ಕರ್ನಾಟಕ

karnataka

ETV Bharat / entertainment

ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ ಮಿಲಿಯನ್​ ವೀಕ್ಷಣೆ ಪಡೆದ 'ಮಿಷನ್​ ಮಜ್ನು' ಟೀಸರ್​ - ಈಟಿವಿ ಭಾರತ್​ ಕನ್ನಡ

ಬಿಡುಗಡೆಯಾದ 13 ಗಂಟೆಯೊಳಗೆ ಮಿಷನ್​ ಮಜ್ನು ಟೀಸರ್​ 1.4 ಮಿಲಿಯನ್​ ವೀಕ್ಷಣೆ ಪಡೆದಿದೆ.

ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ ಮಿಲಿಯನ್​ ವೀಕ್ಷಣೆ ಪಡೆದ 'ಮಿಷನ್​ ಮಜ್ನು' ಸಿನಿಮಾ
the-movie-mission-majnu-got-a-million-views-within-few-hour-of-its-release

By

Published : Dec 17, 2022, 10:48 AM IST

ಮುಂಬೈ:ಬಾಲಿವುಡ್​ನ ಬಹುನಿರೀಕ್ಷಿತ ಥ್ರಿಲ್ಲರ್​ ಸಿನಿಮಾ 'ಮಿಷನ್​ ಮಜ್ನು' ಚಿತ್ರದ ಟೀಸರ್​ ಶುಕ್ರವಾರ ಬಿಡುಗಡೆಯಾಗಿದೆ. ದೆಹಲಿಯ ಇಂಡಿಯಾ ಗೇಟ್​ ಬಳಿ ಭಾರತೀಯ ಗೂಢಚಾರಿಯ ಕಥೆ ಹೊಂದಿರುವ ಚಿತ್ರದ ಟೀಸರ್​ ಅನ್ನು ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದ 13 ಗಂಟೆಯೊಳಗೆ ಈ ಟೀಸರ್​ 1.4 ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಪಡೆದಿದೆ.

1970ರ ದಶಕದ ದೇಶಾಭಿಮಾನದ ಜೊತೆ ಪ್ರೀತಿಯ ಕಥೆಯನ್ನು ಈ ಚಿತ್ರ ಹೊಂದಿದೆ. ಭಾರತದ ಮೇಲೆ ಪಾಕಿಸ್ತಾನದ ಪರಮಾಣು ದಾಳಿಯನ್ನು ವಿಫಲಗೊಳಿಸುವ ಯತ್ನದ ಕಥೆ ಇದಾಗಿದೆ.

ಚಿತ್ರದ ನಾಯಕ ಸಿದ್ದಾರ್ಥ್​​ ಸಿನಿಮಾದ ಟೀಸರ್​ ಹಂಚಿಕೊಂಡಿದ್ದು, ಈ ಮಜ್ನು ಕೆಲಸ ಮಾಡುವ ವಿಧಾನ ಬೇರೆ ಎಂದು ಬರೆದುಕೊಂಡಿದ್ದಾರೆ. ಇನ್ನು, ಈ ಚಿತ್ರ 2023ರ ಜನವರಿಯಂದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಸಿದ್ದಾರ್ಥ್ ಭಾರತಕ್ಕಾಗಿ ಹೋರಾಡುವ ರಾ ಏಜೆಂಟ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವನ್ನು ಶಾಂತನು ಬಗ್ಚಿ ನಿರ್ದೇಶಿಸಿದ್ದರೆ, ಆರ್​ಎಸ್​ವಿಪಿ ಮತ್ತು ಜಿಬಿಎ ನಿರ್ಮಾಣ ಮಾಡಿದೆ. ಇನ್ನು, ರಶ್ಮಿಕಾ ಮಂದಣ್ಣ ಈ ಚಿತ್ರದ ನಾಯಕ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇಂಡಿಯಾ ಗೇಟ್​ ಬಳಿ ನನ್ನ ಚಿತ್ರದ ಟೀಸರ್​ ಬಿಡುಗಡೆಯಾಗುತ್ತಿರುವುದು ನಮ್ಮ ದೇಶಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ಆಗಿದೆ. ಭಾರತೀಯ ಏಜೆಂಟ್​ ಮಾತ್ರದಲ್ಲಿ ಪಾತ್ರ ಅಭಿನಯಿಸಿದ್ದು, ನಿಜಕ್ಕೂ ಹೃದಯ ತುಂಬಿದ ಅನುಭವ. ಇಂತಹ ಉತ್ತಮ ಪಾತ್ರ ನೀಡಿದ್ದಕ್ಕೆ ನಿರ್ದೇಶಕರಿಗೆ ಧನ್ಯವಾದಗಳು. ಜ, 20ರಂದು ನೆಟ್​ಫ್ಲಿಕ್ಸ್​ನಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ನೋಡಲು ಕಾತುರರಾಗಿರುವುದಾಗಿ ನಟ ಸಿದ್ದಾರ್ಥ್​​ ತಿಳಿಸಿದ್ದಾರೆ.

ಚಿತ್ರದ ಟೀಸರ್​ ಬಿಡುಗಡೆಯಾಗಿದ್ದು ಖುಷಿಯಾಗಿದ್ದು, ಪ್ರೀತಿ, ತ್ಯಾಗ ಮತ್ತು ಆ್ಯಕ್ಷನ್​ನಿಂದ ಕೂಡಿದ ಸಿನಿಮಾ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ನಮ್ಮ ದೇಶದ ನಿಜವಾದ ಮಜ್ನುಗಳಾದ ವೀರ ಯೋಧರ ಕಥೆಯಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

ಇದನ್ನೂ ಓದಿ: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ರಶ್ಮಿಕಾ ಬೆಂಬಲ.. ಟ್ರೋಲ್ ಆಗುತ್ತಿದ್ದ​​ ಬೆಡಗಿಗೆ ಈಗ ಮೆಚ್ಚುಗೆಗಳ ಸುರಿಮಳೆ

ABOUT THE AUTHOR

...view details