ಭಾರತೀಯ ಸಿನಿಮಾ ಕ್ಷೇತ್ರದ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಬಹುಬೇಡಿಕೆ ನಟಿ ಕತ್ರಿನಾ ಕೈಫ್, ಬಹುಸಮಯದಿಂದ ಹಿಂದಿ ಚಿತ್ರರಂಗದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿರೋ ನಟ ಇಮ್ರಾನ್ ಹಶ್ಮಿ ನಟನೆಯ ''ಟೈಗರ್ 3'' ಸಿನಿಮಾ 2023ರ ಬಹುನಿರೀಕ್ಷಿತ ಚಿತ್ರ. ಸಿನಿಮಾ ಪ್ರಮೋಶನ್ ಈಗಾಗಲೇ ಆರಂಭಗೊಂಡಿದೆ. ಪ್ರತೀ ವಾರವೂ ಚಿತ್ರಕ್ಕೆ ಸಂಬಂಧಿಸಿದ ಅಪ್ಡೇಟ್ಸ್ ಹಂಚಿಕೊಳ್ಳುವ ಮೂಲಕ ಚಿತ್ರತಂಡ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಟೈಗರ್ ಈಸ್ ಬ್ಯಾಕ್: ಇದೀಗ ''ಟೈಗರ್ ಈಸ್ ಬ್ಯಾಕ್'' ಶೀರ್ಷಿಕೆಯಡಿ ಹೊಸ ಪ್ರಮೋಶಲ್ ವಿಡಿಯೋವನ್ನು ಅನಾವರಣಗೊಳಿಸಲಾಗಿದೆ. ಆ್ಯಕ್ಷನ್ ಪ್ಯಾಕ್ಡ್ ಥ್ರಿಲ್ಲರ್ ಸಿನಿಮಾ ದೀಪಾವಳಿ ಸಂದರ್ಭ ಬಿಡುಗಡೆಯಾಗಲಿದ್ದು, ಇಂದು ಅನಾವರಣಗೊಂಡಿರುವ ಪ್ರಮೋಶಲ್ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.
ಪ್ರೇಕ್ಷಕರನ್ನು ಕುತೂಹಲ ಲೋಕಕ್ಕೆ ತಳ್ಳಿದ ಪ್ರೋಮೋ: ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್ ಸರಣಿಯ ಮುಂದಿನ ಇನ್ಸ್ಟಾಲ್ಮೆಂಟ್ 'ಟೈಗರ್ 3'. ಸಿನಿಮಾದ ಕ್ರೇಜ್ ಮುಗಿಲೆತ್ತರಕ್ಕೆ ತಲುಪಿದೆ. ಟೀಸರ್, ಟ್ರೇಲರ್ ಮತ್ತು ಮೊದಲ ಹಾಡು ಬಿಡುಗಡೆ ಆಗಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಅಭಿಮಾನಿಗಳ ನಿರೀಕ್ಷೆ, ಕುತೂಹಲ ಹೆಚ್ಚಿಸುವ ನಿಟ್ಟಿನಲ್ಲಿ ಚಿತ್ರದ ಹೊಸ ಪ್ರೋಮೋವನ್ನು ಅನಾವರಣಗೊಳಿಸಲಾಗಿದೆ. ಮನೀಶ್ ಶರ್ಮಾ ನಿರ್ದೇಶನದ ಚಿತ್ರದಲ್ಲಿನ ಹೈ ಆ್ಯಕ್ಷನ್ ಸೀಕ್ವೆನ್ಸ್, ನಾಯಕನಟ ಮತ್ತು ಎದುರಾಳಿ ನಡುವಿನ ಮುಖಾಮುಖಿ ದೃಶ್ಯಗಳು ಪ್ರೇಕ್ಷಕರನ್ನು ಕುತೂಹಲ ಲೋಕಕ್ಕೆ ತಳ್ಳಿದೆ.
ಅದ್ಭುತ ಆ್ಯಕ್ಷನ್ ಸೀನ್ಗಳು:ಸಿನಿಮಾ ಪ್ರಮೋಶನ್ ಭಾಗವಾಗಿ ಚಲನಚಿತ್ರ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ (YRF) ಇಂದು ಅನಾವರಣಗೊಳಿಸಿರುವ 50 ಸೆಕೆಂಡುಗಳ ವಿಡಿಯೋ ಬಹಳ ರೋಮಾಂಚಕಾರಿಯಾಗಿದೆ. ಅದ್ಭುತ ಆ್ಯಕ್ಷನ್ ಸೀನ್ಗಳನ್ನು ಕಾಣಬಹುದು. ಸಲ್ಮಾನ್ ಖಾನ್ ಮತ್ತು ಇಮ್ರಾನ್ ಹಶ್ಮಿ ಮುಖಾಮುಖಿ ದೃಶ್ಯ ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಇಮ್ರಾನ್ ಹಶ್ಮಿ ಪಾತ್ರವು ಟೈಗರ್ ಪಾತ್ರಧಾರಿ ಸಲ್ಮಾನ್ನ ರಾಷ್ಟ್ರವನ್ನು ಗುರಿಯಾಗಿಸಿರುವುದು ವಿಡಿಯೋದಲ್ಲಿ ಬಯಲಾಗಿದ್ದು, ಕಥಾಹಂದರದ ಮೇಲಿನ ನಿರೀಕ್ಷೆ ಹೆಚ್ಚಿದೆ.
ಇದನ್ನೂ ಓದಿ:ವಾ ವಾ ವೂಂ: ಎಸ್ಆರ್ಕೆ ಪುತ್ರಿಯ ಚೊಚ್ಚಲ ಚಿತ್ರದ 2ನೇ ಹಾಡು ಬಿಡುಗಡೆ
ವಿಡಿಯೋ ಕೊನೆಯಲ್ಲಿ "ಜಬ್ ತಕ್ ಟೈಗರ್ ಮರಾ ನಹಿ, ಟಬ್ ತಕ್ ಟೈಗರ್ ಹರಾ ನಹೀ" (ಎಲ್ಲಿವರೆಗೆ ಟೈಗರ್ ಸಾಯೋದಿಲ್ಲವೋ, ಅಲ್ಲಿವರೆಗೆ ಟೈಗರ್ ಸೋಲಲ್ಲ) ಎಂಬ ಡೈಲಾಗ್ ಸಿನಿಪ್ರಿಯರ ಕುತೂಹಲವನ್ನು ಹೆಚ್ಚಿಸಿದೆ. ಇದು ಒಂದು ರೋಮಾಂಚನಕಾರಿ ಸಿನಿಮೀಯ ಅನುಭವವನ್ನು ನೀಡಲಿದೆ ಎಂದು ಸಿನಿಪ್ರಿಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟೈಗರ್ 3 ದೀಪಾವಳಿಯ ಸಂದರ್ಭ ಚಿತ್ರಮಂದಿರ ಪ್ರವೇಶಿಸಲಿದೆ. ಮನೀಷ್ ಶರ್ಮಾ ನಿರ್ದೇಶನದ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಪ್ರೊಸೆಸ್ ಭಾನುವಾರ, ನವೆಂಬರ್ 5 ರಿಂದ ಆರಂಭ ಆಗಲಿದೆ. ಈಗಾಗಲೇ ಬಂದಿರುವ ಟೈಗರ್ 1 ಆ್ಯಂಡ್ 2ರಲ್ಲಿ ಸಲ್ಲು ಕ್ಯಾಟ್ ತೆರೆಹಂಚಿಕೊಂಡಿದ್ದರು. ಮೂರನೇ ಭಾಗದಲ್ಲೂ ತಮ್ಮ ಪಾತ್ರ ಮುಂದುವರಿಸಿದ್ದಾರೆ.
ಇದನ್ನೂ ಓದಿ:ಉರ್ಫಿ ಜಾವೇದ್ ಕರೆದೊಯ್ದ ಮುಂಬೈ ಪೊಲೀಸರು?: ವಿಡಿಯೋ ವೈರಲ್