ಭಾರತೀಯ ಕ್ರಿಕೆಟಿಗರು ತಮ್ಮ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ ಬಳಿಕ ಬೇರೊಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಕೆಲವರು ಕ್ರಿಕೆಟ್ನಿಂದ ದೂರ ಉಳಿಯಲು ಇಚ್ಛಿಸದೇ ಅದೇ ಕ್ಷೇತ್ರದಲ್ಲಿ ಕೋಚ್ ಆಗಿ ಮುಂದುವರೆಯುತ್ತಾರೆ. ಇನ್ನು ಕೆಲವರು ಬ್ಯುಸಿನೆಸ್ ಫೀಲ್ಡ್ ಅನ್ನು ಆಯ್ದುಕೊಳ್ಳುವರು. ಮತ್ತೊಂದಿಷ್ಟು ಜನರು ಚಿತ್ರರಂಗದತ್ತ ಮುಖ ಮಾಡುತ್ತಾರೆ. ಆದರೆ, ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಸರಿಯಾದ ಯಶಸ್ಸು ಸಿಗದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರ ಬಗ್ಗೆ ಇಲ್ಲಿದೆ ಮಾಹಿತಿ.
ಮಹೇಂದ್ರ ಸಿಂಗ್ ಧೋನಿ:ಮೈದಾನದಲ್ಲಿ ಬ್ಯಾಟ್ ಹಿಡಿದು ಫೋರ್, ಸಿಕ್ಸ್ ಬಾರಿಸುತ್ತಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಸಿನಿಮಾ ಮೇಲೆ ಹೆಚ್ಚು ಒಲವಿತ್ತು. ಹೀಗಾಗಿ 'ಧೋನಿ ಎಂಟರ್ಟೈನ್ಮೆಂಟ್' ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದರು. ಈ ಬ್ಯಾನರ್ನಲ್ಲಿ ನಿರ್ದೇಶಕಿಯಾಗಿ ಧೋನಿ ಪತ್ನಿ ಸಾಕ್ಷಿ ಸಿಂಗ್ ಮುಂದುವರೆದಿದ್ದಾರೆ.
ಧೋನಿ ಮತ್ತು ಅವರ ಪತ್ನಿ ಸಾಕ್ಷಿ ನಿರ್ಮಾಣದ ಮೊದಲ ಚಿತ್ರ 'ಲೆಟ್ಸ್ ಗೆಟ್ ಮ್ಯಾರೀಡ್' (ಎಲ್‌ಜಿಎಂ) ಜುಲೈ 28 ರಂದು ತೆರೆ ಕಂಡಿತ್ತು. ಸುಮಾರು 8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. 'ಎಲ್‌ಜಿಎಂ' ತಮಿಳು ಚಿತ್ರದಲ್ಲಿ ಹರೀಶ್ ಕಲ್ಯಾಣ್ ಮತ್ತು ಇವಾನಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.
ಇದನ್ನೂ ಓದಿ:ಪೇಸ್ ಬೌಲಿಂಗ್ ಬ್ಯಾಂಕ್: ಹರ್ಭಜನ್ ಸಿಂಗ್ ಸಲಹೆಯಂತೆ ಹಳ್ಳಿ ಪ್ರತಿಭೆಗಳಿಗೆ 'ಓಪನ್ ಟ್ರಯಲ್ಸ್'
ಹರ್ಭಜನ್ ಸಿಂಗ್:ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ 2021 ರಲ್ಲಿ 'ಫ್ರೆಂಡ್ಶಿಪ್' ಚಿತ್ರದಲ್ಲಿ ನಟಿಸಿದ್ದರು. ಭಾರಿ ನಿರೀಕ್ಷೆಗಳ ನಡುವೆ ತೆರೆಕಂಡಿದ್ದ ಚಿತ್ರ ಹಿಟ್ ಪಡೆಯಲಿಲ್ಲ. ನಟನೆಗೆ ಬರಬೇಕೆಂದುಕೊಂಡಿದ್ದ ಹರ್ಭಜನ್ಗೆ ಇದು ಕಹಿ ಅನುಭವವಾಗಿ ಪರಿಣಮಿಸಿತು.
ಇರ್ಫಾನ್ ಪಠಾಣ್:ಟೀಂ ಇಂಡಿಯಾದ ಮಾಜಿ ಸ್ಟಾರ್ ವೇಗಿ ಇರ್ಫಾನ್ ಪಠಾಣ್ ತಮಿಳು ಚಿತ್ರರಂಗಕ್ಕೆ ನಟನಾಗಿ ಪಾದಾರ್ಪಣೆ ಮಾಡಿದರು. 2022 ರಲ್ಲಿ ತೆರೆಕಂಡ ಕಾಲಿವುಡ್ ಸ್ಟಾರ್ ಹೀರೋ ವಿಕ್ರಮ್ ಅವರೊಂದಿಗೆ 'ಕೋಬ್ರಾ' ಚಿತ್ರದಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾ ಪ್ರೇಕ್ಷಕರನ್ನು ತಲುಪುವಲ್ಲಿ ವಿಫಲವಾಯಿತು. ಜೊತೆಗೆ ಬಾಕ್ಸ್ ಆಫೀಸ್ನಲ್ಲಿ ಸೋಲು ಕಂಡಿತು. ಇದರಿಂದಾಗಿ ಇರ್ಫಾನ್ ಪಠಾಣ್ ಸಿನಿಮಾಗಳಿಂದ ದೂರ ಉಳಿದರು.
ಶ್ರಿಶಾಂತ್ ಶರ್ಮಾ:ಫಿಕ್ಸಿಂಗ್ ಆರೋಪದಿಂದಾಗಿ ಟೀಂ ಇಂಡಿಯಾ ಬೌಲರ್ ಶ್ರೀಶಾಂತ್ ಶರ್ಮಾ ತಂಡದಲ್ಲಿ ಸ್ಥಾನ ಕಳೆದುಕೊಂಡರು. ಮತ್ತೆ ತಂಡಕ್ಕೆ ಸೇರಲು ಸಾಕಷ್ಟು ಪ್ರಯತ್ನಪಟ್ಟರು. ಆದರೆ ಅದ್ಯಾವುದು ಆಗಲಿಲ್ಲ. ಹೀಗಾಗಿ ಸಿನಿಮಾಗಳತ್ತ ಮುಖ ಮಾಡಿದ ಸ್ಟಾರ್ ಆಟಗಾರ ತಮ್ಮ ವೃತ್ತಿಜೀವನದಲ್ಲಿ ಈವರೆಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಯಾವ ಸಿನಿಮಾವೂ ಅವರಿಗೆ ಸ್ಟಾರ್ ಪಟ್ಟ ತಂದುಕೊಡಲಿಲ್ಲ. ಇತ್ತೀಚೆಗೆ ಕಾಲಿವುಡ್ ನಿರ್ದೇಶಕ ವಿಘ್ನೇಶ್ ಶಿವನ್ ಅವರ 'ಕತ್ತು ವಕೀಲ್ ದೌ ಕಡಲ್' ಸಿನಿಮಾದಲ್ಲಿ ನಟಿಸಿದ್ದರು. ಇದು ಕೂಡ ಫ್ಲಾಪ್ ಆಯಿತು.
ಇದನ್ನೂ ಓದಿ:LGM movie: ಧೋನಿ ಅಭಿಮಾನಿಗಳಿಗೆ ನಿರಾಸೆ; ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸೋತ 'ಎಲ್‌ಜಿಎಂ'