್​ಎಸ್​ಎಂಬಿ29' ಚಿತ್ರಕ್ಕೆ ಮಹೇಶ್​ ಬಾಬು, ರಾಜಮೌಳಿ ಒಂದಾಗಿದ್ದಾರೆ. ಈ ಚಿತ್ರ 'ಆರ್​ಆರ್​ಆರ್'​ ಸಿನಿಮಾವನ್ನು ಮೀರಿಸಲಿದ್ದು, ಸಿಕ್ಕಾಪಟ್ಟೆ ಆ್ಯಕ್ಷನ್​ ಸಿನಿಮಾವಾಗಿರಲಿದೆ ಎಂದಿದ್ದಾರೆ.

ಇದನ್ನೂ ಓದಿ :ವರ್ಕೌಟ್​ ವಿಡಿಯೋ ಹಂಚಿಕೊಂಡ ನಟ ಮಹೇಶ್​ ಬಾಬು: 'ಭಾರತದ ಜಾನ್​ ವಿಕ್​' ಎಂದ ಫ್ಯಾನ್ಸ್​

ಈ ಸಿನಿಮಾಕ್ಕೂ ಮೊದಲೇ ಮಹೇಶ್​ ಬಾಬು ಎರಡು ಬಹುನಿರೀಕ್ಷಿತ ಚಿತ್ರಗಳಲ್ಲಿ ನಟ ಬ್ಯುಸಿಯಾಗಿದ್ದಾರೆ. ಸದ್ಯ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರ 'ಗುಂಟೂರು ಖಾರಂ'ನಲ್ಲಿ ನಟಿಸುತ್ತಿದ್ದಾರೆ. ಇದು ಮಹೇಶ್​ ಬಾಬು 28ನೇ ಸಿನಿಮಾವಾಗಿದ್ದು, 2024ರ ಜನವರಿ 24 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ನಾಯಕಿಯಾಗಿ ಕನ್ನಡದ ನಟಿ ಶ್ರೀಲೀಲಾ ನಟಿಸುತ್ತಿದ್ದಾರೆ.

ಇದನ್ನೂ ಓದಿ :SSMB29: ಎಸ್​ಎಸ್​ಎಂಬಿ 29ಗೆ ಜೊತೆಯಾದ ರಾಜಮೌಳಿ, ಮಹೇಶ್​ ಬಾಬು.. ಆರ್​ಆರ್​ಆರ್​ ಮೀರಿಸಲಿದೆ ಈ ಚಿತ್ರ!!!

ABOUT THE AUTHOR

...view details