ಸೂಪರ್ ಸ್ಟಾರ್ ದಳಪತಿ ವಿಜಯ್ ಲಿಯೋ ಸಿನಿಮಾ ಮತ್ತು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆನ್ನುವ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಈ ಹೊತ್ತಿನಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಫೈನ್ ಕಟ್ಟುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟ ವಿಜಯ್ ಕುರಿತು ಚರ್ಚೆ ಜೋರಾಗಿದೆ.
ರೆಡ್ ಲೈಟ್ ಸಿಗ್ನಲ್ ಜಂಪ್:ನಟ ವಿಜಯ್ ಮಕ್ಕಳ್ ಇಯಕ್ಕಂ (ವಿಎಂಐ) ಪಕ್ಷದ ಸದಸ್ಯರನ್ನು ಭೇಟಿಯಾದ ನಂತರ ಮನೆಗೆ ಹಿಂತಿರುಗುವಾಗ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ವರದಿಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಮಾಹಿತಿ, ಚಿತ್ರಗಳ ಪ್ರಕಾರ, ನಟ ಎರಡಕ್ಕಿಂತ ಹೆಚ್ಚು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ರೆಡ್ ಲೈಟ್ ಸಿಗ್ನಲ್ ಜಂಪ್ ಮಾಡಿದ್ದಾರೆಂದು ವರದಿ ಆಗಿದೆ. ಸಂಚಾರ ಪೊಲೀಸರು ಸೂಪರ್ ಸ್ಟಾರ್ಗೆ 500 ರೂ. ದಂಡ ವಿಧಿಸಿದ್ದಾರೆ.
ಅಭಿಮಾನಿಗಳಿಂದ ಕಣ್ತಪ್ಪಿಸಲು ಹೋಗಿ ರೂಲ್ಸ್ ಬ್ರೇಕ್: ನಟ ವಿಜಯ್ ಅವರ ಕಾರು ಮತ್ತು ಚಲನ್‌ನ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ವರದಿಗಳನ್ನು ನಂಬುವುದಾದರೆ, ದಳಪತಿ ವಿಜಯ್ ತಮ್ಮ ಕಾರನ್ನು ಹಿಂಬಾಲಿಸುತ್ತಿದ್ದವರ ಕಣ್ತಪ್ಪಿಸಲು ಹೋಗಿ ರೆಡ್ ಲೈಟ್ ಸಿಗ್ನಲ್ ಅನ್ನು ನಿರ್ಲಕ್ಷಿಸಬೇಕಾಯಿತು. ಅಭಿಮಾನಿಗಳು ಪನೈಯೂರಿನಿಂದ ನೀಲಾಂಗರೈನಲ್ಲಿರುವ ಅವರ ನಿವಾಸದವರೆಗೂ ನಟನನ್ನು ಫಾಲೋ ಮಾಡಿಕೊಂಡು ಬರುತ್ತಿದ್ದರು. ಅವರಿಂದ ತಪ್ಪಿಸಿಕೊಳ್ಳಲು ವಿಜಯ್ ಮತ್ತು ಅವರ ಕಾರು ಚಾಲಕ ರೆಡ್ ಲೈಟ್ ಸಿಗ್ನಲ್ ಅನ್ನು ಕ್ರಾಸ್ ಮಾಡಿದ್ದಾರೆನ್ನುವ ಮಾಹಿತಿ ಇದೆ.
ನಟನೆಯಿಂದ ಬ್ರೇಕ್-ರಾಜಕೀಯಕ್ಕೆ ಎಂಟ್ರಿ? ದಳಪತಿ ವಿಜಯ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದು, ನಟನೆಯಿಂದ ದೂರ ಸರಿಯುತ್ತಿದ್ದಾರೆ ಎಂಬ ವದಂತಿಗಳಿವೆ. ಅವರ ಸಿನಿಮಾ ಜೊತೆ ಜೊತೆಗೆ ರಾಜಕೀಯ ವಿಚಾರವಾಗಿ ಸದ್ಯ ಸುದ್ದಿಯಲ್ಲಿದ್ದಾರೆ. ಲಿಯೋ ಚಿತ್ರೀಕರಣ ಪೂರ್ಣಗೊಳಿಸಿದ ನಂತರ ಅವರು ಸೋಮವಾರದಂದು ವಿಜಯ್ ಮಕ್ಕಳ್ ಇಯಕ್ಕಂ (ವಿಎಂಐ) ಪಕ್ಷದ ಸದಸ್ಯರನ್ನು ಭೇಟಿಯಾಗಿದ್ದರು. ಪಕ್ಷದ ಸದಸ್ಯರೊಂದಿಗೆ ಚರ್ಚೆ ನಡೆಸಿದ್ದು, ಅವರ ಚಿತ್ರಗಳು ಇಂಟರ್ನೆಟ್ನಲ್ಲಿ ವೈರಲ್ ಆಗಿವೆ. ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಂತೆ ನಟನೆಯನ್ನು ತ್ಯಜಿಸಲಿದ್ದಾರೆ. ಮುಂಬರುವ ದಿನಗಳನ್ನು, ಸಮಯವನ್ನು ರಾಜಕೀಯ ಕ್ಷೇತ್ರದಲ್ಲಿ ವಿನಿಯೋಗಿಸಲು ಯೋಜಿಸುತ್ತಿದ್ದಾರೆ ಎಂಬುದು ಸದ್ಯ ಹರಿದಾಡುತ್ತಿರುವ ವದಂತಿ.
ಇದನ್ನೂ ಓದಿ:Shiva Rajkumar:''ನೀವ್ ಗನ್ನಲ್ಲಿ ಹೆದರಿಸಿದ್ರೆ, ನಾನ್ ಬರೀ ಕಣ್ಣಲ್ಲೇ...ಒರಿಜಿನಲ್ ಗ್ಯಾಂಗ್ಸ್ಟರ್''
'ಲಿಯೋ' ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾ. ಎರಡು ದಿನಗಳ ಹಿಂದಷ್ಟೇ ಅವರ ಶೂಟಿಂಗ್ ಪೂರ್ಣಗೊಂಡಿದೆ. ಜುಲೈ 10 ರಂದು ನಿರ್ದೇಶಕ ಲೋಕೇಶ್ ಕನಕರಾಜ್ ಅವರು ಲಿಯೋ ಸಿನಿಮಾದಲ್ಲಿನ ದಳಪತಿ ವಿಜಯ್ ಅವರ ಪಾತ್ರಗಳ ಶೂಟಿಂಗ್ ಪೂರ್ಣಗೊಂಡಿವೆ ಎಂದು ಬಹಿರಂಗಪಡಿಸಿದರು. ಸಂಜಯ್ ದತ್ ಮತ್ತು ತ್ರಿಶಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇನ್ನು ವಿಜಯ್, ವೆಂಕಟ್ ಪ್ರಭು ಅವರ ಮುಂದಿನ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ:2026ರ ವಿಧಾನಸಭೆ ಚುನಾವಣೆ ತಯಾರಿಯೇ?: ರಾಜಕೀಯ ಪ್ರವೇಶದೊಂದಿಗೆ ಸಿನಿಮಾದಿಂದ ದೂರ ಸರಿಯಲಿದ್ದಾರಾ ದಳಪತಿ ವಿಜಯ್?