ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಆಧಾರಿತ ದಿ ಬೆಸ್ಟ್ ಸಿನಿಮಾಗಳ ಜೊತೆ ಜೊತೆಗೆ ಸಾಕಷ್ಟು ಪ್ರತಿಭೆ ಇರುವ ನಿರ್ದೇಶಕರು ಹಾಗೂ ನಟರ ಆಗಮನವಾಗುತ್ತಿದೆ. ಇದೀಗ 'ತಿಮ್ಮನ ಮೊಟ್ಟೆಗಳು' ಎಂಬ ಕುತೂಹಲಕಾರಿ ಟೈಟಲ್ನ ಸಿನಿಮಾದೊಂದಿಗೆ ಯುವ ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಶೃಂಗೇರಿಯ ರಂಗ ಪ್ರತಿಭೆ ಕೇಶವ್ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಖರ್, ಶೃಂಗೇರಿ ರಾಮಣ್ಣ, ರಾಘು ರಾಮನಕೊಪ್ಪ ಮುಖ್ಯ ಭೂಮಿಕೆಯಲ್ಲಿರೋ 'ತಿಮ್ಮನ ಮೊಟ್ಟೆಗಳು' ಚಿತ್ರದ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.
ಕಾಡಿನ ನೆಂಟರು ಕಥಾ ಸಂಕಲನದಿಂದ ಆಯ್ದ ಕಥೆ: ತಿಮ್ಮನ ಮೊಟ್ಟೆಗಳು ಸಿನಿಮಾ ಸೆನ್ಸಾರ್ ಮಂಡಳಿಯ ಪರೀಕ್ಷೆಯಲ್ಲಿ ಪಾಸಾಗಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಯು' ಸರ್ಟಿಫಿಕೇಟ್ ಕೊಟ್ಟಿದೆ. ನಿರ್ದೇಶಕ ರಕ್ಷಿತ್ ಬರೆದ ಕಾಡಿನ ನೆಂಟರು ಎಂಬ ಕಥಾ ಸಂಕಲನದಿಂದ ಆಯ್ದ ಕಥೆಯೇ 'ತಿಮ್ಮನ ಮೊಟ್ಟೆಗಳು' ಸಿನಿಮಾವಾಗಿದೆ.
ಮಲೆನಾಡಿನಲ್ಲಿ ತಿಮ್ಮನ ಮೊಟ್ಟೆಗಳು ಶೂಟಿಂಗ್: ಮನುಷ್ಯನ ನಂಬಿಕೆ ಮತ್ತು ಆತನ ಆಚರಣೆಗಳ ಮೇಲೆ ಕೇಂದ್ರೀಕೃತವಾಗಿರುವ ಕಥಾವಸ್ತುವನ್ನು ಈ ಸಿನಿಮಾ ಒಳಗೊಂಡಿದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗದ ಸುತ್ತಲಿನ ಹಲವು ಸುಂದರ ಜಾಗಗಳಲ್ಲಿ 'ತಿಮ್ಮನ ಮೊಟ್ಟೆಗಳು' ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ.
ತಿಮ್ಮನ ಮೊಟ್ಟೆಗಳು ಕಲಾವಿದರು: ಈ ಚಿತ್ರದಲ್ಲಿ ಶೃಂಗೇರಿಯ ರಂಗ ಪ್ರತಿಭೆ ಕೇಶವ್ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಖರ್, ಶೃಂಗೇರಿ ರಾಮಣ್ಣ, ರಾಘು ರಾಮನಕೊಪ್ಪ ಅಲ್ಲದೇ ಪ್ರಗತಿ ಪ್ರಭು, ಮಾಸ್ಟರ್ ಹರ್ಷ, ವಿನಯ್ ಕಣಿವೆ ಸೇರಿದಂತೆ ಮೊದಲಾದವರು ನಟಿಸಿದ್ದಾರೆ.