ಕರ್ನಾಟಕ

karnataka

ETV Bharat / entertainment

ಟೈಗರ್ 3 ಅಡ್ವಾನ್ಸ್ ಟಿಕೆಟ್ ಬುಕಿಂಗ್ ಮಾಹಿತಿ: ಮುಂಜಾನೆ 7ಕ್ಕೆ ಸಿನಿಮಾ ಪ್ರದರ್ಶನ ಪ್ರಾರಂಭ - ಯಶ್​ ರಾಜ್​ ಫಿಲ್ಮ್ಸ್

ಬಹುನಿರೀಕ್ಷಿತ ಟೈಗರ್ 3 ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್​ ಮತ್ತು ಮಾರ್ನಿಂಗ್​ ಶೋ ಕುರಿತು ಯಶ್ ರಾಜ್ ಫಿಲ್ಮ್ಸ್ ಮಾಹಿತಿ ಹಂಚಿಕೊಂಡಿದೆ.

Tiger 3
ಟೈಗರ್ 3

By ETV Bharat Karnataka Team

Published : Nov 1, 2023, 4:08 PM IST

ಭಾರತೀಯ ಚಿತ್ರರಂಗದ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಟೈಗರ್ 3'. ಸಲ್ಲು ಕ್ಯಾಟ್ ಅಭಿಮಾನಿಗಳಿಗೆ ಹಾಗೂ ಸಿನಿಪ್ರಿಯರಿಗೆ ಅಸಾಧಾರಣ ಅನುಭವ ನೀಡಲು ಚಿತ್ರತಂಡ ಸಿದ್ಧವಾಗಿದೆ. ಅಭಿಮಾನಿಗಳ ಬೇಡಿಕೆ, ನಿರೀಕ್ಷೆ ಪೂರೈಸುವ ನಿಟ್ಟಿನಲ್ಲಿ ಚಿತ್ರ ತಯಾರಕರು ಮುಂಜಾನೆ ಪ್ರದರ್ಶನಗಳನ್ನು ಒದಗಿಸಲು ಸಜ್ಜಾಗಿದ್ದಾರೆ. 7 ಗಂಟೆಗೆ ಸಿನಿಮಾ ಪ್ರದರ್ಶನ ಪ್ರಾರಂಭವಾಗುತ್ತದೆ. ಟೈಗರ್​​ 3 ನಿರ್ಮಿಸಿರುವ ಯಶ್ ರಾಜ್ ಫಿಲ್ಮ್ಸ್ (YRF) ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದೆ. ಅಲ್ಲದೇ, ನವೆಂಬರ್ 5ಕ್ಕೆ ಅಡ್ವಾನ್ಸ್ ಟಿಕೆಟ್ಸ್ ಬುಕಿಂಗ್​ ಪ್ರೊಸೆಸ್​​ ಕೂಡ ಓಪನ್​​ ಆಗಲಿದೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ.

ಯಶ್​ ರಾಜ್​ ಫಿಲ್ಮ್ಸ್ ಸೋಷಿಯಲ್​ ಮೀಡಿಯಾದಲ್ಲಿ, ಈ ಬಗ್ಗೆ ಪೋಸ್ಟ್ ಶೇರ್ ಮಾಡಿದೆ. ಭಾರತದಲ್ಲಿ ನವೆಂಬರ್​​ 12ರ ಬೆಳಗ್ಗೆ 7 ಗಂಟೆಗೆ ಪ್ರದರ್ಶನ ಪ್ರಾರಂಭಿಸಲಿರುವ ಟೈಗರ್ 3ರ ಮೊದಲ ದಿನದ ಮೊದಲ ಪ್ರದರ್ಶನಕ್ಕಾಗಿ ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳಲು ಉತ್ಸಾಹಿ ಅಭಿಮಾನಿಗಳನ್ನು ಆಹ್ವಾನಿಸಿದೆ. ವೈಆರ್​ಎಫ್​ನ ಸ್ಪೈ ಯೂನಿವರ್ಸ್‌ನ ಭಾಗವಾಗಿರುವ ಟೈಗರ್ 3 ದೀಪಾವಳಿ ಸಂದರ್ಭ ನವೆಂಬರ್ 12 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಚಿತ್ರವನ್ನು IMAX, 4DX, DBOX, ICE, PXL ಮತ್ತು 4D ಎಮೋಷನ್ ಸೇರಿದಂತೆ ವಿವಿಧ ಪ್ರೀಮಿಯಂ ಸ್ವರೂಪಗಳಲ್ಲಿ ಪ್ರಸ್ತುತಪಡಿಸಲಾಗುತ್ತದೆ.

ನವೆಂಬರ್​ ತಿಂಗಳು ಆರಂಭವಾದಂತೆ, ವೈಆರ್​ಎಫ್​​​ "ಟೈಗರ್ 3 ತಿಂಗಳು ಇಲ್ಲಿದೆ" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟರ್ ಒಂದನ್ನು ಅನಾವರಣಗೊಳಿಸಿದೆ. ಇದೇ ನವೆಂಬರ್ 12 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು, ಪ್ರೇಕ್ಷಕರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸಿನಿಪ್ರಿಯರನ್ನು ಸೆಳೆಯುವ ನಿಟ್ಟಿನಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಪ್ರಚಾರ ಪ್ರಾರಂಭಿಸಿದ್ದಾರೆ. ಮಾರ್ನಿಂಗ್​ ಶೋಗಳ ಸುದ್ದಿಯನ್ನು ಅಭಿಮಾನಿಗಳು ಬಹಳ ಉತ್ಸಾಹದಿಂದ ಸ್ವಾಗತಿಸಿದ್ದಾರೆ. ಟೈಗರ್ 3 ಬಾಕ್ಸ್ ಆಫೀಸ್ ದಾಖಲೆಗಳನ್ನು ಸೃಷ್ಟಿಸಲಿದೆ ಎಂದು ಹಲವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೆಲ ಅಭಿಮಾನಿಗಳು, ಹೆಚ್ಚಿನ ಮಾರ್ನಿಂಗ್​ ಶೋ ಆಯೋಜಿಸಲು ಸಲಹೆ ನೀಡಿದ್ದಾರೆ. ಏಕೆಂದರೆ ನಂತರ ಕಲೆಕ್ಷನ್​ ಅಂಕಿ ಅಂಶ ಕಡಿಮೆಯಾಗಬಹುದು ಎಂದು ಅವರು ಅಂದಾಜಿಸಿದ್ದಾರೆ.

ಇದನ್ನೂ ಓದಿ:'12th ಫೇಲ್​​' ಸಿನಿಮಾದಿಂದ ಸ್ಫೂರ್ತಿ ಪಡೆದ ರಿಷಬ್​ ಶೆಟ್ಟಿ: ತೇಜಸ್ ಕಲೆಕ್ಷನ್​ ಡೀಟೆಲ್ಸ್ ಇಲ್ಲಿದೆ!

ಮನೀಶ್​ ಶರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್​​ ಮುಖ್ಯಭೂಮಿಕೆಯಲ್ಲಿದ್ದಾರೆ. ಇಮ್ರಾನ್​ ಹಶ್ಮಿ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲೆರಡು ಭಾಗಗಳಲ್ಲಿಯೂ ಸಲ್ಲು ಕ್ಯಾಟ್​ ಜೊತೆಯಾಗಿ ನಟಿಸಿದ್ದರು. ಚಿತ್ರದ ಮೂರೂ ಭಾಗಗಳಿಗೂ ಬಾಲಿವುಡ್​ನ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಯಶ್​ ರಾಜ್​ ಫಿಲ್ಮ್ಸ್ ಬಂಡವಾಳ ಹೂಡಿದೆ.

ಇದನ್ನೂ ಓದಿ:ಕರ್ನಾಟಕ ರಾಜ್ಯೋತ್ಸವ 2023: ಶಿವಣ್ಣ ಸೇರಿದಂತೆ ಕನ್ನಡ ಚಿತ್ರರಂಗದ ತಾರೆಯರಿಂದ​ ನಾಡಿನ ಜನತೆಗೆ ಶುಭಾಶಯ

ABOUT THE AUTHOR

...view details