ಜಗತ್ತಿನಾದ್ಯಂತ ವಿಕ್ರಾಂತ್ ರೋಣ ಸಿನಿಮಾದ ಹವಾ ಜೋರಾಗಿದೆ. ಅದಕ್ಕೆ ಕಾರಣ ಕಿಚ್ಚ ಸುದೀಪ್ ಅಂಡ್ ಟೀಮ್ ವಿಶ್ವಾದ್ಯಂತ ಮಾಡಿರುವ ಅದ್ಧೂರಿ ಪ್ರಚಾರದ ಜೊತೆಗೆ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ಗಳು ವಿಕ್ರಾಂತ್ ರೋಣ ಸಿನಿಮಾವನ್ನು ಮೆಚ್ಚಿಕೊಂಡಿರೋದು. ನಾಳೆ (ಗುರುವಾರ) ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದ ಅದ್ಧೂರಿ ಮೇಕಿಂಗ್ ಹೊಂದಿರುವ ಈ ಸಿನಿಮಾದ ಬಿಡುಗಡೆ ಆಗಲಿದೆ.
ವಿಕ್ರಾಂತ್ ರೋಣ ಸಿನಿಮಾ ವಿಶ್ವಾದ್ಯಂತ ಬರೋಬ್ಬರಿ 2,500 ಸಾವಿರ ಚಿತ್ರಮಂದಿಗಳಲ್ಲಿ ಬಿಡುಗಡೆ ಆಗುತ್ತಿದೆ. ನಿರ್ಮಾಪಕ ಜಾಕ್ ಮಂಜು ಪ್ರಕಾರ ವರ್ಲ್ಡ್ ವೈಡ್ ಮೊದಲ ದಿನ 9000ಕ್ಕೂ ಅಧಿಕ ಶೋಗಳು ಆಗುತ್ತಿವೆಯಂತೆ. ಕರ್ನಾಟಕದಲ್ಲಿ ಕಿಚ್ಚನ ಅಭಿಮಾನಿಗಳು ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಯನ್ನ ಹಬ್ಬದಂತೆ ಆಚರಿಸಲು ರೆಡಿಯಾಗಿದ್ದಾರೆ.
ಕರುನಾಡಿನಲ್ಲಿ ಮೊದಲ ದಿನ 325 ಸಿಂಗಲ್ ಸ್ಕ್ರೀನ್, 65 ಮಲ್ಟಿಪ್ಲೆಕ್ಸ್ನಲ್ಲಿ ವಿಕ್ರಾಂತ್ ರೋಣ ಸಿನಿಮಾವನ್ನ ಬಿಡುಗಡೆ ಮಾಡಲಾಗುತ್ತಿದೆ. ಮೊದಲ ದಿನ ರಾಜ್ಯದಲ್ಲಿ ಬರೋಬ್ಬರಿ 2,500 ಶೋಸ್ ನಡೆಯುವ ಸಾಧ್ಯತೆ ಇದೆ. ಸುಮಾರು 900 ಸ್ಕ್ರೀನ್ 3ಡಿ ಹಾಗೂ 1,600 ಸ್ಕ್ರೀನ್ನಲ್ಲಿ 2ಡಿ ವರ್ಷನ್ನಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಇದರ ಜೊತೆಗೆ ಬೆಂಗಳೂರಿನಲ್ಲಿ ಕಿಚ್ಚನ ಹವಾ ಜೋರಾಗಿದ್ದು, ಇಲ್ಲಿ 40 ಮಲ್ಟಿಪ್ಲೆಕ್ಸ್ನಲ್ಲಿ 800 ಶೋ, ಒಟ್ಟು 70 ಸಿಂಗಲ್ ಸ್ಕ್ರೀನ್ನಲ್ಲಿ 400 ಶೋ ಆಗಲಿದೆ.
ಬೆಳಗ್ಗೆ 6 ಗಂಟೆಗೆಯಿಂದ ವಿಕ್ರಾಂತ್ ರೋಣ ಸಿನಿಮಾದ ಶೋ ಆರಂಭ ಆಗಲಿದೆ. ಶಂಕರ್ ನಾಗ್ ಚಿತ್ರಮಂದಿರದಲ್ಲಿ ಬೆಳಗ್ಗೆ 5.30ಕ್ಕೆ ಮೊದಲ ಶೋ ಸ್ಟಾರ್ಟ್ ಆಗುತ್ತಿದೆ. ದೇಶದಲ್ಲೇ ಶಂಕರ್ ನಾಗ್ ಚಿತ್ರಮಂದಿರದಲ್ಲೇ ಮೊದಲ ಶೋ ಆಗಲಿದೆ.ಇನ್ನು ವಿಕ್ರಾಂತ್ ರೋಣಗೆ ಮೇನ್ ಥಿಯೇಟರ್ ಕಾನ್ಸೆಪ್ಟ್ ಇರುವುದಿಲ್ಲ. ಊರ್ವಶಿಯಲ್ಲಿ ಬೆಳಗ್ಗೆ 7 ಗಂಟೆಗೆ ಅನೂಪ್ ಭಂಡಾರಿ & ಟೀಮ್ ಬರಲಿದ್ದಾರೆ. ವೀರೇಶ್ ಥಿಯೇಟರ್ ನಲ್ಲಿ ಸಹ ದೊಡ್ಡ ಮಟ್ಟದ ಸೆಲೆಬ್ರೇಷನ್ ಮಾಡಲು ಫ್ಯಾನ್ಸ್ ಪ್ಲ್ಯಾನ್ ಮಾಡಿದ್ದಾರೆ.