ಹೈದರಾಬಾದ್: ಹಿಂದಿ ರಾಷ್ಟ್ರಭಾಷೆ ವಿಚಾರವಾಗಿ ಸ್ಯಾಂಡಲ್ವುಡ್ ನಟ ಸುದೀಪ್ ಹಾಗೂ ಬಾಲಿವುಡ್ನ ಅಜಯ್ ದೇವಗನ್ ನಡುವೆ ಉಂಟಾಗಿದ್ದ ಚರ್ಚೆ ಅಂತ್ಯಗೊಂಡಿದೆ. ನನಗೆ ಉಂಟಾಗಿದ್ದ ಗೊಂದಲಗಳನ್ನ ನಿವಾರಿಸಿದ್ದಕ್ಕಾಗಿ ಧನ್ಯವಾದಗಳು. ನಾನು ಇಡೀ ಚಿತ್ರರಂಗವನ್ನ ಒಂದೇ ಎಂದು ಭಾವಿಸುತ್ತೇನೆ. ಬೇರೆ ಭಾಷೆಗಳನ್ನ ಗೌರವಿಸುವ ರೀತಿಯಲ್ಲಿ ನಮ್ಮ ಭಾಷೆಯನ್ನೂ ಇತರರೂ ಗೌರವಿಸಬೇಕೆಂದು ಬಯಸುತ್ತೇನೆ. ಈ ನಡುವೆ ಅನುವಾದ ಮಾಡುವಾಗ ಅರ್ಥ ತಪ್ಪಾಗಿರಬಹುದು ಎಂದು ಹೇಳಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಕಿಚ್ಚ ಸುದೀಪ್, ಪ್ಯಾನ್ ಇಂಡಿಯಾ ವಿಚಾರವಾಗಿ ಮಾತನಾಡ್ತಿದ್ದ ವೇಳೆ ಹಿಂದಿ ರಾಷ್ಟ್ರ ಭಾಷೆ ಅಲ್ಲ, ಅದನ್ನ ರಾಷ್ಟ್ರೀಯ ಭಾಷೆಯನ್ನಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಇಂದು ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿದ್ದ ನಟ ಅಜಯ್ ದೇವಗನ್, ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದರೆ, ನಿಮ್ಮ ಚಿತ್ರಗಳನ್ನ ಹಿಂದಿಯಲ್ಲಿ ಡಬ್ ಮಾಡಿ ತೆರೆ ಕಾಣಿಸುತ್ತೀರಿ? ಎಂದು ಪ್ರಶ್ನೆ ಮಾಡಿದ್ದರು.