ಕರ್ನಾಟಕ

karnataka

ETV Bharat / entertainment

'ದಿ ಡಾರ್ಕ್ ವೆಬ್​': ಫಸ್ಟ್​​ ಲುಕ್​ ಬಿಡುಗಡೆಗೊಳಿಸಿದ ವಸಿಷ್ಠ ಸಿಂಹ - ನಟ ವಸಿಷ್ಠ ಸಿಂಹ

The Dark Web movie first look released: ಸೈಬರ್ ಕ್ರೈಂ ಆಧಾರಿತ 'ದಿ ಡಾರ್ಕ್ ವೆಬ್' ಸಿನಿಮಾದ ಫಸ್ಟ್ ಲುಕ್ ಅನ್ನು ನಟ ವಸಿಷ್ಠ ಸಿಂಹ ರಿಲೀಸ್ ಮಾಡಿದ್ದಾರೆ.

The Dark Web
ದಿ ಡಾರ್ಕ್ ವೆಬ್

By ETV Bharat Karnataka Team

Published : Nov 27, 2023, 2:13 PM IST

'ದಿ ಡಾರ್ಕ್ ವೆಬ್'​ ಸಿನಿಮಾದ ಫಸ್ಟ್​​ ಲುಕ್​ ರಿಲೀಸ್

ಪತ್ರಕರ್ತ ಮಂಜು ಬನವಾಸೆ ಹಾಗೂ ಹೆತ್ತೂರು ನಾಗರಾಜ್ ಎಂ.ಎನ್​ ತಮ್ಮ ಸಿನಿಮಾ ಬ್ಯಾನರ್ ಅಡಿಯಲ್ಲಿ ಸೈಬರ್ ಕ್ರೈಂ ಆಧಾರಿತ 'ದಿ ಡಾರ್ಕ್ ವೆಬ್' ಎಂಬ ಸಿನಿಮಾ ನಿರ್ಮಿಸಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ. ಸಿನಿಮಾದ ಫಸ್ಟ್ ಲುಕ್ ಅನ್ನು ನಟ ವಸಿಷ್ಠ ಸಿಂಹ ರಿಲೀಸ್ ಮಾಡಿದ್ದಾರೆ.

ಹಾಸನದ ಪತ್ರಕರ್ತರು ಸೇರಿ ಮಾಡಿರುವ ಸಿನಿಮಾ ಬಗ್ಗೆ ವಸಿಷ್ಠ ಸಿಂಹ ಮೆಚ್ಚುಗೆಯ ಮಾತುಗಳನ್ನಾಡಿದರು. "ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ ಎಂಬ ಮಾತಿನಂತೆ ನಮ್ಮೂರು ಎಂದರೆ ಬರುವ ಭಾವನೆಯೇ ಬೇರೆ. ನನ್ನೂರು ಹಾಸನ ಎನ್ನುವುದು ಹೆಮ್ಮೆ. ಈಗ ಇಲ್ಲಿಯೂ ಸಾಕಷ್ಟು ಜನರು ಚಿತ್ರೋದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಆ ಸಂಖ್ಯೆ ಇನ್ನೂ ಹೆಚ್ಚಬೇಕು" ಎಂದರು.

ನಾಯಕನಾಗಿ ಚೇತನ್ ಕಾಣಿಸಿಕೊಂಡಿದ್ದಾರೆ. ಬಹುತೇಕ ಪತ್ರಕರ್ತರೇ ಅಭಿನಯಿಸಿರುವುದು ವಿಶೇಷತೆ. ಮಂಜು ಬನವಾಸೆ ನಿರ್ಮಾಣದ ಜೊತೆಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಕಿರಣ್ ಸ್ವಾಮಿ ನಿರ್ದೇಶನ ಮಾಡಿದ್ದಾರೆ. ಚಂದ್ರಮೌಳಿ ಕ್ಯಾಮೆರಾ ವರ್ಕ್ ಇದ್ದು, ವಿಶಾಕ್ ನಾಗಲಾಪುರ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ:ಶುರುವಾಯ್ತು ಹೊಸಬರ "ಜರ್ನಿ" ಸಿನಿಮಾ; ನಿರೂಪಣೆಯಿಂದ ನಿರ್ದೇಶನದತ್ತ ಮುಖ ಮಾಡಿದ ಅಗ್ನಿ

ABOUT THE AUTHOR

...view details