ಹೈದರಾಬಾದ್: 'ಕೆಜಿಎಫ್' ಸಿನಿಮಾ ನೋಡಿದ ಬಳಿಕ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಅವರ ಅಭಿಮಾನಿಗಳು ಕಾಯುತ್ತಿರುವುದು 'ಸಲಾರ್' ಚಿತ್ರಕ್ಕಾಗಿ. ಅಂತಹ ನಿರೀಕ್ಷೆ ಹುಟ್ಟು ಹಾಕಿದವರು ನಿರ್ದೇಶಕ ಪ್ರಶಾಂತ್ ನೀಲ್. ಸಿನಿಮಾ ಆರಂಭದಿಂದಲೂ ಕುತೂಹಲ ಕಾಯ್ದಕೊಂಡಿರುವ ಚಿತ್ರತಂಡ ಈಗಾಗಲೇ ನಾವು ಮೊದಲೇ ಘೋಷಿಸಿದ ದಿನಾಂಕಕ್ಕೆ ಚಿತ್ರದ ಬಿಡುಗಡೆ ಮಾಡುತ್ತೇವೆ ಎಂಬ ಆಶ್ವಾಸನೆಯನ್ನು ನೀಡಿದ್ದರು.
ಇದಕ್ಕೂ ಮುನ್ನ ಅಭಿಮಾನಿಗಳು ಆದಷ್ಟು ಬೇಗ ಚಿತ್ರದ ಟೀಸರ್ ಬಿಡುಗಡೆ ಮಾಡುವಂತೆ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಚಿತ್ರ ತಂಡ ಮತ್ತು ನಿರ್ದೇಶಕರಿಗೆ ಮನವಿ ಮಾಡಿದ್ದರು. ಇದೀಗ ಅವರ ಕಾಯುವಿಕೆ ದಿನ ಅಂತ್ಯಗೊಂಡಿದೆ. ಚಿತ್ರ ತಂಡ 'ಸಲಾರ್' ಸಿನಿಮಾದ ಟೀಸರ್ ಬಿಡುಗಡೆ ದಿನವನ್ನು ಇದೀಗ ಅಧಿಕೃತಗೊಳಿಸಿದ್ದು, ಈ ಕುರಿತು ಬಿಗ್ ಅಪ್ಡೇಟ್ ನೀಡಿದೆ.
ವಿಜಯ್ ಕಿರಗುಂದೂರು ಅವರ ಹೊಂಬಾಳೆ ಚಿತ್ರದಲ್ಲಿ ಮೂಡಿ ಬರುತ್ತಿರುವ, ನಟ ಪ್ರಭಾಸ್ ನಟಿಸುತ್ತಿರುವ 'ಸಲಾರ್' ಚಿತ್ರ ಇದೇ ಜುಲೈ 6ಕ್ಕೆ ತಮ್ಮ ಚಿತ್ರದ ಟೀಸರ್ ಬಿಡುಗಡೆ ಮಾಡಲು ಸಜ್ಜಾಗಿದೆ. ಹೊಂಬಾಳೆಯ ಫಿಲ್ಮ್ಸ್ ಅವರ ಅಧಿಕೃತ ವೆಬ್ಸೈಟ್ನಲ್ಲಿ ಸಂಜೆ 5.12ಕ್ಕೆ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಈ ಕುರಿತು ವಿಡಿಯೋ ಮೂಲಕ ಸಿನಿಮಾ ತಂಡ ಅಪ್ಡೇಟ್ ನೀಡಿದೆ. ನಟ ಪ್ರಭಾಸ್ ಕ್ಯಾಮೆರಾಗೆ ಬೆನ್ನು ಹಾಕಿ ನಿಂತಿರುವ ಪೋಸ್ಟರ್ ಮೂಲಕ ಚಿತ್ರದ ಟೀಸರ್ ಅಪ್ಢೇಟ್ ನೀಡಲಾಗಿದೆ. ಇದರಲ್ಲಿ ನಟ ಪ್ರಭಾಸ್ ಕೊಡಲಿ ಹಿಡಿದಿರುವುದು ಕಾಣಬಹುದಾಗಿದೆ.
ಈ ಹಿಂದಿನ ವರದಿ ಪ್ರಕಾರ, ನಟ ಪ್ರಭಾಸ್ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಚಿತ್ರದ ಕಥೆಯ ಬಗ್ಗೆ ಒಂದು ಕಿಂಚಿತ್ತೂ ಸುಳಿವನ್ನು ತಂಡ ನೀಡಿಲ್ಲ. ಇನ್ನು ಹೇಳುವಂತೆ, ಪ್ರತ್ಯೇಕ ಎರಡು ಜಗತ್ತಿನಿಂದ ಬಂದ ಇಬ್ಬರು ದೂರ ಮತ್ತು ಸಾಂಸ್ಕೃತಿಕ ಭಿನ್ನತೆಗಳ ಹೊರತಾಗಿಯೂ ಲವಾರು ಸವಾಲುಗಳನ್ನು ದಾಟಿ ಒಂದಾಗುವ ಕಥಾನಕವನ್ನು ಹೊಂದಿದೆ ಎಂದು ತಿಳಿದು ಬಂದಿದೆ.
ಈ ಚಿತ್ರದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಮತ್ತು ನಟಿ ಶ್ರುತಿ ಹಾಸನ್ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಕನ್ನಡ, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಡಬ್ ಆಗಲಿದೆ. ಈ ಚಿತ್ರ ವರ್ಲ್ಡ್ ವೈಡ್ ಆಗಿ ಥಿಯೇಟರ್ನಲ್ಲಿ ಸೆಪ್ಟೆಂಬರ್ 28ಕ್ಕೆ ಬಿಡುಗಡೆಯಾಗಲಿದೆ. ಚಿತ್ರದ ಶೂಟಿಂಗ್ ವಿಳಂಬ ಆದರೂ ಮೊದಲು ಹೇಳಿದಂತೆ ಇದೇ ದಿನ ಚಿತ್ರ ಬಿಡುಗಡೆಯಾಗಲಿದ್ದು, ಇದರಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಚಿತ್ರತಂಡ ತಿಳಿಸಿದೆ.
ಇನ್ನೂ ಚಿತ್ರದ ಟೀಸರ್ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹೆಚ್ಚಿದ್ದು, ಇದು ಯಾವ ರೀತಿ ಮೂಡಿಬರಲಿದೆ ಎಂಬ ಕುತೂಹಲ ಮೂಡಿದೆ. ಚಿತ್ರದ ಟೀಸರ್ ಅಪ್ಡೇಟ್ ಕುರಿತು ಸಿನಿಮಾ ತಂಡ ತಿಳಿಸುತ್ತಿದ್ದಂತೆ ಟ್ವಿಟರ್ನಲ್ಲಿ ಸಲಾರ್ ಸಿನಿಮಾ ಮತ್ತು ನಟ ಪ್ರಶಾಂತ್ ನೀಲ್ ಟ್ರೆಂಡಿಂಗ್ ಆಗಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿರುವುದಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ:Allu Arjun & Trivikram: ಮತ್ತೊಮ್ಮೆ ಅಲ್ಲು ಅರ್ಜುನ್- ತ್ರಿವಿಕ್ರಮ್ ಕಾಂಬೋದಲ್ಲಿ ಹೊಸ ಸಿನಿಮಾ..