ಮುಂಬೈ (ಮಹಾರಾಷ್ಟ್ರ):ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಸೋಮವಾರ ಮುಂಬೈ ನ್ಯಾಯಾಲಯವು ಏಪ್ರಿಲ್ 3 ರವರೆಗೆ ಪೊಲೀಸ್ ಕಸ್ಟಡಿಗೆ ವಹಿಸಿದೆ. ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಲುನಿ ನಿವಾಸಿಯಾಗಿರುವ ಆರೋಪಿ ಧಕಡ್ ರಾಮ್‌ನನ್ನು ನಿನ್ನೆ ಬಂಧಿಸಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಬಾಂದ್ರಾ ಪೊಲೀಸರು ಮತ್ತು ರಾಜಸ್ಥಾನ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಭಾನುವಾರ ಧಕಡ್ನನ್ನು ಬಂಧಿಸಿದ್ದು, ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಸಿಧು ಮೂಸೆ ವಾಲಾ ಅವರಂತೆಯೇ ನಿಮ್ಮನ್ನು ಕೊನೆಗೊಳಿಸುತ್ತೇನೆ’ ಎಂದು ಆರೋಪಿ ಧಕಡ್ ಸಲ್ಮಾನ್ ಖಾನ್‌ಗೆ ಬೆದರಿಕೆ ಮೇಲ್ ಕಳುಹಿಸಿದ್ದರು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಕಳೆದ ವಾರ, ಇದೇ ರೀತಿ ಸಲ್ಮಾನ್ ಖಾನ್ ಕಚೇರಿಗೆ ಬೆದರಿಕೆ ಮೇಲ್ ಕಳುಹಿಸಿದ್ದಕ್ಕಾಗಿ ಜೈಲಿನಲ್ಲಿದ್ದ ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್ ಮತ್ತು ರೋಹಿತ್ ಗಾರ್ಗ್ ವಿರುದ್ಧ ಬಾಂದ್ರಾ ಪೊಲೀಸರು ಐಪಿಸಿ ಸೆಕ್ಷನ್ 506(2),120(ಬಿ) ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ:ಲಯ ಕೋಕಿಲ ಚೊಚ್ಚಲ ನಿರ್ದೇಶನದ 'ತಾಯ್ತ' ಟೀಸರ್ ಬಿಡುಗಡೆ
ಈ ಹಿಂದೆಯೂ ಸಲ್ಮಾನ್ಗೆ ಬೆದರಿಕೆ: ಇದಲ್ಲದೇ 2022ರ ಮೇ 29ರಂದು ಪಂಜಾಬ್ನ ಮಾನ್ಸಾದಲ್ಲಿ ಪಂಜಾಬಿ ಗಾಯಕ ಸಿಧು ಮುಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆಗಲೂ ಕೂಡ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರಿಗೆ ಬೆದರಿಕೆ ಪತ್ರ ಬಂದಿತ್ತು. ಅಲ್ಲದೇ, ಈ ಬಗ್ಗೆ ಪಂಜಾಬ್ ಪೊಲೀಸರು ಮಾಹಿತಿ ನೀಡಿದ್ದರು. ನಟ ಸಲ್ಮಾನ್ ಖಾನ್ ಅವರನ್ನು ಟಾರ್ಗೆಟ್ ಮಾಡಿದ್ದ ಗ್ಯಾಂಗ್ನವರು ಮುಂಬೈನಲ್ಲಿ ಸಾಕಷ್ಟು ಸಮಯವನ್ನು ಕಳೆದಿದ್ದರಂತೆ.