ಹೈದರಾಬಾದ್:ತೆಲುಗು ಮತ್ತು ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟ ಶ್ರೀಕಾಂತ್ ತಮ್ಮ ವೈವಾಹಿಕ ಬದುಕಲ್ಲಿ ಎದ್ದಿರುವ ವಿಚ್ಛೇದನ ಎಂಬ ಬಿರುಗಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪತ್ನಿ ಊಹಾಗೆ ವಿಚ್ಛೇದನ ನೀಡಲಾಗುತ್ತಿದೆ ಎಂಬ ವದಂತಿಯನ್ನು ಬಲವಾಗಿ ಅಲ್ಲಗಳೆದಿರುವ ಅವರು ಇದೆಲ್ಲ ಸುಳ್ಳು ಸುದ್ದಿ ಎಂದಿದ್ದಾರೆ.
ಊಹಾಗೆ ವಿಚ್ಛೇದನ ನೀಡುತ್ತಿದ್ದೇನೆ ಎಂದು ಹಲವು ವೆಬ್‌ಸೈಟ್‌ಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳಲ್ಲಿ ಪ್ರಚಾರ ಮಾಡುತ್ತಿವೆ. ಕೆಲವು ವೆಬ್‌ಸೈಟ್‌ಗಳಲ್ಲಿ ಬರುತ್ತಿರುವ ಫೇಕ್ ನ್ಯೂಸ್ ನೋಡಿ ಪತ್ನಿ ಊಹಾ ಚಿಂತೆ ಮಾಡತೊಡಗಿದ್ದಾರೆ. ಈ ಬಗ್ಗೆ ಸಂಬಂಧಿಕರಿಂದ ಕರೆಗಳು ಸಹ ಬರುತ್ತಿವೆ. ಇದೆಲ್ಲ ಸುಳ್ಳು ಸುದ್ದಿ. ನಂಬದಿರಿ ಎಂದು ಹೇಳಿದ್ದೇವೆ.
ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ವೆಬ್‌ಸೈಟ್ ಮತ್ತು ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುತ್ತೇನೆ. ಆಧಾರ ರಹಿತ ವದಂತಿಗಳನ್ನು ಹಬ್ಬಿಸುತ್ತಿರುವ ವೆಬ್‌ಸೈಟ್‌ಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶ್ರೀಕಾಂತ್ ಒತ್ತಾಯ ಮಾಡಿದ್ದಾರೆ.