ಸ್ಯಾಂಡಲ್ವುಡ್ನಲ್ಲಿ ದೊಡ್ಮನೆ ಹುಡುಗನ ಸಿನಿಮಾ ಹಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ರಾಜಕುಮಾರ್ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಪೆಪೆ’. ಟೈಟಲ್ ಮೂಲಕವೇ ಸ್ಯಾಂಡಲ್ ವುಡ್ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಸೃಷ್ಟಿಸುತ್ತಿದ್ದು, ಈ ಚಿತ್ರದ ರಗಡ್ ಟೀಸರ್ ಝಲಕ್ ಸಿನಿ ರಸಿಕರಲ್ಲಿ ಒಂದಷ್ಟು ಕುತೂಹಲವನ್ನು ಹುಟ್ಟು ಹಾಕಿದೆ. ಇದೀಗ ಚಿತ್ರತಂಡ ಹೊಸ ವರ್ಷಕ್ಕೆ ಮಾಸ್ ಫೀಲ್ ಇರೋ ರಗಡ್ ಪೋಸ್ಟರ್ ಬಿಡುಗಡೆ ಮಾಡಿದೆ. ವಿನಯ್ ರಾಜ್ ಕುಮಾರ್ ಹೊಸ ಅವತಾರ, ಮಾಸ್ ಲುಕ್ ಚಿತ್ರ ಪ್ರೇಮಿಗಳ ಗಮನ ಸೆಳೆಯುತ್ತಿದೆ.
ಬಹುತೇಕ ಚಿತ್ರೀಕರಣ ಕಂಪ್ಲೀಟ್:ಬಹುತೇಕ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಶ್ರೀಲೇಶ್ ಎಸ್ ನಾಯರ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೊದಲ ಸಿನಿಮಾ ಇದಾಗಿದೆ. ಗ್ಯಾಂಗ್ ಸ್ಟಾರ್ ಕಥೆ ಆಧಾರಿತ ಸಿನಿಮಾ ಕೂಡಾ ಆಗಿದೆ. ವಿನಯ್ ರಾಜ್ ಕುಮಾರ್ ತಮ್ಮ ಈ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಡಿಫ್ರೆಂಟ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದೇ ಶೈಲಿಯ ಸಿನಿಮಾಗೆ ಒಗ್ಗಿ ಕೊಳ್ಳದೇ, ಪ್ರತಿ ಬಾರಿ ವಿಭಿನ್ನ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ವಿನಯ್ ರಾಜ್ ಕುಮಾರ್ ಈ ಚಿತ್ರದಲ್ಲಿ ಸಂಪೂರ್ಣವಾಗಿ ಬೇರೆಯದ್ದೇ ಅವತಾರ ತಾಳಿದ್ದಾರೆ. ದೊಡ್ಮನೆ ಅಭಿಮಾನಿ ಬಳಗ ವಿನಯ್ ಲುಕ್ ಕಂಡು ಥ್ರಿಲ್ ಆಗಿದ್ದು, ಸಿನಿಮಾ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.