ಪುತ್ತೂರಿನಲ್ಲಿ ನಡೆದಿದೆ ಎನ್ನಲಾದ ಹಲ್ಲೆ ಮತ್ತು ಕಿರುಕುಳ ಪ್ರಕರಣದ ಬಗ್ಗೆ ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ತಾರೆ ಸಾನ್ಯಾ ಅಯ್ಯರ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಅಂದು ಏನೆಲ್ಲ ನಡೆಯಿತು ಅನ್ನೋದರ ಬಗ್ಗೆ ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ಜನವರಿ 28ರಂದು ಪುತ್ತೂರಿನಲ್ಲಿ ನಡೆದ ಕಂಬಳಕ್ಕೆ ನಾನು ಅತಿಥಿಯಾಗಿ ಹೋಗಿದ್ದೆ. ಕಾರ್ಯಕ್ರಮದ ಗದ್ದಲದಲ್ಲಿ ಕಂಬಳವನ್ನು ಸರಿಯಾಗಿ ನೋಡಲು ಆಗದೇ ಇರುವ ಕಾರಣಕ್ಕಾಗಿ ನಾನು ಮತ್ತೆ ಸ್ನೇಹಿತೆಯರ ಜೊತೆ ಹೋದೆ. ಆಗ ಒಬ್ಬ ಹುಡುಗ ನನ್ನ ಫ್ರೆಂಡ್ಸ್ ಕೈ ಹಿಡಿದು ಎಳೆದ. ಈ ವೇಳೆ ಗಲಿಬಿಲಿಯಾಗಿದ್ದು ನಿಜ. ಆದರೆ, ಆ ಹುಡುಗನಿಗೆ ಕಪಾಳಕ್ಕೆ ಹೊಡೆದಿದ್ದಾರೆ ಎಂಬ ಸುದ್ದಿ ಸುಳ್ಳು. ನನಗೂ ಅವನು ಹೊಡೆಯಲಿಲ್ಲ. ಸ್ನೇಹಿತರು ಆಯೋಜಕರ ಗಮನಕ್ಕೆ ತಂದಿದ್ದಾರೆ. ಆದರೆ, ಅಂದು ನಡೆದ ಘಟನೆಯ ವಿಡಿಯೋ ಈಗ ವೈರಲ್ ಆದ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಅಂದು ಆ ಹುಡುಗ ನನ್ನ ಸ್ನೇಹಿತೆಯರ ಮೇಲೆ ಬಿದ್ದರಿಂದ ನಾವು ಭಯಗೊಂಡು ಜೋರಾಗಿ ಕಿರುಚಿದೆವು. ಈ ವೇಳೆ ಹುಡುಗ ಅಲ್ಲಿಂದ ಓಡಿಹೋದ. ನಾವು ಕಿರುಚಿದನ್ನು ನೋಡಿ ಅಲ್ಲಿ ಸಾಕಷ್ಟು ಜನರು ಸೇರಿದರು. ಜನರೆಲ್ಲ ಬಂದಿದ್ದನ್ನು ನೋಡಿ ಆಯೋಜಕರು ಸಹ ಬಂದು ನಮ್ಮನ್ನು ಕರೆದುಕೊಂಡು ಹೋಗಿ ವೇದಿಕೆ ಮೇಲೆ ಕೂರಿಸಿದರು. ಕೆಲವು ಕಡೆ ನಾವು ಓಡಾಡುವಾಗ ಕೆಲವರು ನಮ್ಮ ಮೈ-ಕೈ ಮುಟ್ಟುತ್ತಾರೆ. ಯಾರೋ ಒಬ್ಬ ಮಾಡೋ ತಪ್ಪಿನಿಂದ ಎಲ್ಲರಿಗೂ ಕೆಟ್ಟ ಹೆಸರು. ಆ ವೇಳೆ ಕಂಬಳ ಅಯೋಜಕರು ನಮ್ಮ ನೆರವಿಗೆ ಬಂದರು.
ನಾವು ಬೆಳೆಯುತ್ತಿರೋದೆ ಅಭಿಮಾನಿಗಳಿಂದ. ಅಭಿಮಾನಿ ಫೋಟೊ ಕೇಳಿದರೆ ಹೊಡಿಯೋ ಕೆಲಸ ಮಾಡಲ್ಲ. ನಾನು ಅಲ್ಲಿ ಯಾರಿಗೂ ಹೊಡೆದಿಲ್ಲ. ಅ ಹುಡುಗ ಕೂಡ ನನಗೆ ಹೊಡೆದಿಲ್ಲ. ನಾನು ನನ್ನ ಫ್ರೆಂಡ್ಸ್ ಜೊತೆ ಹೋಗಿದ್ದೆ. ನನ್ನ ಫ್ರೆಂಡ್ಸ್ ಜೊತೆ ಅವರ ಫ್ರೆಂಡ್ಸ್ ಬಂದಿದ್ರು. ನನ್ನ ರಕ್ಷಣೆಗಾಗಿ ಸಾಕಷ್ಟು ಸ್ವಯಂ ಸೇವಕರಿದ್ದರು. 28ರಂದು ನಡೆದ ಘಟನೆಯ ವಿಡಿಯೋ ಈಗ ವೈರಲ್ ಆದ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಸ್ನೇಹಿತೆಗೆ ಸಮಸ್ಯೆ ಆಗುತ್ತೆ ಎಂಬ ಕಾರಣಕ್ಕೆ ಆ ಹುಡುಗನ ವಿರುದ್ಧ ಪೊಲೀಸ್ ಕಂಪ್ಲೈಂಟ್ ಕೊಟ್ಟಿಲ್ಲ. ಜೊತೆಗೆ ಯಾರು ಆ ಹುಡುಗ ಅನ್ನೋದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಒಂದು ವೇಳೆ ಆ ಹುಡುಗನಿಂದ ಸಮಸ್ಯೆ ಆಗಿದ್ದರೆ ನಾನು ಪೊಲೀಸ್ ಕಂಪ್ಲೈಂಟ್ ಕೊಡುತ್ತಿದ್ದೆ ಎಂದು ಸಾನ್ಯಾ ಅಯ್ಯರ್ ಹೇಳಿದ್ದಾರೆ.