ಕರ್ನಾಟಕ

karnataka

ETV Bharat / entertainment

ಕಾಲಿವುಡ್​ ಯುವ ನಟಿ ದೀಪಾ ಆತ್ಮಹತ್ಯೆ.. ಡೆತ್​ನೋಟ್​ನಲ್ಲಿದೆ ಸಾವಿನ ರಹಸ್ಯ - Actress suicide cases

ತಮಿಳು ಚಿತ್ರರಂಗದ ಯುವ ನಟಿ ದೀಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Actress deepa suicide by hang herself
ಯುವ ನಟಿ ದೀಪಾ ಆತ್ಮಹತ್ಯೆ

By

Published : Sep 18, 2022, 4:49 PM IST

ಚಿತ್ರರಂಗದಲ್ಲಿ ಮತ್ತೊಂದು ದುರಂತ ನಡೆದಿದೆ. ಕಾಲಿವುಡ್ ಯುವ ನಟಿ ದೀಪಾ ಅಲಿಯಾಸ್ ಪಾಲಿನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚೆನ್ನೈನ ವಿರುಗಂಬಾಕ್ಕಂನಲ್ಲಿರುವ ಖಾಸಗಿ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದ ದೀಪಾ ಶನಿವಾರದಂದು ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಒಂಟಿಯಾಗಿ ಜೀವನ ನಡೆಸುತ್ತಿದ್ದ ದೀಪಾ ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ನೇಹಿತರು ತಿಳಿಸಿದ್ದಾರೆ.

ಶನಿವಾರ ನಟಿ ದೀಪಾ ಕುಟುಂಬಸ್ಥರ ಫೋನ್ ರಿಸೀವ್​​ ಮಾಡಿರಲಿಲ್ಲ. ಬಳಿಕ ಕುಟುಂಬಸ್ಥರು ದೀಪಾ ಅವರ ಸ್ನೇಹಿತ ಪ್ರಭಾಕರನ್​​ ಅವರಿಗೆ ಕರೆ ಮಾಡಿದ್ದಾರೆ. ಪ್ರಭಾಕರನ್ ದೀಪಾ ಅವರ ಮನೆಗೆ ಬಂದು ನೋಡಿದಾಗ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

ಯುವ ನಟಿ ದೀಪಾ ಆತ್ಮಹತ್ಯೆ

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ದೀಪಾ ಆತ್ಮಹತ್ಯೆಗೆ ಪ್ರೇಮ ಪ್ರಕರಣವೇ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್​​ ನೋಟ್ ಸಹ ಪತ್ತೆಯಾಗಿದೆ. ಅದರಲ್ಲಿ ತನ್ನ ಸಾವಿಗೆ ಯಾರೂ ಕಾರಣರಲ್ಲ, ಜೀವನ ಪರ್ಯಂತ ಅವರನ್ನು ಪ್ರೀತಿಸುತ್ತಲೇ ಇರುತ್ತೇನೆ ಎಂದು ಬರೆದಿದ್ದಾರೆ.

ಯುವ ನಟಿ ದೀಪಾ ಆತ್ಮಹತ್ಯೆ

ದೀಪಾರ ಸಹೋದರ ದಿನೇಶ್ ಅವರು ನಿನ್ನೆ(ಸೆ.17) ಕೊಯಂಬೇಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಮೊದಲ ಹಂತದ ವಿಚಾರಣೆಯಲ್ಲಿ ದೀಪಾ ಬರೆದಿಟ್ಟಿದ್ದ ಡೆತ್ ನೋಟ್ ಪತ್ತೆಯಾಗಿದೆ. "ನಾನು ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೆ. ಆದರೆ ಅದು ಸರಿಯಾಗಿ ನಡೆಯಲಿಲ್ಲ. ಹಾಗಾಗಿ ನಾನು ಇಹಲೋಕ ತ್ಯಜಿಸುತ್ತಿದ್ದೇನೆ. ನನ್ನ ಆತ್ಮಹತ್ಯೆಗೆ ಯಾರೂ ಕಾರಣರಲ್ಲ" ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:'ಮಿಸ್​ ಯೂ ಹಬ್ಬಿ' ಎಂದ ಅನುಷ್ಕಾ ಶರ್ಮಾ: ಪೋಸ್ಟ್‌ಗೆ ಹಾರ್ಟ್‌ ಕೊಟ್ಟ ರಣವೀರ್ ಸಿಂಗ್

ದೀಪಾ ಹಲವು ತಮಿಳು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ನಟಿಸಿದ್ದಾರೆ. ಸಣ್ಣಪುಟ್ಟ ಪಾತ್ರಗಳಲ್ಲಾದರೂ ತನ್ನ ನಟನೆಯಿಂದ ಉತ್ತಮ ಮನ್ನಣೆ ಗಳಿಸಿದ್ದ ಅವರು ನಾಸರ್ ಅಭಿನಯದ 'ವೈಥಾ' ಸಿನಿಮಾ ಮೂಲಕ ನಾಯಕಿಯಾಗಿ ಪರಿಚಯಿಸಲ್ಪಟ್ಟರು. ಸದ್ಯ ದೀಪಾ ವಿಶಾಲ್ ಅಭಿನಯದ 'ತುಪ್ಪರಿವಾಲನ್' ಚಿತ್ರದಲ್ಲಿ ನಟಿಸುತ್ತಿದ್ದರು. ಇದೀಗ ಇಹಲೋಕ ತ್ಯಜಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ABOUT THE AUTHOR

...view details