ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ಮುಂಬರುವ ಚಿತ್ರದ ಶೀರ್ಷಿಕೆಯು ನಾಳೆ ಬಿಡುಗಡೆಗೊಳ್ಳಲಿದೆ. ಶ್ರದ್ಧಾ ಕಪೂರ್ ಟೈಟಲ್ ಟೀಸರ್ನ ಪೋಸ್ಟ್ ಹಾಕಿಕೊಂಡಿದ್ದು, ಈ ಚಿತ್ರದ ಶೀರ್ಷಿಕೆ ಏನು?.. ಗೆಸ್ ಮಾಡಿ ಅಂತ ಅಭಿಮಾನಿಗಳಿಗೆ ಟಾಸ್ಕ್ವೊಂದನ್ನು ನೀಡಿದ್ದಾರೆ.
ಚಿತ್ರದ ಟೀಸರ್ನಲ್ಲಿ ಟಿಜೆಎಂಎಂ (TJMM) ಅಂತ ಬರೆದುಕೊಂಡಿದೆ. ಈ ಟೈಟಲ್ ಅನ್ನು ಭೇದಿಸಲು ಶ್ರದ್ಧಾ ಅಭಿಮಾನಿಗಳ ತಲೆಗೆ ನೇರ ಕೈ ಹಾಕಿದ್ದಾರೆ. ಇದಕ್ಕೆ ಆಲಿಯಾ ಭಟ್ ಉತ್ತರಿಸಲು ಪ್ರಯತ್ನಿಸಿದ್ದು, ’ಟಿಂಗಲ್ ಜಿಂಗಲ್ ಮಿಂಗಲ್ ಮಿಂಗಲ್’ ಅಂತ ತಮಾಷೆಯಾಗಿ ಬರೆದು ಸ್ಟೋರಿ ಹಾಕಿಕೊಂಡಿದ್ದಾರೆ.