ಕರ್ನಾಟಕ

karnataka

ETV Bharat / entertainment

ಪುನೀತ್ ನಟನೆಗೆ ಸಿದ್ಧವಾಗಿ ಸ್ಥಗಿತಗೊಂಡಿದ್ದ ಏಕೈಕ ಚಿತ್ರ 'ದ್ವಿತ್ವ' - ಪುನೀತ್ ಅಭಿನಯದ ಸ್ಥಗಿತಗೊಂಡ ಸಿನಿಮಾ

ಪುನೀತ್ ರಾಜ್​ಕುಮಾರ್​ ಸಿನಿ ಪಯಣದಲ್ಲಿ ಸಿದ್ಧವಾಗಿ ಸ್ಥಗಿತಗೊಂಡಿರುವ ಏಕೈಕ ಚಿತ್ರ ಅಂದರೆ ಅದು 'ದ್ವಿತ್ವ'.

This is Puneeth Rajkumar's aborted movie
This is Puneeth Rajkumar's aborted movie

By

Published : Oct 28, 2022, 8:25 PM IST

ಬೆಂಗಳೂರು: ಬಾಲನಟನಿಂದ ಈವರೆಗೂ 45 ಸಿನಿಮಾಗಳಲ್ಲಿ ನಟಿಸಿರುವ ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಬದುಕಿದ್ದಿದ್ದರೆ ಲೂಸಿಯಾ ಚಿತ್ರದ ನಿರ್ದೇಶಕ ಪವನ್ ಕುಮಾರ್ ಕಾಂಬಿನೇಷನ್‌ನಲ್ಲಿ 'ದ್ವಿತ್ವ' ಚಿತ್ರವನ್ನು ನಿರ್ಮಾಣವಾಗಬೇಕಾಗಿತ್ತು. ಆದರೆ, ದುರಾದೃಷ್ಟವಶಾತ್ ಪುನೀತ್ ನಮ್ಮನ್ನಗಲಿದರು. ಪರಿಣಾಮ ಈ ವೇಳೆಗೆ ತೆರೆಗೆ ಬರಬೇಕಾಗಿದ್ದ ಚಿತ್ರದ ಚಿತ್ರೀಕರಣ ಪ್ರಾರಂಭಕ್ಕೂ ಮುನ್ನವೇ ಸ್ಥಗಿತಗೊಳ್ಳಬೇಕಾಯಿತು. ಇದು ಅವರ ಸಿನಿ ಪಯಣದಲ್ಲಿ ಸ್ಥಗಿತಗೊಂಡಿದ್ದ ಏಕೈಕ ಚಿತ್ರ ಎನ್ನಲಾಗುತ್ತಿದೆ.

ಚಿತ್ರದ ಪೋಸ್ಟರ್​

ಬಿಡುಗಡೆಗೊಂಡಿದ್ದ ಫಸ್ಟ್ ಲುಕ್:ಯಾವುದೇ ಚಿತ್ರವಾದರೂ ನಟ-ನಟಿಯ ಫಸ್ಟ್​ ಲುಕ್​ ಬಹಳ ಮುಖ್ಯ. ಆದರೆ, ಇದೇ ಮೊದಲ ಬಾರಿಗೆ 'ದ್ವಿತ್ವ' ಸಿನಿಮಾಗೆ ವಿಭಿನ್ನವಾದ ರೀತಿಯಲ್ಲಿ ಫಸ್ಟ್ ಲುಕ್ ಬಿಡುಗಡೆಗೊಂಡಿತ್ತು. ನಿರ್ದೇಶಕ ಪವನ್ ಕುಮಾರ್ ಅವರು ಪುನೀತ್ ರಾಜ್‌ಕುಮಾರ್ ಅವರಿಗೆ ಹಲವಾರು ಗೆಟಪ್ ಹಾಕಿಸಿ ಫೋಟೋ ತೆಗೆಸಿದ್ದರು. ಯಾವುದು ಪುನೀತ್ ರಾಜ್​ಕುಮಾರ್​ಗೆ ಸೂಟ್ ಆಗುತ್ತೆ ಅಂತ ಟೆಸ್ಟ್ ಮಾಡಲಾಗಿತ್ತು. ಆ ಒಂದು ಫೋಟೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಅಪ್ಪು ಮೀಸೆ ಬಿಟ್ಟ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ನಟಿ ತ್ರಿಶಾ ಕೃಷ್ಣನ್

'ದ್ವಿತ್ವ' ಸಿನಿಮಾ ಕುರಿತಂತೆ ವಿವರಿಸಿದ್ದ ಪವನ್ ಕುಮಾರ್, ಇದು ಅಪ್ಪು ಅವರ ಸಿನಿ ಕೆರಿಯರ್​ನಲ್ಲೇ ಡಿಫ್ರೆಂಟ್ ಸಿನಿಮಾ ಆಗಲಿದೆ ಎಂದು ತಿಳಿಸಿದ್ದರು. ಅಷ್ಟೇ ಅಲ್ಲದೆ, ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಅವರು ಈ ಸಿನಿಮಾಗೆ ನಾಯಕಿಯಾಗುವ ಮೂಲಕ ಇನ್ನಷ್ಟು ಕುತೂಹಲ ಕೆರಳಿಸಿತ್ತು. ಚಿತ್ರದಲ್ಲಿ ತ್ರಿಶಾ ಅವರು ಕಾರ್ಪೊರೇಟ್ ಕಂಪನಿಯೊಂದರ ಉದ್ಯೋಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ:ನಾಳೆ ಪುನೀತ್ ಪುಣ್ಯ ಸ್ಮರಣೆಗೆ ಸಿದ್ಧತೆ: ಕಂಠೀರವ ಸ್ಟುಡಿಯೋದಲ್ಲಿ 24 ಗಂಟೆ ಗೀತ ನಮನ

ABOUT THE AUTHOR

...view details