ಚೆನ್ನೈ:ತಮಿಳು ಸೂಪರ್ ಸ್ಟಾರ್ ವಿಜಯ್ ದಳಪತಿ ಅವರಿಗೆ 'ವಿಕ್ರಮ್' ನಿರ್ದೇಶಕ ಲೋಕೇಶ್ ಕನಕರಾಜ್ ಆ್ಯಕ್ಷನ್ ಕಟ್ ಹೇಳುತ್ತಿರುವ 'ಲಿಯೋ' ಸಿನಿಮಾದ ಡಿಜಟಲ್ ರೈಟ್ಸ್, ಸ್ಯಾಟಲೈಟ್ ರೈಟ್ಸ್ ಮತ್ತು ಮ್ಯೂಸಿಕ್ ರೈಟ್ಸ್ ಭಾರಿ ಬೆಲೆಗೆ ಮಾರಾಟವಾಗಿದ್ದು, ಎಲ್ಲ ಸೇರಿ ಒಟ್ಟು 246 ಕೋಟಿ ರೂ.ಗಳನ್ನು ಲಿಯೋ ತನ್ನ ಬೊಕ್ಕಸಕ್ಕೆ ತುಂಬಿಕೊಂಡಿದೆ ಎಂದು ಎಂದು ವರದಿಗಳು ಹೇಳಿವೆ.
ಕೈದಿ, ಮಾಸ್ಟರ್ನಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಕಾಲಿವುಡ್ನ ಸೂಪರ್ ಡೈರೆಕ್ಟರ್ ಲೋಕೇಶ್ ಕನಕರಾಜ್ ಅವರು ಕಮಲಹಾಸನ್ ಅವರಿಗೆ ವಿಕ್ರಮ ಸಿನಿಮಾ ಮಾಡಿ, ಸಖತ್ ಸುದ್ದಿಯಲ್ಲಿದ್ದರು. ಇದೀಗ ವಿಜಯ್ ದಳಪತಿ ಅವರಿಗೆ ಲಿಯೋ ಸಿನಿಮಾ ಮಾಡುತ್ತಿದ್ದಾರೆ. ಇದು ವಿಜಯ್ ಹಾಗೂ ಲೋಕೇಶ್ ಕನಕರಾಜ್ ಅವರ ಕಾಂಬಿನೇಷನ್ನಲ್ಲಿ ಬರುತ್ತಿರುವ ಎರಡನೇ ಸಿನಿಮಾವಾಗಿದೆ.
ವಿಜಯ್ ದಳಪತಿಗೆ ಲೋಕೇಶ್ ಕನಕರಾಜ್ ಸಿನಿಮಾ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದ್ದ ವಿಚಾರವಾಗಿತ್ತು. ಆದರೆ, ಚಿತ್ರದ ಹೆಸರು ಮಾತ್ರ ರಿವೀಲ್ ಆಗಿರಲಿಲ್ಲ. ಆದರೆ ಶುಕ್ರವಾರ ಲೋಕೇಶ್ ಕನಕರಾಜ್ ಅವರು ಸಿನಿಮಾ ಟೈಟಲ್ ಅನೌನ್ಸ್ಮೆಂಟ್ ಪ್ರೋಮೋ ರಿಲೀಸ್ ಮಾಡುತ್ತಿದ್ದಂತೆ, ಸಿನಿಮಾದ ಎಲ್ಲ ರೈಟ್ಸ್ಗೂ ಬೇಡಿಕೆ ಬರತೊಡಗಿದೆ. ಅದರಲ್ಲಿ ಡಿಜಟಲ್ ರೈಟ್ಸ್, ಸ್ಯಾಟಲೈಟ್ ರೈಟ್ಸ್ ಮತ್ತು ಮ್ಯೂಸಿಕ್ ರೈಟ್ಸ್ ಭಾರಿ ಮೊತ್ತಕ್ಕೆ ಮಾರಾಟವಾಗಿದೆ ಎನ್ನುವ ಮಾತು ಸಿನಿದುನಿಯಾದಲ್ಲಿ ಕೇಳಿಬರುತ್ತಿದೆ.
ಲೋಕೇಶ್ ಕನಕರಾಜ್ ಅವರ ಹಿಂದಿನ ಚಿತ್ರ, ಕಮಲಹಾಸನ್ ಅಭಿನಯದ 'ವಿಕ್ರಮ್' ಸಿನಿಮಾ ಕಲೆಕ್ಷನ್ ದಾಖಲೆಯನ್ನು ಛಿದ್ರಗೊಳಿಸಿತ್ತು. ಇದೀಗ ವಿಜಯ್ ದಳಪತಿ ಜೊತೆ ಸೇರಿ ಮಾಡುತ್ತಿರುವ ಲಿಯೋ ಸಿನಿಮಾ ಕೂಡ ಅದೇ ಹಾದಿಯ್ಲಲಿ ಸಾಗುತ್ತಿದೆ ಎಂದು ಟಾಕ್ ಪ್ರಾರಂಭವಾಗಿದೆ. Tracktollywood.com ಪ್ರಕಾರ, ಸುಮಾರು 250 ಕೋಟಿ ಬಜೆಟ್ನಲ್ಲಿ ಲಿಯೋ ಚಿತ್ರವನ್ನು ನಿರ್ಮಿಸಲಾಗಿದೆ.