ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಸದ್ಯ 'ಸಲಾರ್', 'ಆದಿಪುರುಷ್' ಮತ್ತು 'ಪ್ರಾಜೆಕ್ಟ್ ಕೆ' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಎಲ್ಲ ಚಿತ್ರಗಳ ಮೇಲೆ ಸಿನಿ ಪ್ರೇಕ್ಷಕರು ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇದೀಗ 'ಪ್ರಾಜೆಕ್ಟ್ ಕೆ' ಚಿತ್ರತಂಡ ಹೊಸದೊಂದು ವಿಡಿಯೋ ಹಂಚಿಕೊಂಡಿದ್ದು, ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪ್ರತಿ ಪಾತ್ರದ ಕಾಸ್ಟ್ಯೂಮ್ ಡಿಫರೆಂಟ್ ಆಗಿರಲಿದೆ. ಅದನ್ನು ತೋರಿಸುವ ಸಲುವಾಗಿಯೇ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದನ್ನು ನೋಡಿದ ಫ್ಯಾನ್ಸ್ ವಾವ್ ಅನ್ನುತ್ತಿದ್ದಾರೆ.
'ಪ್ರಾಜೆಕ್ಟ್ ಕೆ' ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಸೇರಿದಂತೆ ಅನೇಕ ಸೂಪರ್ ಸ್ಟಾರ್ ಕಲಾವಿದರು ನಟಿಸುತ್ತಿದ್ದಾರೆ. ಇದು ಸೈನ್ಸ್ ಫಿಕ್ಷನ್ ಸಿನಿಮಾ ಆಗಿದ್ದು, ಅದಕ್ಕೆ ತಕ್ಕಂತೆಯೇ ಪಾತ್ರಧಾರಿಗಳ ಕಾಸ್ಟ್ಯೂಮ್ ಡಿಸೈನ್ ಮಾಡಲಾಗಿದೆ. ಸಿನಿಮಾದಲ್ಲಿ ಬರುವ ರೈಡರ್ಸ್ ಪಾತ್ರಗಳಿಗೆ ಯಾವ ರೀತಿಯಾಗಿ ವಸ್ತ್ರವನ್ನು ರೆಡಿ ಮಾಡಲಾಗಿದೆ ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಅಲ್ಲದೇ ಸೈನ್ಸ್ ಫಿಕ್ಷನ್ ಸಿನಿಮಾಗಳನ್ನು ತಯಾರಿಸುವಲ್ಲಿ ಹಾಲಿವುಡ್ ನವರು ಎಂದಿಗೂ ಮುಂದಿರುತ್ತಾರೆ. ಆದರೆ ಇದೀಗ 'ಪ್ರಾಜೆಕ್ಟ್ ಕೆ' ಸಿನಿಮಾವು ಇಂಗ್ಲೀಷ್ ಚಿತ್ರಗಳಿಗೂ ಪೈಪೋಟಿ ನೀಡುವ ರೀತಿಯಲ್ಲೇ ಸಜ್ಜಾದಂತೆ ಕಾಣುತ್ತಿದೆ.
ಇದನ್ನೂ ಓದಿ:ಆರೋಗ್ಯದಲ್ಲಿ ಚೇತರಿಕೆ; ಪ್ರಾಜೆಕ್ಟ್ ಕೆ ಶೂಟಿಂಗ್ ಸೆಟ್ಗೆ ಮರಳಿದ ಅಮಿತಾಭ್ ಬಚ್ಚನ್