ಕರ್ನಾಟಕ

karnataka

ETV Bharat / entertainment

ತೆಲಂಗಾಣ ವಿಧಾನಸಭಾ ಚುನಾವಣೆ: ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಸಿನಿ ತಾರೆಯರು - ತೆಲಂಗಾಣ ಚುನಾವಣೆ ಮತದಾನ

ತೆಲಂಗಾಣ ವಿಧಾನಸಭೆ ಚುನಾವಣೆ ಮತದಾನ ಆರಂಭವಾಗಿದ್ದು, ಖ್ಯಾತ ನಟರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ತೆಲಂಗಾಣ ವಿಧಾನಸಭೆ ಚುನಾವಣೆ ಮತದಾನ
ತೆಲಂಗಾಣ ವಿಧಾನಸಭೆ ಚುನಾವಣೆ ಮತದಾನ

By ETV Bharat Karnataka Team

Published : Nov 30, 2023, 4:20 PM IST

Updated : Nov 30, 2023, 5:10 PM IST

ಹೈದರಾಬಾದ್​: ಇಂದು ತೆಲಂಗಾಣ ವಿಧಾನಸಭಾ ಚುನಾವಣೆ ಮತದಾನ ಭರದಿಂದ ಸಾಗುತ್ತಿದೆ. ಸಾರ್ವಜನಿಕರು ಸೇರಿದಂತೆ, ರಾಜಕೀಯ ನಾಯಕರು, ನಟ - ನಟಿಯರು ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗಳಿಗೆ ಆಗಮಿಸುತ್ತಿದ್ದಾರೆ. ಇದೇ ವೇಳೆ ತೆಲಗು ಚಿತ್ರರಂಗದ ಖ್ಯಾತ ನಟರಾದ, ಮೆಘಾಸ್ಟಾರ್​ ಚಿರಂಜೀವಿ, ಅಲ್ಲು ಅರ್ಜುನ್​, ಜೂ. ಎನ್​ಟಿಆರ್​ ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ತಮ್ಮ ಮತವನ್ನು ಚಲಾಯಿಸಿದರು.

ಹೈದರಾಬಾದ್‌ನ ಜುಬಿಲಿಹಿಲ್ಸ್​ ಪ್ರದೇಶದಲ್ಲಿ ಮತದಾನ ಮಾಡಲು ನಟ ಚಿರಂಜೀವಿ ಕುಟುಂಬ ಸಮೇತರಾಗಿ ಆಗಮಿಸಿ ಗಮನ ಸೆಳೆದರು. ಅಯ್ಯಪ್ಪ ಸ್ವಾಮಿ ವ್ರತ ಕೈಗೊಂಡಿರುವಂತೆ ಕಪ್ಪು ದಿರಿಸಿನಲ್ಲಿ ಕಾಣಿಸಿಕೊಂಡ ಚಿರಂಜೀವಿ ಸರತಿ ಸಾಲಿನಲ್ಲಿ ನಿಂತು ಬರಿಗಾಲಿನಲ್ಲಿ ಮತದಾನ ಕೇಂದ್ರವನ್ನು ಪ್ರವೇಶಿಸಿ ವೋಟ್​ ಮಾಡಿದರು.

ಮತ್ತೊಂದೆಡೆ ಜೂನಿಯರ್ ಎನ್‌ಟಿಆರ್ ಕೂಡ ತಮ್ಮ ಪರಿವಾರದೊಂದಿಗೆ ಹೈದರಾಬಾದ್‌ನ ಪಿ. ಓಬುಲ್ ರೆಡ್ಡಿ ಪಬ್ಲಿಕ್ ಸ್ಕೂಲ್‌ನಲ್ಲಿನ ಮತಗಟ್ಟೆಗೆ ಆಗಮಿಸಿದ್ದರು. ಪತ್ನಿ ಮತ್ತು ತಾಯಿಯೊಂದಿಗೆ ಜನಸಾಮಾನ್ಯರೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಪುಷ್ಪ ಖ್ಯಾತಿಯ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್ ಬಿಎಸ್‌ಎನ್‌ಎಲ್ ಕೇಂದ್ರದ ಮತಗಟ್ಟೆ ಸಂಖ್ಯೆ 153ಕ್ಕೆ ಕುಟುಂಬದೊಂದಿಗೆ ಆಗಮಿಸಿ ಸಾಲಿನಲ್ಲಿ ನಿಂತು ವೋಟ್​ ಮಾಡಿದರು.

ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ, ಪದ್ಮಶ್ರೀ ಎಂಎಂ ಕೀರವಾಣಿ ಅವರು ಹೈದರಾಬಾದ್‌ನ ಜುಬಿಲಿಹಿಲ್ಸ್​ ಪ್ರದೇಶದಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತದಾನದ ಶಕ್ತಿಯ ಮಹತ್ವವನ್ನು ಸಾರಿದರು. "ಈ ದಿನ ರಜಾ ದಿನವಲ್ಲ, ಬದಲಿಗೆ ಜವಾಬ್ದಾರಿಯ ದಿನವಾಗಿದೆ. ಎಲ್ಲರೂ ಮತಗಟ್ಟಿಗೆ ತೆರಳಿ ತಮ್ಮ ತಮ್ಮ ಹಕ್ಕನ್ನು ಚಲಾಯಿಸಬೇಕು. ಇತರರಿಗೆ ಮತದಾನ ಮಾಡಲು ಪ್ರೋತ್ಸಾಹಿಸಲೆಂದು ನಾನು ಮತಗಟ್ಟಿಗೆ ಮುಂಚಿತವಾಗಿ ಬಂದಿದ್ದೇನೆ. ನನ್ನ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ನನಗೆ ಸಂತೋಷವಾಗಿದೆ ಎಂದು ಹೇಳಿದರು.

ಇಂದು ತೆಲಂಗಾಣದಲ್ಲಿ ಎಲ್ಲಾ 119 ವಿಧಾನಸಭಾ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ 221 ಮಹಿಳೆಯರು ಮತ್ತು ಒಬ್ಬ ತೃತೀಯಲಿಂಗಿ ಸೇರಿದಂತೆ 109 ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಂದ ಒಟ್ಟು 2,290 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 2023ರಲ್ಲಿ ಯಾವ ಪಕ್ಷ ತೆಲಂಗಾಣ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂದು ತಿಳಿಯಲು ಡಿ. 3ರ ವರೆಗೆ ಕಾಯಬೇಕಾಗಿದೆ.

ಇದನ್ನೂ ಓದಿ:ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಹೇಳಿಕೆ ಚುನಾವಣೆ ಪೂರ್ವದ ಸುಳ್ಳು ಭರವಸೆ: ಅಮಿತ್ ಶಾ ವಿರುದ್ಧ ಟಿಎಂಸಿ ಕಿಡಿ

Last Updated : Nov 30, 2023, 5:10 PM IST

ABOUT THE AUTHOR

...view details