ಸ್ಯಾಂಡಲ್ವುಡ್ನ ಕಿಚ್ಚ ಸುದೀಪ್ ಮತ್ತು ಬಾಲಿವುಡ್ನ ಅಜಯ್ ದೇವಗನ್ ನಡುವಿನ 'ರಾಷ್ಟ್ರಭಾಷೆ' ವಿಚಾರದ ಬಗೆಗಿನ ಚರ್ಚೆ ಮುಂದುವರೆದಿದೆ. ಕನ್ನಡಿಗರು ಮಾತ್ರವಲ್ಲದೇ ದಕ್ಷಿಣ ಭಾರತದ ಸಿನಿಮಾಗಳ ಸೆಲೆಬ್ರಿಟಿಗಳೂ ಕೂಡಾ ಅಜಯ್ ದೇವಗನ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈಗ ಸುದೀಪ್ ಪರ ದಕ್ಷಿಣದ ನಿರ್ದೇಶಕ, ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಕೂಡಾ ಟ್ವಿಟರ್ನಲ್ಲಿ ಬ್ಯಾಟ್ ಬೀಸಿದ್ದಾರೆ.
'ಸತ್ಯವನ್ನು ಯಾರೂ ನಿರಾಕರಿಸಲಾಗದು ಸುದೀಪ್ ಸರ್. ಉತ್ತರ ಭಾರತದ ನಟ ಮತ್ತುನಟಿಯರು, ದಕ್ಷಿಣ ಭಾರತದ ನಟ ಮತ್ತು ನಟಿಯರ ಬಗ್ಗೆ ಭಯ ಮತ್ತು ಅಸೂಯೆ ಹೊಂದಿದ್ದಾರೆ. ಏಕೆಂದರೆ, ಕನ್ನಡದಿಂದ ಡಬ್ ಆದ 'ಕೆಜಿಎಫ್–2' ಮೊದಲ ದಿನವೇ 50 ಕೋಟಿ ರೂಪಾಯಿ ಗಳಿಸಿದೆ. ಹಿಂದಿ ಸಿನಿಮಾಗಳ ಆರಂಭಿಕ ದಿನಗಳನ್ನು ನಾವೆಲ್ಲರೂ ನೋಡಲಿದ್ದೇವೆ ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
ಇದರೊಂದಿಗೆ ಮತ್ತಷ್ಟು ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ ನೀವು ಈ ಹೇಳಿಕೆಯನ್ನು ಉದ್ದೇಶ ಪೂರ್ವಕವಾಗಿ ನೀಡಿದ್ದರೂ, ನೀಡದಿದ್ದರೂ, ಈ ಹೇಳಿಕೆಯಿಂದ ಸಂತೋಷವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಾಲಿವುಡ್ ಮತ್ತು ಸ್ಯಾಂಡಲ್ವುಡ್ ಎರಡೂ ಕೂಡಾ ಶಾಂತವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ. ಅಜಯ್ ದೇವಗನ್ ಅವರ ರನ್ವೇ 34 ಸಿನಿಮಾ ಕನ್ನಡದಲ್ಲಿ ಮತ್ತು ಹಿಂದಿಯಲ್ಲಿ ಎಷ್ಟು ಚಿನ್ನ ಇದೆ ಎಂಬುದನ್ನು ಸಾಬಿತುಪಡಿಸಲಿವೆ ಎಂದು ರಾಮ್ಗೋಪಾಲ್ ವರ್ಮಾ ಮಾರ್ಮಿಕವಾಗಿ ನುಡಿದಿದ್ದಾರೆ.
ಗಾಯಕಿ ಚಿನ್ಮಯಿ ಶ್ರೀಪಾದ ಅವರೂ ಅಜಯ್ ದೇವಗನ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದು, ರಾಜ ಭಾಷೆ, ರಾಷ್ಟ್ರ ಭಾಷೆಯಾಗುವುದಿಲ್ಲ ಸಾರ್. ಹಿಂದಿ ಭಾಷೆ ರಾಷ್ಟ್ರ ಭಾಷೆ ಎಂಬುದು ಏಕೆ ಪುನರಾವರ್ತನೆಯಾಗುತ್ತಿದೆ? ಎಲ್ಲರೂ ಅವಶ್ಯಕತೆ ಇದ್ದರೆ ಅಥವಾ ಇಷ್ಟಪಟ್ಟರೆ ಭಾಷೆಯನ್ನು ಕಲಿಯುತ್ತಾರೆ ಅಥವಾ ಬಹುಭಾಷಿಕರಾಗಲು ಕಲಿಯುತ್ತಾರೆ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ: ಸುದೀಪ್ ಮಾತಿಗೆ ಧ್ವನಿಗೂಡಿಸಿದ ಕನ್ನಡ ತಾರೆಯರು