ಮಿಲ್ಕಿ ಬ್ಯೂಟಿ ತಮನ್ನಾ ಸೌಂದರ್ಯಕ್ಕೆ ಅನೇಕರು ಮಾರು ಹೋಗಿದ್ದಾರೆ. ಸದಾ ಹೊಳೆಯುವಂತೆ ಕಾಣುವ ಚರ್ಮ ಮತ್ತು ಸುಂದರವಾದ ಕೂದಲಿಗೆ ಹುಡುಗಿಯರಂತೂ ಫಿದಾ ಆಗಿದ್ದಾರೆ. ಈ ಬಗ್ಗೆ ತಮನ್ನಾ ತನ್ನ ಸೌಂದರ್ಯಕ್ಕೆ ನೈಸರ್ಗಿಕ ಪದಾರ್ಥಗಳೇ ಕಾರಣ ಎಂದು ಅನೇಕ ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ಈ ಚೆಲುವೆ ಮತ್ತೊಮ್ಮೆ ಲಾಕ್ಮೆ ಫ್ಯಾಶನ್ ವೀಕ್ನಲ್ಲಿ ತಮ್ಮ ಬ್ಯೂಟಿ ಬಗ್ಗೆ ಮಾತನಾಡಿದ್ದಾರೆ. ಖ್ಯಾತ ಡಿಸೈನರ್ ಪ್ರೀತಿ ಜೈನ್ ವಿನ್ಯಾಸಗೊಳಿಸಿದ ದೇಹವನ್ನು ಅಪ್ಪಿಕೊಳ್ಳುವ ಕಪ್ಪು ಬಣ್ಣದ ಉಡುಗೆಯಲ್ಲಿ ಹಾಲ್ಗೆನ್ನೆ ಸುಂದರಿ ಈ ವೇದಿಕೆಯಲ್ಲಿ ಕಾಣಿಸಿಕೊಂಡರು. ಹಾಗಾದರೆ ಏನವರ ಸೌಂದರ್ಯದ ಗುಟ್ಟು.
ರೇಷ್ಮೆಯಂತ ಕೂದಲಿಗಾಗಿ ಹೀಗೆ ಮಾಡಿ: ನನ್ನ ರೇಷ್ಮೆಯಂತಹ ಕೂದಲನ್ನು ನಾನು ಪ್ರೀತಿಸುತ್ತೇನೆ. ಆದರೆ ಇಷ್ಟು ಚೆಂದದ ಕೂದಲಿನ ಹಿಂದೆ ಒಂದು ರಹಸ್ಯವಿದೆ. ನಾನು ಕೂದಲಿಗೆ ತೆಂಗಿನ ಎಣ್ಣೆ ಮತ್ತು ಈರುಳ್ಳಿ ರಸ ಮಿಶ್ರಣ ಮಾಡಿದ ಹೇರ್ ಆಯಿಲ್ ಅನ್ನು ಬಳಸುತ್ತೇನೆ. ವಾರಕ್ಕೊಮ್ಮೆ ಈ ಎಣ್ಣೆಯಿಂದ ನಿಮ್ಮ ಕೂದಲು ಮತ್ತು ನೆತ್ತಿಯನ್ನು ಮಸಾಜ್ ಮಾಡಿ. ಅದರ ನಂತರ ಪಪ್ಪಾಯಿ ಮತ್ತು ಆಮ್ಲಾ ಮುಂತಾದ ಪದಾರ್ಥಗಳಿಂದ ಮಾಡಿದ ಹೇರ್ವಾಶ್ನಿಂದ ನಿಮ್ಮ ಕೂದಲನ್ನು ತೊಳೆಯಿರಿ. ಈ ದಿನಚರಿಯು ನನ್ನ ಕೂದಲನ್ನು ರೇಷ್ಮೆಯಂತಾಗಿಸುತ್ತದೆ ಮತ್ತು ಹೊಳೆಯುವಂತೆ ಮಾಡುತ್ತದೆ. ಜೊತೆಗೆ ಕೂದಲು ದಟ್ಟವಾಗಿ ಬೆಳೆಯುತ್ತದೆ.
ಐಸ್ವಾಟರ್ನಿಂದ ಈ ಸಮಸ್ಯೆ ದೂರ: ರಾತ್ರಿ ತಡವಾಗಿ ಮಲಗಿದರೆ, ಸರಿಯಾಗಿ ನಿದ್ದೆ ಮಾಡದಿದ್ದರೆ ಅಥವಾ ಒತ್ತಡಕ್ಕೆ ಒಳಗಾಗಿದ್ದರೆ ಅದರ ಪರಿಣಾಮ ಮರುದಿನ ಎದ್ದಾಗ ಮುಖದ ಮೇಲೆ ಕಾಣುತ್ತದೆ. ಆದರೆ, ಈ ಸಮಸ್ಯೆಗೆ ನಾನು ಸರಳವಾದ ಸಲಹೆಯನ್ನು ಅನುಸರಿಸುತ್ತೇನೆ. ಅದೇನೆಂದರೆ ಒಂದು ಬೌಲ್ನಲ್ಲಿ ಐಸ್ ವಾಟರ್ ತೆಗೆದುಕೊಂಡು, ಕೆಲವು ಸೆಕೆಂಡ್ಗಳ ಕಾಲ ಅದರಲ್ಲಿ ನಿಮ್ಮ ಮುಖವನ್ನು ಅದ್ದಿ. ಹೀಗೆ ಮಾಡುವುದರಿಂದ ಚರ್ಮದ ರಂಧ್ರಗಳು ತೆರೆಯುತ್ತದೆ ಮತ್ತು ಪಫಿನೆಸ್ ಮಾಯವಾಗುತ್ತದೆ. ಜೊತೆಗೆ ನನ್ನ ಚರ್ಮವು ಮತ್ತೆ ಮೇಕಪ್ ಮಾಡಲು ಸಿದ್ಧವಾಗುತ್ತದೆ. ವೈಯಕ್ತಿಕ ಅನುಭವದಿಂದ ಹೇಳುವುದಾದರೆ ಈ ಸಲಹೆಯು ಅದ್ಭುತಗಳನ್ನು ಮಾಡುತ್ತದೆ. ನೀವು ಬೇಕಾದರೆ ಇದನ್ನು ಪ್ರಯತ್ನಿಸಿ.
ಇದು ನನ್ನ ನೆಚ್ಚಿನ ಫೇಸ್ ಪ್ಯಾಕ್:ನಾನು ಶೂಟಿಂಗ್ ಮಾಡುವಾಗ ಸಹಜವಾಗಿ ಮೇಕಪ್ ಮಾಡಬೇಕಾಗುತ್ತದೆ. ಆದರೆ, ವಾಸ್ತವವಾಗಿ ನಾನು ಮೇಕಪ್ ಇಲ್ಲದೇ ಇರಲು ಇಷ್ಟಪಡುತ್ತೇನೆ. ಹೀಗಾಗಿ ನಾನು ಹೆಚ್ಚಾಗಿ ಮನೆಯಲ್ಲಿ ಕಂಡುಬರುವ ನೈಸರ್ಗಿಕ ಪದಾರ್ಥಗಳ ಫೇಸ್ ಪ್ಯಾಕ್ ತಯಾರಿಸುತ್ತೇನೆ. ಬೇಳೆ ಹಿಟ್ಟು, ಅರಿಶಿನ, ಶ್ರೀಗಂಧ, ಮತ್ತು ಬೇವುಗಳಿಂದ ಮಾಡಿದ ಪ್ಯಾಕ್ ನನಗೆ ಹೆಚ್ಚು ಇಷ್ಟ. ಇದು ಉತ್ತಮ ಸ್ಕ್ರಬ್ ಆಗಿಯೂ ಕೆಲಸ ಮಾಡುತ್ತದೆ. ಇಷ್ಟೇ ಅಲ್ಲದೇ ನೀವು ತಿನ್ನುವ ಆಹಾರದ ಬಗ್ಗೆಯೂ ಜಾಗರೂಕರಾಗಿರಿ. ಚರ್ಮದ ಆರೋಗ್ಯ ಸುಧಾರಿಸಲು ಆವಕಾಡೊ ಮತ್ತು ಬ್ರೊಕೊಲಿಯನ್ನು ಹೆಚ್ಚು ಸೇವಿಸಿ. ಚೆನ್ನಾಗಿ ನೀರು ಕುಡಿಯಿರಿ.
ಆಹಾರ ಕ್ರಮಗಳನ್ನು ಅನುಸರಿಸಿ: ಸೌಂದರ್ಯ ಎನ್ನುವುದು ನಾವು ಬಳಸುವ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಮಾತ್ರವಲ್ಲ. ನಾವು ಸೇವಿಸುವ ಆಹಾರದ ಮೇಲೂ ಅವಲಂಬಿತವಾಗಿರುತ್ತದೆ. ಹೀಗಾಗಿ ವಿವಿಧ ರೀತಿಯ ಡಯಟ್ ಟ್ರೆಂಡ್ ಗಳನ್ನು ಅನುಸರಿಸುವುದು ಹಲವರ ಅಭ್ಯಾಸ. ನಾನು ಕೂಡ ಈ ಹಿಂದೆ ವಿವಿಧ ಆಹಾರ ಕ್ರಮಗಳನ್ನು ಅನುಸರಿಸಿದ್ದೇನೆ. ಆದರೆ ಯಾವುದೂ ಫಲಿಸಲಿಲ್ಲ.