ಮುಂಬೈ: ಬಾಲಿವುಡ್ ನಟಿ ಭೂಮಿ ಪಡ್ನೇಕರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಥ್ಯಾಂಕ್ ಯು ಫಾರ್ ಕಮಿಂಗ್' ಟ್ರೈಲರ್ ಬಿಡುಗಡೆ ಆಗಿದೆ. ಕರಣ್ ಬೊಲಾನಿ ನಿರ್ದೇಶನದ ಈ ಚಿತ್ರ ಅಕ್ಟೋಬರ್ 6ರಂದು ಥಿಯೇಟರ್ ನಲ್ಲಿ ಬಿಡುಗಡೆ ಆಗಲಿದೆ. ಭೂಮಿ ಪಡ್ನೇಕರ್ ಹೊರತಾಗಿ ಶೆಹಾನಾಜ್ ಗಿಲ್, ಡೋಲಿ ಸಿಂಗ್, ಖುಷ್ ಕಪಿಲ, ಶಿಪಾನಿ ಬೆಡಿ, ಪ್ರದುಮನ್ ಸಿಂಗ್ ಮಾಲ್, ನತಾಶಾ ರಸ್ತೋಗಿ, ಗೌಟ್ಮಿಕ್, ಸುಶಾಂತ್ ದಿವ್ಗಿಕರ್, ಸಲೊನಿ ದೈನಿ, ಡೊಲಿ ಅಹುವಾಲಿಯಾ, ಕರಣ್ ಕುಂದ್ರಾ ಮತ್ತು ಅನಿಲ್ ಕಪೂರ್ ಕೂಡ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಚಿತ್ರದ ಟ್ರೈಲರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ, ಈ ರಾಜಕುಮಾರಿ ಕಥೆ ವಿಭಿನ್ನವಾಗಿದೆ. ಸಿನಿಮಾ ಮಂದಿರಕ್ಕೆ ಬರುವುದನ್ನು ಮರೆಯಬೇಡಿ. ಥ್ಯಾಂಕ್ ಯೂ ಫಾರ್ ಕಮಿಂಗ್ ಚಿತ್ರ ಅಕ್ಟೋಬರ್ 2023ಕ್ಕೆ ಬರಲಿದೆ ಎಂದು ಅಡಿಬರಹದೊಂದಿಗೆ ಚಿತ್ರದ ಹ್ಯಾಷ್ಟಾಗ್ನೊಂದಿಗೆ ಹಂಚಿಕೊಂಡಿದ್ದಾರೆ.
ಇದಕ್ಕೆ ಮೊದಲು ಭೂಮಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮುಂಬರುವ ಚಿತ್ರದ ಕುರಿತು ಪೋಸ್ಟರ್ ಅನ್ನು ಹಂಚಿಕೊಂಡಿದ್ದರು. ವಿಶೇಷ ಕಥೆ ಮತ್ತು ಪ್ರತಿಭಾನ್ವಿತ ತಾರೆಯರ ಸಮಾಗಮದ ಈ ಚಿತ್ರ ಈಗಾಗಲೇ ಅನೇಕರಲ್ಲಿ ಕುತೂಹಲ ಮೂಡಿಸಿದೆ. 'ಥ್ಯಾಂಕ್ ಯು ಫಾರ್ ಕಮಿಂಗ್' ಹೊಸ ರೀತಿಯ ಚಿತ್ರವಾಗಿದ್ದು ಈಗಾಗಲೇ ಅಭಿಮಾನಿಗಳು ಚಿತ್ರದ ಬಗ್ಗೆ ಕಾತುರತೆ ಹೊಂದಿದ್ದಾರೆ. ಈ ಚಿತ್ರದ ಟ್ರೈಲರ್ ಬಗ್ಗೆ ಕೂಡ ಅನೇಕ ಮಂದಿ ಕುತೂಹಲ ಹೊಂದಿದ್ದು, ಇದೀಗ ಟ್ರೈಲರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಾಮಿಡಿ ಡ್ರಾಮದ ಈ ಚಿತ್ರ ಕತೆಯನ್ನು ಬಾಲಾಜಿ ಮೋಷನ್ ಪಿಕ್ಚರ್ಸ್ ಅಡಿ ನಿರ್ಮಾಣ ಮಾಡಲಾಗುತ್ತಿದೆ.