ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಮತ್ತು ನಟಿ ಕತ್ರಿನಾ ಕೈಫ್ ತೆರೆ ಹಂಚಿಕೊಂಡಿರುವ ಚಿತ್ರ 'ಟೈಗರ್ 3'. ಮುಂದಿನ ತಿಂಗಳು ತೆರೆ ಕಾಣಲಿರುವ ಬಹುನಿರೀಕ್ಷಿತ ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ (YRF) ಯೂಟ್ಯೂಬ್ ಚಾನೆಲ್ನಲ್ಲಿ ಟ್ರೇಲರ್ ಹಂಚಿಕೊಳ್ಳಲಾಗಿದ್ದು, 3 ಗಂಟೆಯಲ್ಲಿ 5 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.
ಮನೀಶ್ ಶರ್ಮಾ ನಿರ್ದೇಶನದ 'ಟೈಗರ್ 3' ಅನ್ನು ಯಶ್ ರಾಜ್ ಫಿಲ್ಮ್ಸ್ ಮೂಲಕ ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ವಾರ್ ಮತ್ತು ಪಠಾಣ್ ಬಳಿಕ ಬಿಡುಗಡೆ ಆಗುತ್ತಿರುವ ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಸ್ಪೈ ಯೂನಿವರ್ಸ್‌ನಲ್ಲಿ ಐದನೇ ಚಿತ್ರ ಇದು. 'ಪಠಾಣ್' ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ಸಲ್ಮಾನ್ ಖಾನ್ ಅತಿಥಿ ಪಾತ್ರ ಮಾಡಿದ್ದರು. ಇದೀಗ ಟೈಗರ್ 3ನಲ್ಲಿ ಕಿಂಗ್ ಖಾನ್ ಎಂಟ್ರಿಯೂ ಇರಲಿದೆ.
ಟ್ರೇಲರ್ ಹೇಗಿದೆ?: ಸದ್ಯ ಬಿಡುಗಡೆ ಆಗಿರುವ ಟ್ರೇಲರ್ ಸಖತ್ ಆಕ್ಷನ್ ಥ್ರಿಲ್ಲರ್ ಆಗಿದೆ. ಹ್ಯಾಪಿ, ಫೈಟಿಂಗ್, ಎಮೋಷನಲ್, ಫ್ಯಾಮಿಲಿ ಸೆಂಟಿಮೆಂಟ್ ಎಲ್ಲವನ್ನೂ 3 ನಿಮಿಷದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಚಿತ್ರತಂಡ ತುಂಬಾ ಚೆನ್ನಾಗಿಯೇ ಮಾಡಿದೆ. ಸಲ್ಮಾನ್ ಖಾನ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದ ಅತ್ಯುತ್ತಮ ಏಜೆಂಟ್ ಆಗಿ ತನ್ನ ಕುಟುಂಬ ಮತ್ತು ದೇಶವನ್ನು ಕಾಪಾಡಿಕೊಳ್ಳುವ ರೀತಿಯನ್ನು ಆಕರ್ಷಕವಾಗಿದೆ. ಕತ್ರಿನಾ ಕೈಫ್ ಅವರನ್ನು ಕೂಡ ಆ್ಯಕ್ಷನ್ ಸೀನ್ಗಳಲ್ಲಿ ತೋರಿಸಿರುವುದು ತುಂಬಾ ಯುನಿಕ್ ಆಗಿದೆ. ಇಮ್ರಾನ್ ಹಶ್ಮಿ ಅವರು ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ಅದ್ಭುತವಾಗಿ ಮೂಡಿ ಬಂದಿದ್ದು, ಚಿತ್ರದ ಮೇಲಿನ ಕುತೂಹಲ ಹೆಚ್ಚಿಸಿದೆ.