ಮುಂಬೈ: ಬಹು ನಿರೀಕ್ಷಿತ ಓ ಮೈ ಗಾಡ್ -2 (OMG 2) ಚಿತ್ರ ಚಿತ್ರರಸಿಕರ ಮನ ತಣಿಸಲು ಸನ್ನದ್ಧವಾಗಿದೆ. ಆಗಸ್ಟ್ 11 ರಂದು ತೆರೆ ಮೇಲೆ ಅಪ್ಪಳಿಸಲಿದೆ. ಅಕ್ಷಯ್ ಕುಮಾರ್ ಬಹುನಿರೀಕ್ಷಿತ ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಅನುಮತಿ ಸಿಕ್ಕಿದೆ. ಸಿಬಿಎಫ್‌ಸಿ ಅನುಮತಿ ಬಳಿಕ ಮಾತನಾಡಿರುವ ನಟಿ ಯಾಮಿ ಗೌತಮ್ ಚಿತ್ರದ ಕುರಿತು ಮಾತನಾಡಿದ್ದಾರೆ. ಚಿತ್ರದಲ್ಲಿ ಯಾವುದೇ ವಿವಾದಿತ ಅಂಶಗಳಿಲ್ಲ ಎಂದು ಹೇಳಿದ್ದಾರೆ.
ಮಾಧ್ಯಮದ ಜತೆ ಮಾಡತನಾಡಿದ ಅವರು, ಈ ಚಿತ್ರವನ್ನು ಬಂದು ನೋಡಿದಾಗ ಗೊತ್ತಾಗುತ್ತದೆ. ಸಿನಿಮಾದಲ್ಲಿ ಅಂತಹ ಯಾವುದೇ ಸಂದೇಹಾತ್ಮಕ ಅಂಶಗಳಿಲ್ಲ ಎನ್ನುವುದನ್ನು ಅವರೇ ಕಂಡುಕೊಳ್ಳುತ್ತಾರೆ. ಅದರಲ್ಲೂ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಅತ್ಯಂತ ಮಹತ್ವದ ಹಾಗೂ ಸೂಕ್ಷ್ಮವಾದ ವಿಷಯವನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಇಡೀ ವಿಷಯವನ್ನು ಮನಮುಟ್ಟುವಂತೆ ಚಿತ್ರದಲ್ಲಿ ತೋರಿಸಲಾಗಿದೆ. ನ್ಯಾಯಾಲಯಗಳಲ್ಲಿ ನಡೆಯುವ ವಿಷಯಗಳನ್ನ ಪ್ರೇಕ್ಷಕರಿಗೆ ನೀಡಲಾಗಿದೆ. ಈ ಚಿತ್ರದಲ್ಲಿ ಹಾಸ್ಯ ಮತ್ತು ಸಾಕಷ್ಟು ಮನರಂಜನೆಯೂ ಇದೆ. ನಾನು ಸಹ ಈ ಚಿತ್ರದ ಭಾಗವಾಗಿರಲು ಸಂತೋಷಪಡುತ್ತೇನೆ ಎಂದು ಯಾಮಿ ಹೇಳಿದ್ದಾರೆ.
ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವ ನಟ ಪಂಕಜ್ ತ್ರಿಪಾಠಿ ಮಾತನಾಡಿ, ಚಿತ್ರವನ್ನು "ಮುನ್ನೆಚ್ಚರಿಕೆ ಮತ್ತು ಸೂಕ್ಷ್ಮತೆಯಿಂದ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ. “ಇದೊಂದು ಪ್ರಮುಖ ಕಥೆಯಾಗಿದ್ದು, ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಚಿತ್ರದ ಟೀಸರ್ ಬಿಡುಗಡೆಯಾದಾಗ ಸಾಕಷ್ಟು ವಿವಾದಗಳು ಎದ್ದಿದ್ದವು. ನಾನು ಚಿತ್ರದ ಬಗ್ಗೆ ತುಂಬಾ ಮಾತನಾಡಲು ಬಯಸುತ್ತೇನೆ ಮತ್ತು ಎಲ್ಲರಿಗೂ ಹೇಳಲು ಬಯಸುವುದೇನು ಎಂದರೆ ದಯವಿಟ್ಟು ಮೊದಲು ಸಿನಿಮಾ ನೋಡಿ, ಅರ್ಥ ಮಾಡಿಕೊಳ್ಳಿ, ಆ ಬಳಿಕ ನಿರ್ಣಯಕ್ಕೆ ಬನ್ನಿ. ನಾವು ಅತ್ಯಂತ ಜವಾಬ್ದಾರಿಯಿಂದ ಚಿತ್ರವನ್ನು ತಯಾರಿಸಿದ್ದೇವೆ. ಅಮಿತ್ ರೈ ಈ ಕಥೆಯನ್ನು ಬರೆಯಲು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ ಎಂದು ಅವರು ನೆನಪಿಸಿಕೊಂಡಿದ್ದಾರೆ.