ಕರ್ನಾಟಕ

karnataka

ETV Bharat / entertainment

'ಟೈಗರ್​ 3'ಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​: ಮೊದಲ ದಿನವೇ 44 ಕೋಟಿ ಕಲೆಕ್ಷನ್​​! - ಈಟಿವಿ ಭಾರತ ಕನ್ನಡ

Tiger 3 box office collection day 1: ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್​ ನಟನೆಯ 'ಟೈಗರ್​ 3' ಚಿತ್ರ ಬಿಡುಗಡೆಯಾದ ಮೊದಲ ದಿನ 44.5 ಕೋಟಿ ರೂಪಾಯಿ ಗಳಿಸಿದೆ.

Tiger 3 box office collection day 1: Maneesh Sharma's spy actioner becomes Salman Khan's biggest opener till date
'ಟೈಗರ್​ 3'ಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​: ಮೊದಲ ದಿನವೇ 44 ಕೋಟಿ ರೂ. ಕಲೆಕ್ಷನ್​​!

By ETV Bharat Karnataka Team

Published : Nov 13, 2023, 3:24 PM IST

ದೀಪಾವಳಿ ಹಬ್ಬದ ಉಡುಗೊರೆಯಾಗಿ ನವೆಂಬರ್​ 12ರಂದು ಬಾಲಿವುಡ್​ ನಟ​ ಸಲ್ಮಾನ್​ ಖಾನ್​ ಮತ್ತು ನಟಿ ಕತ್ರಿನಾ ಕೈಫ್​ ಅಭಿನಯದ ಬಹುನಿರೀಕ್ಷಿತ ಚಿತ್ರ 'ಟೈಗರ್ 3' ಬಿಡುಗಡೆ ಆಗಿದೆ. ಮನೀಶ್​ ಶರ್ಮಾ ನಿರ್ದೇಶನದ ಸ್ಪೈ ಥ್ರಿಲ್ಲರ್​ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್​ ಸಿಕ್ಕಿದ್ದು, ಮೊದಲನೇ ದಿನವೇ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದಿದೆ. ಇಂಡಸ್ಟ್ರಿ ಟ್ರ್ಯಾಕರ್​ ಸಾಕ್ನಿಲ್​ ಪ್ರಕಾರ, ಚಿತ್ರವು ಭಾರತದಲ್ಲಿ ಬಿಡುಗಡೆಯಾದ ಮೊದಲ ದಿನವೇ 44.5 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

ಶಾರುಖ್​ ಖಾನ್​ ನಟನೆಯ ಬ್ಲಾಕ್​ಬಸ್ಟರ್​ ಸಿನಿಮಾಗಳಾದ 'ಜವಾನ್'​ ಮತ್ತು 'ಪಠಾಣ್'​ ನಂತರ 'ಟೈಗರ್​ 3' ಸಿನಿಮಾ ಹಿಂದಿ ಭಾಷೆಯಲ್ಲಿ ಅತ್ಯುತ್ತಮ ಆರಂಭಿಕ ದಿನದ ಅಂಕಿ ಅಂಶಗಳನ್ನು ದಾಖಲಿಸಿದೆ. ಟ್ರೇಡ್​ ಪೋರ್ಟಲ್​ ಪ್ರಕಾರ, ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್​ ಚಿತ್ರವು ತನ್ನ ಮೊದಲ ದಿನದಲ್ಲಿ 44.5 ಕೋಟಿ ರೂಪಾಯಿಗಳನ್ನು ಗಳಿಸಿದೆ. ಈ ಮೂಲಕ ಭಾನುವಾರದಂದು ಚಿತ್ರದ ಒಟ್ಟಾರೆ ಹಿಂದಿ ಆಕ್ಯುಪೆನ್ಸಿ ದರವು 41.33 ಪ್ರತಿಶತದಷ್ಟಿತ್ತು.

'ಟೈಗರ್​ 3' ಮುಂಗಡ ಬುಕ್ಕಿಂಗ್​ ಅನ್ನು ನೋಡುವಾಗ ಸಿನಿಮಾವು ಮೊದಲ ದಿನ 35 ಕೋಟಿ ರೂಪಾಯಿ ಗಳಿಸಬಹುದೆಂದು ಅಂದಾಜಿಸಲಾಗಿತ್ತು. ಆದರೆ, ಆ ನಿರೀಕ್ಷೆಗಳನ್ನು ಮೀರಿ ಚಿತ್ರವು 40 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಗುಜರಾತ್​, ಮುಂಬೈ, ಪಶ್ಚಿಮ ಬಂಗಾಳ ಮತ್ತು ದಕ್ಷಿಣ ಭಾರತದಲ್ಲಿ ದೀಪಾವಳಿಯ ಸಂಭ್ರಮದ ಮಧ್ಯೆ 'ಟೈಗರ್​ 3'ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಲ್ಮಾನ್​ ಖಾನ್​ ಆ್ಯಕ್ಷನ್​ ದೃಶ್ಯಗಳು ಅಭಿಮಾನಿಗಳಿಗೆ ಪಟಾಕಿಗಳಿಗಿಂತ ಹೆಚ್ಚು ಮನರಂಜನೆ ನೀಡುತ್ತಿವೆ.

ಇದನ್ನೂ ಓದಿ:'ಟೈಗರ್​ 3 ಲೀಕ್ ಆಗದಂತೆ ನೋಡಿಕೊಳ್ಳಿ'​: ಅಭಿಮಾನಿಗಳಲ್ಲಿ ಸಲ್ಮಾನ್​, ಕತ್ರಿನಾ ಮನವಿ!

2019ರಲ್ಲಿ ಸಲ್ಮಾನ್​ ಖಾನ್​ ನಟನೆಯ 'ಭಾರತ್​' ಸಿನಿಮಾ ಬಿಡುಗಡೆಯಾಗಿತ್ತು. ಇದು ತೆರೆ ಕಂಡ ಮೊದಲ ದಿನದಂದು 42.3 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ಇದೀಗ 'ಟೈಗರ್​ 3' ಆ ದಾಖಲೆಯನ್ನು ಉಡೀಸ್​ ಮಾಡಿದೆ. ಭಾರತ್​ ಚಿತ್ರದ ಫಸ್ಟ್​ ಡೇ ಕಲೆಕ್ಷನ್​ ಅನ್ನು ಮೀರಿಸಿದೆ. ಈ ಮೂಲಕ ಸಲ್ಮಾನ್ ಖಾನ್​ ಅವರ ಅತ್ಯಧಿಕ ಮೊತ್ತದಲ್ಲಿ ಆರಂಭ ಪಡೆದುಕೊಂಡ ಮೊದಲ ಚಿತ್ರ ಎಂಬ ಹೆಗ್ಗಳಿಕೆ ಟೈಗರ್​ 3ಗೆ ಸಿಕ್ಕಿದೆ.

ಆದಿತ್ಯ ಚೋಪ್ರಾರಿಂದ ರಚಿಸಲ್ಪಟ್ಟ 'ಸ್ಪೈ ಯೂನಿವರ್ಸ್‌'ಗೆ ಟೈಗರ್ 3 ಹೊಸ ಸೇರ್ಪಡೆಯಾಗಿದೆ. ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ವಾರ್ ಮತ್ತು ಪಠಾಣ್​ ಬಳಿಕ ಬಂದ ಮತ್ತೊಂದು ಸ್ಪೈ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಸಲ್ಲು, ಕ್ಯಾಟ್​​ ಜೊತೆ ಇಮ್ರಾನ್ ಹಶ್ಮಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದಾರೆ. ಅದ್ಭುತ ತಾರಾಗಣ ಸಿನಿಮಾದ ತೂಕವನ್ನು ಹೆಚ್ಚಿಸಿದೆ. ಶಾರುಖ್​ ಖಾನ್​ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಚಿತ್ರ ಮತ್ತಷ್ಟು ವಿಜೃಂಭಿಸುವಂತೆ ಮಾಡಿದ್ದಾರೆ.

ಇದನ್ನೂ ಓದಿ:ಥಿಯೇಟರ್​ನಲ್ಲಿ 'ಟೈಗರ್' 3 ಘರ್ಜನೆ: ಸಲ್ಲು ಸಿನಿಮಾಗೆ ಫ್ಯಾನ್ಸ್ ಫಿದಾ!

ABOUT THE AUTHOR

...view details