ಕರ್ನಾಟಕ

karnataka

ETV Bharat / entertainment

ಟೆಲಿವಿಷನ್ ಪ್ರೀಮಿಯರ್ ಲೀಗ್: ನಾಳೆಯಿಂದ 3 ದಿನ ಕಿರುತೆರೆ ಕಲಾವಿದರಿಗೆ ಕ್ರಿಕೆಟ್ ಹಬ್ಬ - ಕಿರುತೆರೆ ಕಲಾವಿದರ ಕ್ರಿಕೆಟ್

ನಾಳೆಯಿಂದ ಮೂರು ದಿನಗಳ ಕಾಲ ಎನ್ 1 ಕ್ರಿಕೆಟ್ ಅಕಾಡೆಮಿ ವತಿಯಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್ (ಟಿಪಿಎಲ್) ನಡೆಯಲಿದೆ.

Television Premier League starts from tomorrow
ನಾಳೆಯಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್

By

Published : Aug 17, 2022, 3:56 PM IST

ಕಿರುತೆರೆಯಲ್ಲಿ ಮನರಂಜಿಸುವ ಕಲಾವಿದರು ಬ್ಯಾಟ್ ಬಾಲ್ ಹಿಡಿದು ಫೀಲ್ಡಿಗಿಳಿಯಲಿದ್ದಾರೆ. ಎನ್ 1 ಕ್ರಿಕೆಟ್ ಅಕಾಡೆಮಿ ವತಿಯಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್ (ಟಿಪಿಎಲ್) ಶುರುವಾಗಲಿದೆ. ನಾಳೆಯಿಂದ ಮೂರು ದಿನಗಳ ಕಾಲ ಅಂದರೆ, 18, 19, 20ರಂದು ಟಿಪಿಎಲ್ ನಡೆಯಲಿದೆ.

ಇಂದು ಖಾಸಗಿ ಹೋಟೆಲ್ ಒಂದರಲ್ಲಿ ಟಿಪಿಎಲ್ ಜೆರ್ಸಿ ಟ್ರೋಫಿ ಬಿಡುಗಡೆ ಮಾಡಲಾಯಿತು. ಕಿರುತೆರೆ ಕಲಾವಿದರಾದ ಪದ್ಮನಾಭ್, ರಂಜಿತ್ ಕುಮಾರ್, ಅಶ್ವಸೂರ್ಯ, ಮಂಜು ಪಾವಗಡ, ವಿವಾನ್, ಹರ್ಷ ಸೇರಿದಂತೆ ತಂತ್ರಜ್ಞರು ಪಂದ್ಯಾವಳಿಯಲ್ಲಿ ಭಾಗಿಯಾಗಲಿದ್ದಾರೆ.

ಟಿಪಿಎಲ್ ಜೆರ್ಸಿ ಹಾಗೂ ಟ್ರೋಫಿ ಬಿಡುಗಡೆ

ಆಯೋಜಕರಾದ ಬಿ.ಆರ್. ಸುನೀಲ್ ಕುಮಾರ್ ಮಾತನಾಡಿ, ಮೊದಲ ಬಾರಿಗೆ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಯುತ್ತಿದೆ. ಐಪಿಎಲ್ ರೇಂಜ್​ಗೆ ಮಾಡಬೇಕೆಂಬ ಕನಸಿತ್ತು. ಇದು ಮೊದಲ ಹೆಜ್ಜೆಯಷ್ಟೇ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡದಾಗಿ ಮಾಡಲಿದ್ದೇವೆ ಎಂದರು.

ಬೆಂಗಳೂರಿನ ಪೆಸೆಟ್ ಕಾಲೇಜು ಗ್ರೌಂಡ್​ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ದಿ ಬುಲ್ ಸ್ಕ್ವಾಡ್, ಭಜರಂಗಿ ಲಯನ್ಸ್, ಎಂಜೆಲ್ XI, ವಿನ್ ಟೈಮ್ ರಾಕರ್ಸ್, ಅಶ್ವ ಸೂರ್ಯ ರೈಡರ್ಸ್, ಸ್ಯಾಂಡಲ್ ವುಡ್ ಕಿಂಗ್ಸ್ ಎಂಬ ಆರು ತಂಡಗಳು ಭಾಗಿಯಾಗಲಿದೆ. ಒಟ್ಟು 102 ಸೆಲೆಬ್ರಿಟಿಗಳು ಕಾರ್ಯಕ್ರಮಕ್ಕೆ ಸಾಥ್ ಕೊಡಲಿದ್ದಾರೆ. ಈ ಆರು ತಂಡಗಳಿಗೂ ಅಂಬಾಸಿಡರ್ ಹಾಗೂ ಮಾಲೀಕರಿದ್ದಾರೆ.

ಇದನ್ನೂ ಓದಿ:ಮುಂದಿನ 4 ವರ್ಷಗಳ ಕ್ರಿಕೆಟ್‌ ವೇಳಾಪಟ್ಟಿ ರಿಲೀಸ್: ಏಕದಿನ, ಟಿ20, ಟೆಸ್ಟ್‌ ಸೇರಿ 777 ಪಂದ್ಯ

ದಿ ಬುಲ್ ಸ್ಕ್ವಾಡ್ ಟೀಂಗೆ ಶರತ್ ಪದ್ಮನಾಭ್ ನಾಯಕರಾಗಿದ್ದು ತಂಡದ ಒಡೆತನವನ್ನು ಮೋನಿಶ್ ಹೊತ್ತುಕೊಂಡಿದ್ದಾರೆ. ಭಜರಂಗಿ ಲಯನ್ಸ್​ಗೆ ರಂಜಿತ್ ಕುಮಾರ್ ನಾಯಕ, ಮಹೇಶ್ ಗೌಡ ಓನರ್. ಎಂಜಲ್ XI ತಂಡಕ್ಕೆ ಹರ್ಷ ಸಿಎಂ ಗೌಡ ನಾಯಕ, ಜಗದೀಶ್ ಬಾಬು ಆರ್ ಓನರ್. ವಿನ್ ಟೈಮ್ ರಾಕರ್ಸ್ ತಂಡಕ್ಕೆ ಅರ್ಜುನ್ ಯೋಗಿ ನಾಯಕ, ಅನಿಲ್ ಬಿಆರ್ ಮತ್ತು ದೇವನಾಥ್ ಓನರ್. ಅಶ್ವಸೂರ್ಯ ರೈಡರ್ಸ್ ತಂಡಕ್ಕೆ ಮಂಜು ಪಾವಗಡ ನಾಯಕ, ರಂಜಿತ್ ಕುಮಾರ್ ಓನರ್. ಸ್ಯಾಂಡಲ್ ವುಡ್ ಕಿಂಗ್ಸ್ ತಂಡಕ್ಕೆ ವಿವಾನ್ ನಾಯಕ, ದೀಪಶ್ರೀ ಮಿಸ್ಟ್ರೀ ಒಡೆತನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ABOUT THE AUTHOR

...view details