ಮರಿ ಟೈಗರ್ ವಿನೋದ್ ಪ್ರಭಾಕರ್ ಮತ್ತು ಸೌಂದರ್ಯ ಜಯಮಾಲಾ ಇಬ್ಬರು ಕೂಡ ಕನ್ನಡ ಚಿತ್ರರಂಗದ ತಾರೆಯರು. ಅದೆಲ್ಲದಕ್ಕಿಂತಲೂ ಮೀರಿದ ಸಂಬಂಧ ಇವರಿಬ್ಬರಿಗಿದೆ. ಅಣ್ಣ- ತಂಗಿಯಾಗಿದ್ದರೂ ಸಹ ವಿನೋದ್ ಮತ್ತು ಸೌಂದರ್ಯ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಮಾಧ್ಯಮಕ್ಕೆ ತಿಳಿಯುವಂತೆ ಎಂದಿಗೂ ಒಬ್ಬರನೊಬ್ಬರು ಭೇಟಿಯೂ ಆಗಿಲ್ಲ.
ಅಂತಹ ಸಂದರ್ಭಗಳು ಇವರಿಬ್ಬರಿಗೂ ಒದಗಿ ಬಂದಿಲ್ಲ ಅಂತೇನಿಲ್ಲ. ಒಟ್ಟಿಗೆ ಆಡುತ್ತಾ ಬೆಳೆದ ಈ ಅಣ್ಣ ತಂಗಿ ಕೆಲವು ಸಂದರ್ಭ ಸನ್ನಿವೇಶಕ್ಕೆ ಸಿಲುಕಿ ದೂರವಾಗಿಬಿಟ್ಟಿದ್ದರಷ್ಟೇ. ಆದರೆ ಜನರು ಮಾತನಾಡಿಕೊಳ್ಳುವ ಆಳಕ್ಕೆ ಇವರಿಬ್ಬರ ಸಂಬಂಧ ಹಾಳಾಗಿಲ್ಲ. ವಿನೋದ್ ಪ್ರಭಾಕರ್ ಮತ್ತು ಸೌಂದರ್ಯ ಜಯಮಾಲಾ ಇಂದಿಗೂ ಅದೇ ಅಣ್ಣ ತಂಗಿ ಬಾಂಧವ್ಯವನ್ನೇ ಇಟ್ಟುಕೊಂಡಿದ್ದಾರೆ.
ಆದರೆ ಅವರ ಅಕ್ಕ ಪಕ್ಕದವರೇ ಅವರಿಬ್ಬರು ಭೇಟಿಯಾಗದಂತೆ ನೋಡಿಕೊಂಡಿದ್ದರು ಅನ್ನೋದೇ ವಿಪರ್ಯಾಸ. ಈಗ ಸಮಯ, ಸಂದರ್ಭ ಅವರಿಬ್ಬರನ್ನು ಮತ್ತೆ ಒಂದಾಗುವಂತೆ ಮಾಡಿದೆ. ಮೊನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಆರತಕ್ಷತೆಯಲ್ಲಿ ವಿನೋದ್ ಪ್ರಭಾಕರ್ ಮತ್ತು ಸೌಂದರ್ಯ ಜಯಮಾಲಾ ಮುಖಾಮುಖಿಯಾಗಿದ್ದರು.
ಇದನ್ನೂ ಓದಿ:On Father's Day.. ಪತ್ನಿ ಪ್ರಿಯಾಂಕಾ ಚೋಪ್ರಾ ಜೊತೆಗೆ ಫಾದರ್ಸ್ ಡೇ ಆಚರಣೆ; ನಿಕ್ ನೀಡಿದ ಕಾರಣ ಇದು!
ಬಹಳ ವರ್ಷಗಳ ನಂತರ ತಂಗಿಯನ್ನು ನೋಡಿದ ಖುಷಿಯಲ್ಲಿ ವಿನೋದ್ ಮತ್ತು ಅಣ್ಣನನ್ನು ನೋಡಿದ ಸಂತೋಷದಲ್ಲಿ ಸೌಂದರ್ಯ ಮೈಮರೆತಿದ್ದರು. ಭೇಟಿಯಾದ ಆ ಸುಂದರ ಕ್ಷಣದಲ್ಲಿ ಅವರಿಬ್ಬರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ಒಂದಷ್ಟು ಸಮಯ ಜೊತೆಯಾಗಿ ನಿಂತು ಮಾತನಾಡಿದ್ದರು. ಅಣ್ಣನ ಪತ್ನಿ ನಿಶಾ ವಿನೋದ್ ಪ್ರಭಾಕರ್ ಜೊತೆಯೂ ಕೆಲ ಹೊತ್ತು ಕುಶಲೋಪರಿ ನಡೆಸಿದ್ದರು.
ಜೊತೆಗೆ ಮೂವರು ಕೊಂಚ ಕಾಲ ಖುಷಿಯಿಂದ ಕಾಲ ಕಳೆದು ಫೋಟೋಗೆ ಪೋಸ್ ಕೊಟ್ಟರು. ಇವರ ಅಪರೂಪದ ಕ್ಷಣದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದ್ದು, ಕನ್ನಡಿಗರ ಮೆಚ್ಚುಗೆಯನ್ನು ಪಡೆದುಕೊಂಡಿವೆ. ಮರಿಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಜಯಮಾಲಾ ನಡುವೆ ಅಣ್ಣ ತಂಗಿಯ ಬಾಂಧವ್ಯ ಹೀಗೆ ಗಟ್ಟಿಯಾಗಿರಲಿ ಅನ್ನೋದು ಅಭಿಮಾನಿಗಳ ಆಶಯ.
'ಲಂಕಾಸುರ'ನಾಗಿ ವಿನೋದ್ ಪ್ರಭಾಕರ್:ನಟ ವಿನೋದ್ ಪ್ರಭಾಕರ್ ಲಂಕಾಸುರ ಸಿನಿಮಾ ಮಾಡುತ್ತಿದ್ದಾರೆ. ಚಿತ್ರವನ್ನು ಪ್ರಮೋದ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಸಿನಿಮಾಗೆ ಛಾಯಾಗ್ರಾಹಕ ಸುಜ್ಞಾನ್ ಕ್ಯಾಮರಾ ವರ್ಕ್ ಇದ್ದು, ನೃತ್ಯ ನಿರ್ದೇಶಕ ಭಜರಂಗಿ ಮೋಹನ್ ಈ ಸಿನಿಮಾಗೆ ಕೋರಿಯೋಗ್ರಾಫಿ ಮಾಡಿದ್ದಾರೆ. ಟೈಗರ್ ಟಾಕೀಸ್ ಮೂಲಕ ವಿನೋದ್ ಪ್ರಭಾಕರ್ ಹಾಗೂ ನಿಶಾ ವಿನೋದ್ ಪ್ರಭಾಕರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಇತ್ತೀಚೆಗಷ್ಟೇ ಸಿನಿಮಾದ ಮಾರ್ಡನ್ ಮಹಾಲಕ್ಷ್ಮಿ ಹಾಡು ಬಿಡುಗಡೆಯಾಗಿದೆ. ಹಾಡನ್ನು ಬಹದ್ದೂರ್ ಚೇತನ್ ಕುಮಾರ್ ಬರೆದಿದ್ದು, ಸಂಗೀತ ನಿರ್ದೇಶಕ ವಿಜೇತ್ ಕೃಷ್ಣ ಕ್ಯಾಚೀ ಟ್ಯೂನ್ ಹಾಕಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎಲ್ಲಾ ಹಾಡುಗಳನ್ನು ಚೇತನ್ ಕುಮಾರ್ ಬರೆದಿದ್ದಾರೆ.
ಇದನ್ನೂ ಓದಿ:Exclusive Interview: ರಾಜಾ ಪೃಥು ರಾಯ್ ಪಾತ್ರಕ್ಕೆ ಜೀವ ತುಂಬಲಿದ್ದಾರಾ ಶಾಹಿದ್ ಕಪೂರ್? ನಿರ್ದೇಶಕ ವ್ಯಾಸ್ ಹೇಳಿದ್ದೇನು?