ಕರ್ನಾಟಕ

karnataka

ETV Bharat / entertainment

ದಾಖಲೆ ಬರೆದ 'ವೀರ ಸಿಂಹ ರೆಡ್ಡಿ'.. ಒಂದೇ ಥಿಯೇಟರ್​ನಲ್ಲಿ 200 ದಿನ ಪ್ರದರ್ಶನ ಕಂಡ ಬಾಲಯ್ಯ ಸಿನಿಮಾ - ಈಟಿವಿ ಭಾರತ ಕನ್ನಡ

Balakrishna record: ಸುಮಾರು 200 ದಿನಗಳ ಕಾಲ ಒಂದೇ ಚಿತ್ರಮಂದಿರಲ್ಲಿ ದಿನಕ್ಕೆ ನಾಲ್ಕು ಪ್ರದರ್ಶನದಂತೆ ಬಾಲಯ್ಯ ನಟನೆಯ 'ವೀರ ಸಿಂಹ ರೆಡ್ಡಿ' ಸಿನಿಮಾ ಪ್ರದರ್ಶನ ಕಂಡಿದೆ.

tollywood hero balakrishna
ಬಾಲಕೃಷ್ಣ

By

Published : Jul 30, 2023, 7:32 PM IST

2023ರ ಬಹುನಿರೀಕ್ಷಿತ ತೆಲುಗು ಸಿನಿಮಾ 'ವೀರ ಸಿಂಹ ರೆಡ್ಡಿ' ಸಂಕ್ರಾಂತಿ ಸಮಯದಲ್ಲಿ ಬಿಡುಗಡೆಯಾಗಿ ಥಿಯೇಟರ್​ನಲ್ಲಿ ಸದ್ದು ಮಾಡಿತ್ತು. ನಟಸಿಂಹ ನಂದಮೂರಿ ಬಾಲಕೃಷ್ಣ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಟಾಲಿವುಡ್ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಕಲೆಕ್ಷನ್​ ಮಾಡಿತ್ತು. ಬಾಲಯ್ಯ ಡ್ಯುಯೆಲ್​ ರೋಲ್​ನಲ್ಲಿ ಮಿಂಚಿದ್ದ ಈ ಚಿತ್ರ ಮೊದಲ ದಿನವೇ ಒಳ್ಳೆ ಟಾಕ್​ ಪಡೆದು ಹಣದ ಸುರಿಮಳೆಯನ್ನೇ ಹರಿಸಿತ್ತು.​

ದಾಖಲೆ ಬರೆದ 'ವೀರ ಸಿಂಹ ರೆಡ್ಡಿ': ಇತ್ತೀಚೆಗಷ್ಟೇ 'ವೀರ ಸಿಂಹ ರೆಡ್ಡಿ' ಸಿನಿಮಾ ಅಪರೂಪದ ದಾಖಲೆ ಬರೆದಿದೆ. ಸುಮಾರು 200 ದಿನಗಳ ಕಾಲ ಒಂದೇ ಚಿತ್ರಮಂದಿರಲ್ಲಿ ದಿನಕ್ಕೆ ನಾಲ್ಕು ಪ್ರದರ್ಶನದಂತೆ ಸಿನಿಮಾ ಪ್ರದರ್ಶನ ಕಂಡಿದೆ. ಈ ಮೂಲಕ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಬರೆದಿದೆ. ಇದಕ್ಕೆ ಸಾಕ್ಷಿಯಾದದ್ದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆಲೂರಿನಲ್ಲಿರುವ ಎಸ್‌ಎಲ್‌ಎನ್‌ಎಸ್ ಥಿಯೇಟರ್‌. ಜನವರಿ 12 ರಂದು ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರವು ಎಸ್‌ಎಲ್‌ಎನ್‌ಎಸ್ ಥಿಯೇಟರ್​ನಲ್ಲಿ ಏಪ್ರಿಲ್ 21 ರಂದು 100 ದಿನಗಳ ಗಡಿ ದಾಟಿದೆ. ಕಳೆದ ಶುಕ್ರವಾರ 200 ದಿನಗಳನ್ನು ಪೂರೈಸಿದೆ.

ನಂದಮೂರಿ ಬಾಲಕೃಷ್ಣ ಅವರಿಗೆ ಇಂತಹ ದಾಖಲೆಗಳೇನು ಹೊಸತಲ್ಲ. ಅವರು ನಟಿಸಿದ ಅನೇಕ ಸಿನಿಮಾಗಳು ದಾಖಲೆಯನ್ನು ಬರೆದಿವೆ. ಹಾಗಾಗಿ ಈ ಪಟ್ಟಿಯಲ್ಲಿ ಒಂದಲ್ಲ, ಎರಡಲ್ಲ 'ವೀರ ಸಿಂಹ ರೆಡ್ಡಿ' ಸೇರಿದಂತೆ ಆರು ಚಿತ್ರಗಳಿವೆ. ಅವುಗಳಲ್ಲಿ 'ಮಂಗಮ್ಮ ಗರಿ ಮನವಡು', 'ಲೆಜೆಂಡ್', 'ಸಿಂಹ', 'ನರಸಿಂಹ ನಾಯ್ಡು', 'ಸಮರ ಸಿಂಹ ರೆಡ್ಡಿ' ಚಿತ್ರ ಸುಮಾರು 200 ದಿನಗಳ ಕಾಲ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಓರ್ವ ನಟನ ಚಿತ್ರ ಒಂದೇ ಥಿಯೇಟರ್​ನಲ್ಲಿ 200 ದಿನ ಪ್ರದರ್ಶನ ಕಾಣುತ್ತಿರುವುದು ಅಪರೂಪದ ದಾಖಲೆಯೇ ಸರಿ. ಈ ಅಪರೂಪದ ಸಾಧನೆ ಮಾಡಿರುವುದು ಬಾಲಯ್ಯ ಅನ್ನೋದು ಮತ್ತೊಂದು ಹೆಮ್ಮೆಯ ವಿಚಾರ.

ಇದನ್ನೂ ಓದಿ:ವಧುವಿನಂತೆ ಕಂಗೊಳಿಸುತ್ತಿರುವ ಮೃಣಾಲ್​ ಠಾಕೂರ್​; ಕ್ಯಾಪ್ಶನ್​ ನೋಡಿ ಫ್ಯಾನ್ಸ್​ ಶಾಕ್​!

ಬಾಲಯ್ಯ ಮುಂದಿನ ಸಿನಿಮಾ: ನಂದಮೂರಿ ಬಾಲಕೃಷ್ಣ ನಟನೆಯ ಮುಂದಿನ ಚಿತ್ರ 'ಭಗವಂತ ಕೇಸರಿ'. ಈ ಸಿನಿಮಾಗೆ ಪ್ರಾರಂಭದಲ್ಲಿ NBK108 ಟೈಟಲ್​ ಇಡಲಾಗಿತ್ತು. ಅನಿಲ್ ರವಿಪುಡಿ ನಿರ್ದೇಶನದಲ್ಲಿ 'ಭಗವಂತ ಕೇಸರಿ' ಮೂಡಿಬರುತ್ತಿದೆ. ದಸರಾ ಪ್ರಯುಕ್ತ ಅಕ್ಟೋಬರ್​ 19 ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಅದ್ಧೂರಿ ಆ್ಯಕ್ಷನ್ ಎಂಟರ್‌ಟೈನ್‌ಮೆಂಟ್ ಆಗಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಬಾಲಯ್ಯ ಹಿರಿಯ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಬಾಲಯ್ಯ ಜೊತೆ ನಟಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್​ನ ಮೊದಲ ಚಿತ್ರವಿದು. ಬಾಲಯ್ಯ ಮತ್ತು ಶ್ರೀಲೀಲಾ ತಂದೆ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಖ್ಯಾತ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ವಿಲನ್​ ಪಾತ್ರ ಮಾಡಲಿದ್ದಾರೆ. ಶೈನ್ ಸ್ಕ್ರೀನ್ ಬ್ಯಾನರ್ ಅಡಿ ಹರೀಶ್ ಪೆದ್ದಿ ಮತ್ತು ಸಾಹು ಗರಪಾಟಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ:RARKPK ಸಿನಿಮಾದ 'ವಾಟ್ ಜುಮ್ಕಾ' ಹಾಡಿಗೆ ದೀಪ್​ವೀರ್​ ದಂಪತಿ ಡ್ಯಾನ್ಸ್​; ನೀವೂ ನೋಡಿ..

ABOUT THE AUTHOR

...view details