ಕರ್ನಾಟಕ

karnataka

ETV Bharat / entertainment

ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟ ದಳಪತಿ ವಿಜಯ್: ಒಂದೇ ದಿನ 4 ಮಿಲಿಯನ್​ಗೂ ಹೆಚ್ಚು ಫಾಲೋವರ್ಸ್‌! - ದಳಪತಿ ವಿಜಯ್ ಇನ್‌ಸ್ಟಾಗ್ರಾಮ್‌

ಇಷ್ಟು ದಿನ ಟ್ವಟಿರ್‌, ಫೇಸ್‌ಬುಕ್​ನಲ್ಲಿ ಸಕ್ರಿಯವಾಗಿದ್ದ ತಮಿಳು ಸಿನಿಮಾ ಸೂಪರ್​ ಸ್ಟಾರ್​ ದಳಪತಿ ವಿಜಯ್ ಇದೀಗ ಜನಪ್ರಿಯ ಸೋಶಿಯಲ್‌ ಮೀಡಿಯಾ ಇನ್​ಸ್ಟಾಗ್ರಾಮ್‌ನಲ್ಲಿ ಖಾತೆ ತೆರೆದಿದ್ದಾರೆ.

Tamil superstar Thalapathi Vijay
ದಳಪತಿ ವಿಜಯ್

By

Published : Apr 3, 2023, 9:56 AM IST

ಚೆನ್ನೈ : ತಮಿಳು ಸೂಪರ್​ ಸ್ಟಾರ್​ ದಳಪತಿ ವಿಜಯ್ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇತ್ತೀಚೆಗೆ ಬಿಡುಗಡೆಯಾದ 'ವಾರಿಸು' ಚಿತ್ರ ಹಿಟ್​ ಆಗಿದ್ದು ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿದೆ ಎಂದು ಮೂಲಗಳು ಹೇಳುತ್ತಿವೆ. ವಿಜಯ್​ ಸಾಮಾಜಿಕ ಜಾಲತಾಣದಲ್ಲಿಯೂ ಆ್ಯಕ್ಟಿವ್​ ಆಗಿದ್ದಾರೆ. ಆದರೆ, ಇಷ್ಟು ದಿನ ಇನ್‌ಸ್ಟಾಗ್ರಾಮ್‌ನಿಂದ ದೂರವೇ ಉಳಿದಿದ್ದ ನಟ, ಇದೀಗ ಅಂತಿಮವಾಗಿ ಖಾತೆ ತೆರೆದಿದ್ದಾರೆ. ಒಂದೇ ದಿನದಲ್ಲಿ ಇವರು ಮಿಲಿಯನ್‌ಗಟ್ಟಲೆ ಫಾಲೋವರ್ಸ್‌ ಗಳಿಸಿದ್ದಾರೆ.

"ಹಲೋ ನನ್ಬಾಸ್ ಮತ್ತು ನಾನ್ಬಿಸ್ " (ಹಲೋ ಸ್ನೇಹಿತರೇ) ಎಂದು ಕಪ್ಪು ಸೂಟ್‌ ಧರಿಸಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ಫೋಟೋವನ್ನು ವಿಜಯ್ ಶೇರ್​ ಮಾಡಿದ್ದಾರೆ. ಮೊದಲ ಬಾರಿ ಹಂಚಿಕೊಂಡ ಈ ಫೋಟೋದಲ್ಲೇ ವಿಜಯ್‌ ಅವರ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್‌ ನೋಡಬಹುದು. ಜೊತೆಗೆ, ಚಿತ್ರೀಕರಣದ ಸಂದರ್ಭದಲ್ಲಿ ತೆಗೆದ ಫೋಟೋವೊಂದನ್ನು ಸ್ಟೋರಿಯಾಗಿ ಹಾಕಿಕೊಂಡಿದ್ದಾರೆ. ವಿಜಯ್‌ ಇನ್​​ಸ್ಟಾಗ್ರಾಮ್‌ ಅಕೌಂಟ್​ ತೆರೆದ ಒಂದೇ ದಿನದಲ್ಲಿ 4 ಮಿಲಿಯನ್‌ಗೂ ಅಧಿಕ ಫಾಲೋವರ್ಸ್‌ ಹೊಂದುವ ಮೂಲಕ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ:ದಳಪತಿ ವಿಜಯ್ ಅಭಿನಯದ ‘ಮಾಸ್ಟರ್’ ಚಿತ್ರ ರಿಲೀಸ್.. ಅಭಿಮಾನಿಗಳು ದಿಲ್​ಖುಷ್

ಟ್ವಿಟರ್ ಮೂಲಕ ಆಗಾಗ ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿರುವ ವಿಜಯ್, ಫೇಸ್‌ಬುಕ್‌ನಲ್ಲಿ 7.8 ಮಿಲಿಯನ್ ಮತ್ತು ಟ್ವಿಟರ್‌ನಲ್ಲಿ 4.4 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಇದೀಗ, ನೂತನವಾಗಿ ಇನ್​​ಸ್ಟಾಗ್ರಾಮ್‌ ಖಾತೆ ತೆರೆದಿರುವುದರಿಂದ ಮುಂಬರುವ ಚಿತ್ರದ ಪ್ರಚಾರಕ್ಕೂ ಅನುಕೂಲಕರವಾಗಿದೆ.

ಇದನ್ನೂ ಓದಿ:ದಳಪತಿ ವಿಜಯ್‌, ರಶ್ಮಿಕಾ ಅಭಿನಯದ 'ವರಿಸು' ಚಿತ್ರಕ್ಕೆ ಶೋಕಾಸ್ ನೋಟಿಸ್

'ಲಿಯೋ' ಚಿತ್ರದ ಶೂಟಿಂಗ್‌ನಲ್ಲಿ ವಿಜಯ್: ಸಿನಿಮಾದ ವಿಚಾರಕ್ಕೆ ಬಂದ್ರೆ 'ವಾರಿಸು' ಚಿತ್ರದ ನಂತರ 'ಲಿಯೋ' ಶೂಟಿಂಗ್ ವಿಜಯ್ ಬ್ಯುಸಿಯಾಗಿದ್ದಾರೆ. ಈ ಹಿಂದೆ 'ಮಾಸ್ಟರ್' ಸಿನಿಮಾವನ್ನು ಡೈರೆಕ್ಷನ್ ಮಾಡಿದ್ದ ಲೋಕೇಶ್ ಕನಕರಾಜ್ ಅವರು ಈ ಬಾರಿ ಲಿಯೋ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಕಾಶ್ಮೀರದಲ್ಲಿ ಒಂದು ಹಂತದ ಚಿತ್ರೀಕರಣ ಮುಗಿದಿದೆ. ವಿಜಯ್​ಗೆ ನಾಯಕಿಯಾಗಿ ತ್ರಿಷಾ ಅಭಿನಯಿಸಿದ್ದಾರೆ.

ಇದನ್ನೂ ಓದಿ:ನಿಜ ಜೀವನದಲ್ಲೂ ಹೀರೋ ರೀತಿ ಇರಿ: ದಳಪತಿಗೆ ಛೀಮಾರಿ ಹಾಕಿ, ದಂಡ ವಿಧಿಸಿದ ಮದ್ರಾಸ್ ಹೈಕೋರ್ಟ್​​

ನಟಿ ಪ್ರಿಯಾ ಆನಂದ್, ಬಾಲಿವುಡ್ ಸ್ಟಾರ್ ಸಂಜಯ್ ದತ್, ಅರ್ಜುನ್ ಸರ್ಜಾ, ಮಿಸ್ಕಿನ್, ಗೌತಮ್ ವಾಸುದೇವ್ ಮೆನನ್, ಸ್ಯಾಂಡಿ ಮಾಸ್ಟರ್, ಮನೋಬಾಲ, ಅಭಿರಾಮಿ, ಮಲಯಾಳಂ ನಟ ಮ್ಯಾಥ್ಯೂ ಥಾಮಸ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅನಿರುದ್ಧ್‌ ರವಿಚಂದರ್ ಮ್ಯೂಸಿಕ್ ನೀಡುತ್ತಿದ್ದಾರೆ. ಸುಮಾರು 250 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಲಿಯೋ ಇದೇ ವರ್ಷ ತೆರೆಗೆ ಬರಲಿದೆ.

ಇದನ್ನೂ ಓದಿ:ಬಾಲಿವುಡ್‌ ಯುವ ನಟನ ದೊಡ್ಡ ಅಭಿಮಾನಿಯಂತೆ 'ದಳಪತಿ' ವಿಜಯ್​!

ABOUT THE AUTHOR

...view details