ಕರ್ನಾಟಕ

karnataka

ETV Bharat / entertainment

ಸುದೀಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಟ್ರೇಲರ್ ಔಟ್ - ಸತ್ಯಗಳನ್ನು ಬಹಿರಂಗಪಡಿಸುತ್ತೆ ಈ ಸಿನಿಮಾ

ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಹಾಗೂ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಚಿತ್ರ ''ದಿ ಕೇರಳ ಸ್ಟೋರಿ'' ಟ್ರೇಲರ್ ಇದೀಗ ಬಿಡುಗಡೆಯಾಗಿದೆ. ಸಿನೆಮಾ ಸತ್ಯ ಘಟನೆಗಳನ್ನು ಆಧರಿಸಿದೆ. ಇದು ಹಿಂದೂ ಮಹಿಳೆಯರನ್ನು ಮತಾಂತರಕ್ಕಾಗಿ ಬ್ರೈನ್ ವಾಶ್ ಮಾಡುವ ಕಥೆಯ ಹಂದರವನ್ನು ಒಳಗೊಂಡಿದೆ ಎಂದು ಹೇಳುತ್ತಾರೆ ಚಿತ್ರದ ನಿರ್ದೇಶಕರು.

The Kerala Story trailer out
ದಿ ಕೇರಳ ಸ್ಟೋರಿ

By

Published : Apr 26, 2023, 9:34 PM IST

ಹೈದರಾಬಾದ್:ಸುದೀಪ್ತೋ ಸೇನ್ ಅವರ ಭಾರೀ ಕುತೂಹಲ ಕೆರಳಿಸಿರುವ ''ದಿ ಕೇರಳ ಸ್ಟೋರಿ'' ಚಿತ್ರದ ಟ್ರೇಲರ್ ಅನ್ನು ಇಂದು ಆನ್‌ಲೈನ್‌ನಲ್ಲಿ ಬಿಡುಗಡೆಗೊಳಿಸಲಾಯಿತು. ಚಿತ್ರಕ್ಕೆ ಸುದೀಪ್ತೋ ಸೇನ್ ಸೃಜನಶೀಲ ನಿರ್ದೇಶನವಿದೆ ಹಾಗೂ ನಿರ್ಮಾಪಕರಾದ ವಿಪುಲ್ ಅಮೃತಲಾಲ್ ಶಾ ಅವರ ಶ್ರಮವಿದೆ. ಪ್ರಮುಖ ಪಾತ್ರಗಳಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ಮತ್ತು ಸಿದ್ಧಿ ಇದ್ನಾನಿ ಒಳಗೊಂಡಿರುವ ತಾರಾಗಣವನ್ನು ಹೊಂದಿದೆ.

ಮೇ 5ಕ್ಕೆ ಚಿತ್ರ ಬಿಡುಗಡೆ:ಐಸಿಸ್‌ಗೆ ಸೇರಲು ಸಿರಿಯಾ ಮತ್ತು ಇರಾಕ್‌ಗೆ ಕಳುಹಿಸುವ ಮೊದಲು ಮತಾಂತರಕ್ಕೆ ಮೋಸ ಹೋದ ಕೇರಳದ ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗಿಯರ ನೈಜ ಕಥೆಯನ್ನು ಈ ಚಲನಚಿತ್ರ ಆಧರಿಸಿದೆ. ಮೇ 5 ರಂದು ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ರೆಸ್ಟೋರೆಂಟ್​ ಪ್ರವೇಶಿಸಲು ಉರ್ಫಿ ಜಾವೇದ್​ಗೆ ನಿರಾಕರಣೆ: ಪಬ್ಲಿಸಿಟಿ ಗಿಮಿಕ್​ ಎಂದ ನೆಟ್ಟಿಗರು!

'ದಿ ಕೇರಳ ಸ್ಟೋರಿ' ಸಿನಿಮಾಕ್ಕಿದೆ ಸಾಕಷ್ಟು ರಿಸರ್ಚ್​:ಚಲನಚಿತ್ರದ ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ ಅವರು ತಮ್ಮ ''ದಿ ಕೇರಳ ಸ್ಟೋರಿ'' ಚಿತ್ರದ ಬಗ್ಗೆ ಮಾತನಾಡಿದ್ದಾರೆ. ''ಇದರಲ್ಲಿ ನಟಿ ಅದಾ ಶರ್ಮಾ ಹಿಂದೂ ಮಲಯಾಳಿ ನರ್ಸ್ ಫಾತಿಮಾ ಬಾಯಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರು ಕೇರಳದಿಂದ ಕಾಣೆಯಾದ 32,000 ಮಹಿಳೆಯರಲ್ಲಿ ಒಬ್ಬರು. ನಂತರ ಅವರನ್ನು ಐಸಿಸ್‌ಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ನಂತರ ISIS (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ) ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗುತ್ತದೆ. ನೈಜ ಘಟನೆಗಳನ್ನಾಧರಿಸಿದ ಕಥೆಯಾಗಿರುವುದರಿಂದ ಸಾಕಷ್ಟು ರಿಸರ್ಚ್​ಗಳನ್ನು ಮಾಡಲಾಗಿದೆ. ಈ ಸಿನೆಮಾದಿಂದ ಎಲ್ಲರ ಮುಂದೆ ಸತ್ಯವನ್ನು ಹೊರತರುವ ಪ್ರಯತ್ನ ಮಾಡಲಾಗಿದೆ'' ಎಂದು ವಿಪುಲ್ ಹೇಳಿದರು.

ಇದನ್ನೂ ಓದಿ:ಅಭಿಮಾನಿಗಳನ್ನು ದೂರ ಸರಿಸಲು ಯತ್ನಿಸಿದ ಭದ್ರತಾ ಸಿಬ್ಬಂದಿ: ಮಲೈಕಾ ಅರೋರಾ ಮಾಡಿದ್ದೇನು ಗೊತ್ತಾ?

ಅನೇಕ ರಹಸ್ಯ ಸತ್ಯಗಳನ್ನು ಬಹಿರಂಗಪಡಿಸುತ್ತೆ ಈ ಸಿನಿಮಾ:"ಈ ಚಲನಚಿತ್ರಕ್ಕಾಗಿ ವರ್ಷಗಳಿಂದ ಸಂಶೋಧನೆ ಹಾಗೂ ಸತ್ಯ ಕಥೆಗಳ ಸಮ್ಮಿಲನವಾಗಿದೆ. ವಿಚಾರಗಳನ್ನು ಹಿಂದೆಂದೂ ಹೇಳಲು ಧೈರ್ಯ ಮಾಡಿಲ್ಲ. ದೀರ್ಘ ಕಾಲದವರೆಗೆ ಮರೆಮಾಚಲ್ಪಟ್ಟ ಅನೇಕ ರಹಸ್ಯ ಸತ್ಯಗಳನ್ನು ಈ ಸಿನಿಮಾ ಬಹಿರಂಗಪಡಿಸುತ್ತದೆ. ಇದು ಮಹಿಳೆಯರಿಗೆ ಒಡ್ಡುವ ಅಪಾಯಕಾರಿ ಬೆದರಿಕೆಯನ್ನು ತಿಳಿಸುತ್ತದೆ. ನಮ್ಮ ರಾಷ್ಟ್ರದ ಮತ್ತು ಭಾರತದ ವಿರುದ್ಧ ರೂಪಿಸಲಾಗುತ್ತಿರುವ ಈ ಪಿತೂರಿಯ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಸುದೀಪ್ತೋ ಸೇನ್ ನಿರ್ದೇಶನದ ಈ ಚಿತ್ರ, ಇದು ನಾಲ್ವರು ಮಹಿಳೆಯರ ಕಥೆಯಾಗಿದೆ. ಕೇರಳದ ಸಾಮಾನ್ಯ ಕಾಲೇಜು ವಿದ್ಯಾರ್ಥಿಗಳಿಂದ ಅವರು ಭಯೋತ್ಪಾದಕ ಸಂಘಟನೆಗಳ ಭಾಗವಾಗಿದ್ದು ಹೇಗೆ ಎಂಬುದನ್ನು ತಿಳಿಸುತ್ತದೆ ಎಂದು ವಿಪುಲ್ ಅವರು ಸಿನಿಮಾದ ಕುರಿತು ಮಾಹಿತಿ ನೀಡಿದರು.

ಇದನ್ನೂ ಓದಿ:ಕನಸುಗಾರ ರವಿಚಂದ್ರನ್ ಸುಪುತ್ರನ ಸಿನಿಮಾ ಶೀರ್ಷಿಕೆ ಅನಾವರಣ: ಕ್ಯಾಚಿ ಟೈಟಲ್​ನೊಂದಿಗೆ ಬಂದ ವಿಕ್ರಮ್

ABOUT THE AUTHOR

...view details