ಬಾಲಿವುಡ್ ದಿಗ್ಗಜರ ಮಕ್ಕಳು ಮೊಮ್ಮಕ್ಕಳು ಅಭಿನಯಿಸಿರುವ ಚೊಚ್ಚಲ ಚಿತ್ರ 'ದಿ ಆರ್ಚೀಸ್'. ಬಹು ನಿರೀಕ್ಷಿತ ದಿ ಆರ್ಚೀಸ್ ಸಿನಿಮಾದ ಟ್ರೇಲರ್ ಇಂದು ಅನಾವರಣಗೊಂಡಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಡಿಸೆಂಬರ್ 7 ರಂದು ಬಿಡುಗಡೆ ಆಗಲಿರುವ ಈ ಚಿತ್ರ ಒಂದು ಯುವಕರ ತಂಡದ ಕಥೆ ಹೇಳಲಿದೆ. ವಿದ್ಯಾಭ್ಯಾಸದ ಅವಧಿ, ಪ್ರೀತಿ - ಸ್ನೇಹ, ಮನರಂಜನೆ ಜೊತೆಗೆ ಭಾವನಾತ್ಮಕ ಕ್ಷಣಗಳು ಎಲ್ಲವನ್ನೂ ಈ ಸಿನಿಮಾ ಒಳಗೊಂಡಿದ್ದು, ಇಂದು ಬಿಡುಗಡೆ ಆಗಿರುವ ಟೀಸರ್ ಕಥೆಯ ಒಂದು ಸಣ್ಣ ನೋಟ ಕೊಟ್ಟಿದೆ.
ರಿವರ್‌ಡೆಲ್ ಎಂಬ ಕಾಲ್ಪನಿಕ ಗುಡ್ಡಗಾಡು ಪಟ್ಟಣದಲ್ಲಿ ಕಥೆ ಸಾಗುತ್ತದೆ. ಟೀಸರ್ನಲ್ಲಿ ಸುಂದರ ನೈಸರ್ಗಿಕ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಈ ದೃಶ್ಯಗಳು ಅಮೆರಿಕದ ಖ್ಯಾತ ನಿರ್ದೇಶಕ ವೆಸ್ ಆಂಡರ್ಸನ್ ನಿರ್ದೇಶನ ಶೈಲಿಯ ವೈಬ್ಸ್ ಅನ್ನು ಹೊರಸೂಸಿವೆ. 1964ರ ಕಾಲಘಟ್ಟ. ಪ್ರೇಕ್ಷಕರು ಬಹಳ ಹಿಂದಿನ ಕಾಲಕ್ಕೆ ತಮ್ಮ ಮನಸ್ಸನ್ನು ಕೊಂಡೊಯ್ಯಲಿದ್ದಾರೆ. ಸಿನಿಮಾ ಮುದ್ದಾದ ಹುಡುಗಿಯರು, ಹ್ಯಾಂಡ್ಸಂ ಬಾಯ್ಸ್ನ ಸ್ನೇಹ, ಪ್ರೀತಿ, ಸ್ವಾತಂತ್ರ್ಯ, ಹಾರ್ಟ್ಬ್ರೇಕ್ ವಿಷಯಗಳನ್ನು ಬಹಳ ಅಚ್ಚುಕಟ್ಟಾಗಿ ತೋರಿಸಲಿದೆ ಎಂದು ಸಿನಿಪ್ರಿಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಚಿತ್ರ ಒಟಿಟಿ ಪ್ಲಾಟ್ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಡಿಸೆಂಬರ್ 7 ರಂದು ರಿಲೀಸ್ ಆಗಲಿದೆ.
ಸುಹಾನಾ ಖಾನ್, ಖುಷಿ ಕಪೂರ್ ಮತ್ತು ಅಗಸ್ತ್ಯ ನಂದಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆಕರ್ಷಕ ವಾತಾವರಣ, ಉತ್ಸಾಹಭರಿತ ಸಂಗೀತ, ಮನಮೋಹಕ ನೃತ್ಯ ಮತ್ತು ಕಥೆ ಪ್ರೇಕ್ಷಕರ ಗಮನವನ್ನು ಸಂಪೂರ್ಣವಾಗಿ ಹಿಡಿದಿಟ್ಟುಕೊಳ್ಳುವಂತೆ ತೋರುತ್ತಿದೆ. ಶಾರುಖ್ ಪುತ್ರಿ ಸುಹಾನಾ ಖಾನ್ ಅವರ ಚೊಚ್ಚಲ ಚಿತ್ರವಿದು. ಎಸ್ಆರ್ಕೆ ಪುತ್ರಿಯ ಮೊದಲ ಸಿನಿಮಾ ಎಂಬುದರ ಸಲುವಾಗಿ ಸಿನಿಮಾ ಮೇಲಿನ ಕುತೂಹಲ ದುಪ್ಪಟ್ಟಾಗಿದೆ.