ಕರ್ನಾಟಕ

karnataka

2ನೇ ಮಗು ಸಾವಿನ ನಂತರ ವೈದ್ಯರಿಗೆ ಧನ್ಯವಾದ ತಿಳಿಸಿದ 'ತೇರಿ ಮಿಟ್ಟಿ' ಖ್ಯಾತಿಯ ಗಾಯಕ

By

Published : Jun 16, 2022, 1:34 PM IST

ಗಾಯಕ ಮತ್ತು ನಿರ್ದೇಶಕ ಬಿ ಪ್ರಾಕ್ರ ಎರಡನೇ ಮಗು ಹೆರಿಗೆ ಸಮಯದಲ್ಲಿ ಮೃತ ಪಟ್ಟಿದ್ದು, ​ಈ ಕುರಿತು ತಮ್ಮ ಇನ್​ಸ್ಟಾಗ್ರಾಂನಲ್ಲಿ ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.

insta post by praak
ಇನ್​​ಸ್ಟಾಗ್ರಾಂ ಪೋಸ್ಟ್​

ನವದೆಹಲಿ: ಗಾಯಕ ಮತ್ತು ಸಂಗೀತ ನಿರ್ದೇಶಕ ಬಿ. ಪ್ರಾಕ್​ ಅವರ ಎರಡನೇ ಮಗು ಹೆರಿಗೆ ಸಮಯದಲ್ಲಿ ಮೃತ ಪಟ್ಟಿದ್ದು ಈ ಕುರಿತ ಇನ್​​ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ. 'ತೇರಿ ಮಿಟ್ಟಿ' ಖ್ಯಾತಿಯ ಪ್ರಾಕ್​' ಹೆರಿಗೆ ಸಮಯದಲ್ಲಿ ನಮ್ಮ ಎರಡನೇ ಮಗು ಮೃತ ಪಟ್ಟಿದ್ದು, ತಂದೆ ತಾಯಿಗಳಾದ ನಮಗೆ ಮನಸ್ಸಿಗೆ ತುಂಬ ದುಃಖವಾಗಿದೆ.

ಮಗುವನ್ನು ಉಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದ ವೈದ್ಯರು ಮತ್ತು ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತೇನೆ. ಇದರಿಂದ ನಮಗೆ ಭರಿಸಲಾಗದ ನಷ್ಟವಾಗಿದ್ದು, ಖಾಸಗಿತನವಾಗಿರಲು ಬಯಸಿದ್ದೇವೆ ಇದಕ್ಕೆ ತಾವೆಲ್ಲರೂ ಸಹಕರಿಸಿಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ತಮ್ಮ ಮತ್ತು ಪತ್ನಿ ಮೀರಾ ಬಚ್ಚನ್​ ಪರವಾಗಿ ಪೋಸ್ಟ್​ವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಬಾಲಿವುಡ್​ ಸೇರಿದಂತೆ ಭಾರತೀಯ ಚಿತ್ರರಂಗದವರು ಮಗುವಿನ ಆತ್ಮಕ್ಕೆ ಶಾಂತಿ ಕೋರಿದ್ದಾರೆ. 2019ರಲ್ಲಿ ಬಿ ಪ್ರಾಕ್​ ಮತ್ತು ಮೀರಾ ಬಚ್ಚನ್​​ರ ವಿವಾಹವಾಗಿದ್ದು, ದಂಪತಿಗೆ 2020 ರಲ್ಲಿ ಗಂಡು ಮಗು ಜನಿಸಿತ್ತು.

ಇದನ್ನೂ ಓದಿ:ಹುಟ್ಟೂರಿಗೆ ಬಂದ ಯೋಧ ಗಣೇಶ್​​ ಪಾರ್ಥಿವ ಶರೀರ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ

ABOUT THE AUTHOR

...view details