ಶೂಟಿಂಗ್ ಸಂದರ್ಭದಲ್ಲಿ ಬಾಹುಬಲಿ ಖ್ಯಾತಿಯ ನಟ ನಾಜರ್ ಗಾಯಗೊಂಡಿದ್ದಾರೆ. ಚಿತ್ರೀಕರಣ ನಡೆಯುತ್ತಿದ್ದಾಗ ಮೆಟ್ಟಿಲು ಇಳಿಯುತ್ತಿದ್ದ ಸಂದರ್ಭ ಕಾಲು ಜಾರಿ ಕೆಳಗೆ ಬಿದ್ದಿದ್ದು, ಎಡಗಣ್ಣಿನ ಕೆಳಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಶೂಟಿಂಗ್ ವೇಳೆ ಬಾಹುಬಲಿ ಬಿಜ್ಜಳದೇವ ಖ್ಯಾತಿಯ ನಟ ನಾಜರ್ಗೆ ಗಾಯ - Etv bharat kannada
ಸಿನಿಮಾ ಚಿತ್ರೀಕರಣದ ವೇಳೆ ಖ್ಯಾತ ನಟ ನಾಜರ್ಗೆ ಗಾಯವಾಗಿದ್ದು, ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ.
Tollywood Film actor Nazar
ಹೈದರಾಬಾದ್ನ ನರಸಿಂಗಿ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸ್ ಅಕಾಡೆಮಿ ಆವರಣದಲ್ಲಿ ಘಟನೆ ನಡೆದಿದೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ನಟ ಮನೆಗೆ ತೆರಳಿದ್ದಾರೆಂದು ಹೇಳಲಾಗಿದೆ. ತಮಿಳು ಸಿನಿಮಾದ ಒಟಿಟಿ ಶೂಟಿಂಗ್ನಲ್ಲಿ ಅವರು ಭಾಗಿಯಾಗಿದ್ದರು.
ಕನ್ನಡ, ಹಿಂದಿ ಸೇರಿದಂತೆ ಬಹುತೇಕ ಎಲ್ಲ ಭಾಷೆಯ ಚಿತ್ರಗಳಲ್ಲೂ ನಟಿಸಿರುವ ನಾಜರ್, ವಿಶಿಷ್ಟ ಪಾತ್ರಗಳು ಹಾಗೂ ಅಭಿನಯದ ಮೂಲಕ ಜನಮೆಚ್ಚುಗೆ ಗಳಿಸಿದ್ದಾರೆ. ರಾಜಮೌಳಿ ನಿರ್ದೇಶನದ 'ಬಾಹುಬಲಿ'ಯಲ್ಲಿ ಇವರ ಬಿಜ್ಜಳದೇವನ ಪಾತ್ರ ಸಿನಿರಸಿಕರ ಮೆಚ್ಚುಗೆ ಗಳಿಸಿತ್ತು.