ಕನ್ನಡ ಚಿತ್ರರಂಗ ಯಶಸ್ಸಿನ ಹುಮ್ಮಸ್ಸಿನೊಂದಿಗೆ ಹೆಜ್ಜೆ ಇಡುತ್ತಿದೆ. ಕೇವಲ ಕರ್ನಾಟಕಕ್ಕೆ ಸೀಮಿತವಾಗಿದ್ದ ನಮ್ಮ ಸಿನಿಮಾ ರಂಗವೀಗ ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ತನ್ನ ಛಾಪು ಮೂಡಿಸಿದೆ. ಇದೀಗ ಕನ್ನಡ ಹೊಸ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿದ್ದು, ಹಾಡು, ಟ್ರೇಲರ್ಗಳಿಂದಲೇ ಪ್ರೇಕ್ಷಕರ ಮನಸ್ಸನ್ನು ಸೆಳೆಯುತ್ತಿದೆ.
ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಬಹು ತಾರಾಗಣ ಬಳಗವೇ ಇರುವ ‘ಹೊಂದಿಸಿ ಬರೆಯಿರಿ’ ಸಿನಿಮಾ ಫೆಬ್ರವರಿ 10ರಂದು ತೆರೆಕಾಣಲಿದೆ. ಈ ಚಿತ್ರದಲ್ಲಿ ನಟ ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹಾದೇವ್, ಅರ್ಚನಾ ಜೋಯಿಸ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಪ್ರಚಾರವನ್ನು ವಿಭಿನ್ನವಾಗಿ ಮಾಡುತ್ತಿರುವ ಚಿತ್ರತಂಡ ಅಂಚೆ ಪತ್ರದ ಮೂಲಕ ಕರುನಾಡಿನ ಮನೆ ಮನೆ ತಲುಪಲಿದೆ.
ಸಿನಿಮಾ ಪ್ರಚಾರದಲ್ಲಿ 'ಹೊಂದಿಸಿ ಬರೆಯಿರಿ' ಚಿತ್ರತಂಡ ಸಿನಿಮಾ ಪ್ರಚಾರದಲ್ಲಿ 'ಹೊಂದಿಸಿ ಬರೆಯಿರಿ': ಸಿನಿಮಾ ಮಾಡಿದ ಮೇಲೆ ಅದನ್ನು ಪ್ರೇಕ್ಷಕರಿಗೆ ತಲುಪಿಸುವುದೇ ದೊಡ್ಡ ಜವಾಬ್ದಾರಿ. ಆ ಕೆಲಸದಲ್ಲಿ ‘ಹೊಂದಿಸಿ ಬರೆಯಿರಿ’ ಚಿತ್ರತಂಡ ನಿರತವಾಗಿದ್ದು, ಕ್ರಿಯೇಟಿವ್ ಆಗಿ ಸಿನಿಮಾ ಪ್ರಚಾರಕ್ಕಿಳಿದಿದೆ. ಅಂಚೆ ಪತ್ರದಲ್ಲಿ ಸಿನಿಮಾ ಬಗ್ಗೆ ಬರೆದು ಅದನ್ನು ಮನೆ ಮನೆಗೆ ಕೊಡುವ ಮೂಲಕ ತಮ್ಮ ಸಿನಿಮಾಗೆ ಆಮಂತ್ರಣ ನೀಡುತ್ತಿದ್ದಾರೆ. ಇದರ ಜೊತೆಗೆ ಚಿತ್ರತಂಡ ಹದಿನೈದು ಸಾವಿರಕ್ಕೂ ಹೆಚ್ಚು ಮನೆ ವಿಳಾಸಗಳನ್ನು ಸಂಗ್ರಹಿಸಿ ಆ ಮನೆಗಳಿಗೆ ಪೋಸ್ಟ್ ಕಾರ್ಡ್ ಕಳಿಸಿಕೊಡುವ ಮೂಲಕ ಪ್ರಚಾರ ಕಾರ್ಯ ಮಾಡುತ್ತಿದೆ.
ಸಿನಿಮಾ ಪ್ರಚಾರದಲ್ಲಿ 'ಹೊಂದಿಸಿ ಬರೆಯಿರಿ' ಚಿತ್ರತಂಡ ಇದನ್ನೂ ಓದಿ:'ಕೆಡಿ' ಅಡ್ಡಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್
"ಪತ್ರಕ್ಕೆ ಒಂದು ಅವಿನಾಭಾವ ಹಾಗೂ ಆತ್ಮೀಯ ಸಂಬಂಧವಿದೆ. ಆದ್ದರಿಂದ ನಮ್ಮ ಸಿನಿಮಾವನ್ನು ಪತ್ರದ ಮೂಲಕ ಜನರಿಗೆ ತಲುಪಿಸಲು ತಯಾರಿ ಮಾಡಿಕೊಂಡಿದ್ದೇವೆ. ಪತ್ರದಲ್ಲಿ ಸಿನಿಮಾ ಬಗ್ಗೆ ಬರೆದು ಅದನ್ನು ನಾವು ಕಲೆಕ್ಟ್ ಮಾಡಿಕೊಂಡಿರುವ ವಿಳಾಸಕ್ಕೆ ಕಳುಹಿಸಿಕೊಡಲಾಗುವುದು. ನಿನ್ನೆ ಚಿತ್ರತಂಡ ವಿಜಯನಗರದಲ್ಲಿ ಈ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ. ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಗೂ ಪತ್ರ ತಲುಪಲಿದೆ" ಎಂದು ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ತಿಳಿಸಿದ್ದಾರೆ.
ಚಿತ್ರಕ್ಕೆ ಶಾಂತಿ ಸಾಗರ್ ಹೆಚ್.ಜಿ ಕ್ಯಾಮರಾ ನಿರ್ದೇಶನ, ಜೋ ಕೋಸ್ಟ ಸಂಗೀತ, ಕೆ. ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯವಿದೆ. ಮಾಸ್ತಿ, ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ರಾಮೇನಹಳ್ಳಿ ನಿರ್ದೇಶನದ ಜೊತೆ ಸ್ನೇಹಿತರೊಡಗೂಡಿ ಚಿತ್ರವನ್ನು ಸಂಡೇ ಸಿನಿಮಾಸ್ ಬ್ಯಾನರ್ ಅಡಿ ನಿರ್ಮಾಣ ಕೂಡ ಮಾಡಿದ್ದಾರೆ. ಈ ಸಿನಿಮಾದ ಹಾಡುಗಳಿಂದ ಮತ್ತು ಟ್ರೇಲರ್ನಿಂದ ಜನರ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಈ ಚಿತ್ರದ 'ಬದುಕಿ ಸುಮ್ಮನೆ' ಎಂಬ ಹಾಡು ರಿಲೀಸ್ ಮಾಡಲಾಗಿತ್ತು. ಈವರೆಗೂ ಈ ಹಾಡು ಯೂಟ್ಯೂಬ್ನಲ್ಲಿ 1 ಲಕ್ಷಕ್ಕೂ ಅಧಿಕ ವೀವ್ ಕಂಡಿದ್ದು ಪ್ರೇಕ್ಷಕರ ಗಮನ ಸೆಳೆದಿದೆ. ಇನ್ನು ಇದೇ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಹೊಂದಿಸಿ ಬರೆಯಿರಿ ಚಿತ್ರದ 'ಓ ಕವನ' ಎಂಬ ಮತ್ತೊಂದು ಹಾಡು ರಿಲೀಸ್ ಆಗಿತ್ತು. ಅಲ್ಲದೇ ಈ ಹಾಡನ್ನು ಮೋಹಕ ತಾರೆ ನಟಿ ರಮ್ಯಾ ಅವರು ಬಿಡುಗಡೆ ಮಾಡುವ ಮೂಲಕ ಚಿತ್ರ ತಂಡಕ್ಕೆ ಸಾಥ್ ನೀಡಿದ್ದರು. ಕಳೆದ ವರ್ಷ ನವೆಂಬರ್ 18ಕ್ಕೆ ತೆರೆ ಕಾಣಬೇಕಿದ್ದ ಚಿತ್ರ ಕಾರಣಾಂತರಗಳಿಂದ ಬಿಡುಗಡೆಗೊಂಡಿರಲಿಲ್ಲ.
ಇದನ್ನೂ ಓದಿ:ಸಿಂಹಪ್ರಿಯಾ ಮದುವೆಗೆ ಸ್ಪೆಷಲ್ ಗಿಫ್ಟ್ ಕೊಟ್ಟ 'ಯದಾ ಯದಾ ಹಿ' ಚಿತ್ರತಂಡ