ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ತೂ ಜೂಟಿ ಮೇ ಮಕ್ಕರ್ ಚಿತ್ರವು ಸಿನಿ ಪ್ರೇಕ್ಷಕರಿಂದ ಸಕಾರಾತ್ಮಕ ಅಭಿಪ್ರಾಯವನ್ನು ಗಳಿಸಿದೆ. ಜೊತೆಗೆ ಬಿಡುಗಡೆಯಾದ ಮೊದಲ ದಿನದಿಂದಲೂ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಚಿತ್ರವು 8 ದಿನಗಳಲ್ಲಿ 80 ಕೋಟಿ ರೂಪಾಯಿಯನ್ನು ಕಲೆಕ್ಷನ್ ಮಾಡಿದೆ. ಟಿಜೆಎಂಎಂ 100 ಕೋಟಿ ಕ್ಲಬ್ನತ್ತ ದಾಪುಗಾಲು ಹಾಕುತ್ತಿದ್ದು, ಈ ವರ್ಷದ ಮೆಗಾ ಹಿಟ್ ಸಿನಿಮಾ ಪಠಾಣ್ ನಂತರ ಇದು ಎರಡನೇ ಚಿತ್ರವಾಗಲಿದೆ.
ಬಿಡುಗಡೆಯಾದ ಎಂಟನೇ ದಿನದಲ್ಲಿ, ಕೊಂಚ ನಿಧಾನಗತಿಯಲ್ಲಿ ಚಿತ್ರ ಓಡಿದರೂ 5.60 ಕೋಟಿ ಗಳಿಸಿದೆ. ಆದರೆ ತೂ ಜೂಟಿ ಮೇ ಮಕ್ಕರ್ ಬಿಡುಗಡೆಯಾದ ಆರಂಭದಲ್ಲಿ ಅದ್ಭುತವಾಗಿ ಚಿತ್ರಮಂದಿರಗಳಲ್ಲಿ ಓಡಿದೆ. ಅಲ್ಲದೇ ಮೊದಲ ವಾರಾಂತ್ಯದಲ್ಲಿಯೇ ಸುಮಾರು 70 ಕೋಟಿ ರೂಪಾಯಿಯನ್ನು ಗಳಿಸಿದೆ. ಚಿತ್ರ ವಾರದ ದಿನಗಳಲ್ಲಿ ಕೊಂಚ ನಿಧಾನಗತಿಯಲ್ಲಿ ಓಡುತ್ತಿದ್ದರೂ ಸಹ ಈ ವಾರಾಂತ್ಯದ ವೇಳೆಗೆ 100 ಕೋಟಿ ಕ್ಲಬ್‌ಗೆ ಪ್ರವೇಶಿಸಲಿದ್ದು, ಪಠಾಣ್ ನಂತರ ಈ ವರ್ಷ ಶತಕದ ಮೈಲಿಗಲ್ಲನ್ನು ಸಾಧಿಸಿದ ಎರಡನೇ ಚಿತ್ರ ಟಿಜೆಎಂಎಂ ಆಗಲಿದೆ.
ಎಂಟನೇ ದಿನದಂದು ರಣಬೀರ್, ಶ್ರದ್ಧಾ ಅಭಿನಯದ ಈ ಚಿತ್ರ 5.60 ಕೋಟಿ ರೂಪಾಯಿ ಗಳಿಸುವುದರೊಂದಿಗೆ ಟಿಜೆಎಂಎಂ ಒಟ್ಟಾರೆ ಗಳಿಕೆ 87.91 ಕೋಟಿ ರೂ.ಗೆ ಏರಿಕೆಯಾಗಿದೆ. ಚಲನಚಿತ್ರವು ಎಷ್ಟು ಬೇಗನೆ ಹಣವನ್ನು ಗಳಿಸುತ್ತಿದೆ ಎಂಬುದನ್ನು ಪರಿಗಣಿಸಿದರೆ, ಇದು ಶೀಘ್ರದಲ್ಲೇ ಗಲ್ಲಾ ಪೆಟ್ಟಿಗೆಯಲ್ಲಿ ಶತಕ ಬಾರಿಸಲಿದೆ ಎಂದು ಅಂದಾಜಿಸಲಾಗಿದೆ. ಮೊದಲ ದಿನವೇ ಈ ಸಿನಿಮಾ 3,302 ಪರದೆಗಳಲ್ಲಿ ಪ್ರದರ್ಶನ ಕಂಡಿದೆ. ಜೊತೆಗೆ ಶ್ರದ್ಧಾ ಮತ್ತು ರಣ್ಬೀರ್ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರೊಮ್ಯಾಂಟಿಕ್, ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್ಟೈನ್ಮೆಂಟ್ನ ಪರಿಪೂರ್ಣ ಮಿಶ್ರಣ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ.