ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರ 'ಟೈಗರ್ 3'. ಸಿನಿರಸಿಕರಲ್ಲಿ ನಿರೀಕ್ಷೆ ಮೂಡಿಸಿರುವ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಬಿಡುಗಡೆಗೂ ಮುನ್ನ ಟಿಕೆಟ್ಗಳು ಶರವೇಗದಲ್ಲಿ ಮಾರಾಟವಾಗುತ್ತಿವೆ. ಈಗಾಗಲೇ ಸಿನಿಮಾ 150,000 ಡಾಲರ್ ಮೊತ್ತ ಗಳಿಸಿದೆ ಎಂದು ವರದಿಯಾಗಿದೆ. ಈ ಮೂಲಕ ಪ್ರಸ್ತುತ ವರ್ಷದ ಸೂಪರ್ ಹಿಟ್ ಸಿನಿಮಾಗಳಾದ 'ಜವಾನ್' ಮತ್ತು 'ಪಠಾಣ್' ಹಿಂದಿಕ್ಕಿದೆ.
ವಿಶೇಷವಾಗಿ, ಇಂಗ್ಲೆಂಡ್ ಮತ್ತು ಅರಬ್ ರಾಷ್ಟ್ರಗಳು 'ಟೈಗರ್ 3' ಸಿನಿಮಾಗೆ ಬಲವಾದ ಬೆಂಬಲ ನೀಡಿವೆ. ಎಂದಿನಂತೆ ಅಮೆರಿಕ ಟಿಕೆಟ್ ಮಾರಾಟದ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿ ಮೊದಲ ದಿನವೇ ಹೆಚ್ಚು ಸಂಖ್ಯೆಯಲ್ಲಿ ಟಿಕೆಟ್ ಸೇಲ್ ಆಗಿದ್ದು, ಸುಮಾರು 50,000 ಡಾಲರ್ ಸಂಗ್ರಹಿಸಿದೆ. ಇಂಗ್ಲೆಂಡ್ನಲ್ಲಿ 3 ಸಾವಿರಕ್ಕೂ ಹೆಚ್ಚು ಟಿಕೆಟ್ಗಳು ಸೋಲ್ಡ್ ಔಟ್ ಆಗಿದ್ದು, 25,000 ಪೌಂಡ್ ಆದಾಯ ಗಳಿಸಿದೆ. ಅರಬ್ ರಾಷ್ಟ್ರಗಳಲ್ಲಿ 1,600 ಟಿಕೆಟ್ಗಳು ಮಾರಾಟವಾಗಿದ್ದು, 22,000 ಡಾಲರ್ ತಲುಪಿದೆ. 'ಜವಾನ್' ಮತ್ತು 'ಪಠಾಣ್'ಗಿಂತ ವೇಗವಾಗಿ 'ಟೈಗರ್ 3' ಟಿಕೆಟ್ಗಳು ಸೋಲ್ಡೌಟ್ ಆಗಿವೆ.
ಇದನ್ನೂ ಓದಿ:ಟೈಗರ್ 3: ಕತ್ರಿನಾ ಕೈಫ್ ಸ್ಟೈಲಿಶ್ ಫೋಟೋ ಹಂಚಿಕೊಂಡ ಸಲ್ಮಾನ್ ಖಾನ್
ಮನೀಶ್ ಶರ್ಮಾ ನಿರ್ದೇಶನದ 'ಟೈಗರ್ 3' ಅನ್ನು ಯಶ್ ರಾಜ್ ಫಿಲ್ಮ್ಸ್ ಮೂಲಕ ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ವಾರ್ ಮತ್ತು ಪಠಾಣ್ ಬಳಿಕ ಬಿಡುಗಡೆ ಆಗುತ್ತಿರುವ ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಸ್ಪೈ ಯೂನಿವರ್ಸ್ನಲ್ಲಿ 5ನೇ ಚಿತ್ರ ಇದು. 'ಪಠಾಣ್' ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ಸಲ್ಮಾನ್ ಖಾನ್ ಅತಿಥಿ ಪಾತ್ರ ಮಾಡಿದ್ದರು. ಇದೀಗ ಟೈಗರ್ 3ನಲ್ಲಿ ಕಿಂಗ್ ಖಾನ್ ಎಂಟ್ರಿಯೂ ಇರಲಿದೆ. ಚಿತ್ರದಲ್ಲಿ ಇಮ್ರಾನ್ ಹಶ್ಮಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.
5ನೇ ಬಾರಿ ಸ್ಕ್ರೀನ್ ಶೇರ್ ಮಾಡಿದ ಸಲ್ಮಾನ್-ಕತ್ರಿನಾ:ಮನೀಶ್ ಶರ್ಮಾ ನಿರ್ದೇಶನದ ಸಿನಿಮಾ ಯಶ್ ರಾಜ್ ಫಿಲ್ಮ್ಸ್ನ ಟೈಗರ್ ಫ್ರಾಂಚೈಸಿಯ ಮೂರನೇ ಭಾಗ. ಐದನೇ ಬಾರಿ ಸಲ್ಮಾನ್ ಮತ್ತು ಕತ್ರಿನಾ ತೆರೆ ಮೇಲೆ ಒಂದಾಗಿದ್ದಾರೆ. ಸಲ್ಮಾನ್, ಕತ್ರಿನಾ ಕೊನೆಯದಾಗಿ 2019ರಲ್ಲಿ ಬಂದ ಭಾರತ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಅದಕ್ಕೂ ಮೊದಲು, ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ಮೈನೆ ಪ್ಯಾರ್ ಕ್ಯೂನ್ ಕಿಯಾ ಮತ್ತು ಪಾರ್ಟ್ನರ್ನಂತಹ ಹಿಟ್ ಚಿತ್ರಗಳನ್ನು ಈ ಜೋಡಿ ನೀಡಿದೆ. ಟೈಗರ್ 3 ನವೆಂಬರ್ 12ರಂದು ಮೂರು ಭಾಷೆಗಳಲ್ಲಿ ತೆರೆಗಪ್ಪಳಿಸಲಿದೆ.
ಇದನ್ನೂ ಓದಿ:'ಟೈಗರ್ 3' ಸಿನಿಮಾದ ಪಾರ್ಟಿ ಸಾಂಗ್ ಔಟ್; ಗ್ಲಾಮರಸ್ ಲುಕ್ನಲ್ಲಿ ಸಲ್ಮಾನ್-ಕತ್ರಿನಾ ಮೋಡಿ