ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ತಮ್ಮ ಪುತ್ರಿ ಮಾಲ್ತಿ ಜೊತೆಗೆ ಮುಂಬೈನ ಸಿದ್ದಿವಿನಾಯಕ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿದ್ದಾರೆ. ಅವರು ದೇವಸ್ಥಾನದಲ್ಲಿ ಮಗಳಿಗೆ ಗಣಪನ ದರ್ಶನ ಮಾಡಿಸಿದ್ದಾರೆ. ಈ ಫೋಟೋಗಳನ್ನು ಪ್ರಿಯಾಂಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ಮಗಳ ಜೊತೆಗೆ ಭಾರತದ ಪ್ರವಾಸ ಸಿದ್ದಿವಿನಾಯಕನ ದರ್ಶನದಿಂದ ಪೂರ್ಣಗೊಂಡಿದೆ" ಎಂದು ಕ್ಯಾಪ್ಶನ್ ಬರೆದಿದ್ದಾರೆ. ಗಣೇಶನ ಸನ್ನಿಧಾನಕ್ಕೆ ಭೇಟಿ ನೀಡಿದ ಮೂರು ಚಿತ್ರಗಳನ್ನು ಅವರು ಪೋಸ್ಟ್ ಹಾಕಿಕೊಂಡಿದ್ದಾರೆ.
ನಟಿಯ ಹೊಸ ಅಪ್ಡೇಟ್ ನೋಡುತ್ತಿದ್ದಂತೆ ನೆಟ್ಟಿಗರು ಕಮೆಂಟ್ ವಿಭಾಗವನ್ನು ಬಗೆ ಬಗೆಯ ಅನಿಸಿಕೆಗಳ ಬರಹಗಳಿಂದ ತುಂಬಿದ್ದಾರೆ. "ಗಣಪತಿ ಬಪ್ಪನ ಆಶೀರ್ವಾದವು ನಿಮ್ಮ ಮಗಳ ಮೇಲಿರಲಿ" ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಇನ್ನು ಕೆಲವರು ದೇವಾಲಯದ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. "ನಮಗೆ ಪೋಟೋಗಳನ್ನು ತೆಗೆಯಲು ಅನುಮತಿಸುವುದಿಲ್ಲ. ಆದರೆ, ಪ್ರಿಯಾಂಕಾ ಅವರು ಹೇಗೆ ಫೋಟೋ ತೆಗೆದುಕೊಂಡರು?" ಎಂದು ಪ್ರಶ್ನಿಸಿದ್ದಾರೆ. "ಬಪ್ಪನ ಆಶೀರ್ವಾದ ನಿಮ್ಮ ಮೇಲಿರಲಿ. ಆದರೆ, ಜನ ಸಾಮಾನ್ಯರೂ ಕೂಡ ಅವನ ದರ್ಶನಕ್ಕೆ ಅರ್ಹರು" ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:'ಕಂಗನಾರನ್ನು ಕರೆಯಿರಿ': ಪ್ರಿಯಾಂಕಾ- ಕರಣ್ ಭೇಟಿ ಬಗ್ಗೆ ನೆಟ್ಟಿಗರ ಆಹ್ವಾನ
ಇದಕ್ಕೂ ಮೊದಲು ನಟಿ ತಮ್ಮ ಪತಿ ನಿಕ್ ಜೋನಾಸ್ ಜೊತೆಗಿನ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಪ್ರಿಯಾಂಕಾ ಮತ್ತು ನಿಕ್ ನಗರದ ಬೀದಿಗಳಲ್ಲಿ ಆಟೋರಿಕ್ಷಾವೊಂದರ ಬಳಿ ನಿಂತು ಫೋಟೊಗೆ ಪೋಸ್ ನೀಡಿದ್ದು, ಚಿತ್ರಗಳನ್ನು ನಟಿ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಮಲ್ಟಿ ಕಲರ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಿಕ್ ಜೋನಾಸ್ ನೀಲಿ ಬಣ್ಣದ ಸೂಟ್‌ನಲ್ಲಿ ಕಂಗೊಳಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು ನಿಕ್ ಜೋನಾಸ್ ಅವರೊಂದಿಗೆ ಡೇಟಿಂಗ್‌ಗೆ ಹೋಗಿದ್ದಾರೆ ಎಂದು ಹೇಳುವ ಶೀರ್ಷಿಕೆಯನ್ನು ಬರೆದಿದ್ದು, ನನ್ನ ನಿಕ್ ಜೋನಸ್ನೊಂದಿಗೆ ಎಂದು ಬರೆದಿದ್ದಾರೆ. ಇದಕ್ಕೆ ಪ್ರಿಯಾಂಕಾ ಅಭಿಮಾನಿಗಳು ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ:ಇನ್ಮುಂದೆ ನನಗೆ ಇಷ್ಟವಿಲ್ಲದ ಜನರೊಂದಿಗೆ ಕೆಲಸ ಮಾಡಲ್ಲ: ನಟಿ ಪ್ರಿಯಾಂಕಾ ಚೋಪ್ರಾ
ತವರಿಗೆ ಬಂದ ಪ್ರಿಯಾಂಕಾ: ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜೋನಾಸ್ ಮತ್ತು ಪುತ್ರಿ ಮಾಲ್ತಿ ಮೇರಿ ಜೊತೆ ಮಾರ್ಚ್ 31 ರಂದು ಭಾರತಕ್ಕೆ ಬಂದಿದ್ದಾರೆ. 2022ರ ಜನವರಿಯಲ್ಲಿ ಬಾಡಿಗೆ ತಾಯ್ತನದ ಮೂಲಕ ತಮ್ಮ ಹೆಣ್ಣು ಮಗುವನ್ನು ಸ್ವಾಗತಿಸಿದ ನಂತರ ಪುತ್ರಿ ಜೊತೆಗೆ ನಿಕ್ ಮತ್ತು ಪ್ರಿಯಾಂಕಾ ಅವರು ಮೊದಲ ಬಾರಿಗೆ ಭಾರತಕ್ಕೆ ಭೇಟಿ ಕೊಟ್ಟಿದ್ದಾರೆ. ಕಳೆದ ವರ್ಷ ತಮ್ಮ ಹೇರ್‌ಕೇರ್ ಬ್ರ್ಯಾಂಡ್ ಅನ್ನು ಪ್ರಚಾರ ಮಾಡುವ ಸಲುವಾಗಿ ದೇಶಕ್ಕೆ ಬಂದಿದ್ದರು. ಆದರೆ ಪುತ್ರಿಯೊಂದಿಗೆ ಬಂದಿರುವುದು ಅವರ ಮೊದಲ ಭೇಟಿ ಆಗಿದೆ. ಇದೀಗ ಮುಂಬೈನಲ್ಲಿ ಮಗಳೊಂದಿಗೆ ಸಿದ್ದಿವಿನಾಯಕನ ದರ್ಶನವನ್ನು ಪಡೆದಿದ್ದಾರೆ.
ಇದನ್ನೂ ಓದಿ:ಸಿಟಾಡೆಲ್ ಏಷ್ಯಾ ಪೆಸಿಫಿಕ್ ಪ್ರೀಮಿಯರ್‌ನಲ್ಲಿ ಮಿಂಚಿದ ಪ್ರಿಯಾಂಕಾ ಚೋಪ್ರಾ