ಹಿಂದಿ ಬಿಗ್ ಬಾಸ್ 15ರ ವಿನ್ನರ್ ಹಾಗೂ ನಾಗಿಣಿ ಆರನೇ ಆವೃತ್ತಿಯ ನಾಯಕಿ ಆಗಿರುವ ಕಿರುತೆರೆ ನಟಿ ತೇಜಸ್ವಿ ಪ್ರಕಾಶ್ ಮೂರು ದಿನದ ಮೊದಲೇ ಜನ್ಮದಿನ ಆಚರಿಸಿ ಕೊಂಡಿದ್ದಾರೆ. ಅವರ ಅಭಿಮಾನಿಗಳು ನಾಗಿಣಿ ಧಾರಾವಾಹಿಯ ಸೆಟ್ಗೆ ಬಂದು ಅವರಿಗೆ ಮೂಂಚಿತವಾಗಿಯೇ ಜನ್ಮದಿನದ ಶುಭಾಶಯ ಕೋರಿ ಕೇಕ್ ಕತ್ತರಿಸಿ ಸಂಭ್ರಮಾಚರಣೇ ಮಾಡಿದ್ದಾರೆ.
ಅಭಿಮಾನಿಗಳೊಂದಿಗೆ ಪ್ರೀ ಬರ್ತ್‌ಡೇ ಸೆಲೆಬ್ರೇಟ್ ಮಾಡಿಕೊಂದ ತೇಜಸ್ವಿ ಪ್ರಕಾಶ್ ತೇಜಸ್ವಿ ಪ್ರಕಾಶ್ ಅಭಿಮಾನಿ ತಮ್ಮ ಇನ್ಸ್ಟಾಗ್ರಾಂನ ಖಾತೆಯಲ್ಲಿ ಪ್ರೀ ಬರ್ತ್‌ಡೇ ಸೆಲೆಬ್ರೇಷನ್‌ನ ವಿಡಿಯೋ ಮತ್ತು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ತೇಜಸ್ವಿ ಅವರು ನಾಗಿಣಿ ಸೆಟ್ನ ತಮ್ಮ ಕ್ಯಾರವಾನ್ ಬಳಿ ಜನ್ಮದಿನ ಆಚರಿಸಿಕೊಂಡಿರುವುದು ಕಂಡುಬರುತ್ತದೆ.
ಪ್ರೀ ಬರ್ತ್‌ಡೇ ಸೆಲೆಬ್ರೇಟ್ ಮಾಡಿಕೊಂದ ತೇಜಸ್ವಿ ಪ್ರಕಾಶ್ ತೇಜಸ್ವಿ ಕಿತ್ತಳೆ ಬಣ್ಣದ ಸಲ್ವಾರ್ ಕಮೀಜ್ ಧರಿಸಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಅವರಿಗಾಗಿ ಸೆಟ್ಗೆ ಕೇಕ್ ತಂದು ಪ್ರೀ ಬರ್ತ್‌ಡೇ ಸೆಲೆಬ್ರೇಷನ್ ಮಾಡಿದ್ದಾರೆ. ಅಲ್ಲದೇ ಅಭಿಮಾನಿಗಳು ಹೂ ಗುಚ್ಚ, ಚಾಕೋಲೇಟ್, ವಿವಿಧ ಗಿಫ್ಟ್ಗಳನ್ನು ನೀಡಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.
ನಾಗಿಣಿ ಆರನೇ ಆವೃತ್ತಿಯ ನಾಯಕಿ ತೇಜಸ್ವಿ ಪ್ರಕಾಶ್ ಜೂನ್ 10ರಂದು ತೇಜಸ್ವಿ ಪ್ರಕಾಶ್ 28 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಜನ್ಮದಿನದ ಮೂರು ದಿನ ಮುಂಚಿತವಾಗಿ ಅವರು ಜನ್ಮದಿನವನ್ನು ಆಚರಿಸಿ ಕೊಂಡಿದ್ದಾರೆ. ಅಭಿಮಾನಿಯೊಬ್ಬರು ಕಮೆಂಟ್ನಲ್ಲಿ ‘ಅವರು ಪುಣೆಯಿಂದ ತೇಜಸ್ವಿ ಜನ್ಮದಿನ ಆಚರಣೆಗಾಗಿ ಬಂದಿದ್ದರು’ ಎಂದು ಬರೆದಿದ್ದಾರೆ.
ಹಿಂದಿ ಬಿಗ್ ಬಾಸ್ 15ರ ವಿನ್ನರ್ ಬಿಗ್ ಬಾಸ್ 15ನೇ ಆವೃತ್ತಿಯಲ್ಲಿ ತೇಜಸ್ವಿ ಅವರಿಗೆ ಕರಣ್ ಕುಂದ್ರಾ ಅವರ ಪರಿಚಯವಾಯಿತು. ಅದು ಸ್ನೇಹವಾಗಿ ಬೆಳೆದು ಈಗ ಅವರು ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ವಿಚಾರಗಳು ಇವೆ. ಬಿಗ್ ಬಾಸ್ ಮುಗಿದಾಗಿನಿಂದ ಈ ಜೋಡಿ ಡೇಟಿಂಗ್ ನಡೆಸುತ್ತಿದೆ.
ಅಭಿಮಾನಿಗಳೊಂದಿಗೆ ತೇಜಸ್ವಿ ಪ್ರಕಾಶ್ ಪ್ರಸ್ತುತ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ತೇಜಸ್ವಿ ಕಾಣಿಸಿಕೊಂಡಿದ್ದಾರೆ. ಮಾಧ್ಯಮಗಳಲ್ಲಿ ತೇಜಸ್ವಿ ಅವರು ಸಿನಿಮಾಗಾಗಿ ಆಡಿಶನ್ ಕೊಟ್ಟಿರುವ ಬಗ್ಗೆ ಸುದ್ದಿಗಳು ಬರುತ್ತವೆ. ರಾಗಿಣಿ ಎಂಎಂಎಸ್‌ನ ಮುಂದಿನ ಸರಣಿಗಳಿಗೆ ಅವರಿಗೆ ಅವಕಾಶ ಬಂದಿತ್ತು ಆದರೆ ಅವರು ಅದರಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ವಿಡಿಯೋ: ಗೋಲ್ಡನ್ ಕಲರ್ ಗೌನ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡ ಪ್ರಿಯಾಂಕಾ ಚೋಪ್ರಾ