ಮೈಸೂರು: ದಿ. ಪುನೀತ್ ರಾಜ್ಕುಮಾರ್ ಅವರ ನೆಚ್ಚಿನ ಸ್ಥಳವಾಗಿರುವ ಶಕ್ತಿಧಾಮಕ್ಕೆ ತಮಿಳು ನಟ ವಿಶಾಲ್ ಭೇಟಿ ನೀಡಿದ್ದಾರೆ..
ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಶಕ್ತಿಧಾಮಕ್ಕೆ ಇಂದು ಭೇಟಿ ನೀಡಿದ ನಟ ವಿಶಾಲ್ ಅವರನ್ನು ಟ್ರಸ್ಟ್ನವರು ಬರಮಾಡಿಕೊಂಡರು. ಪುನೀತ್ ಅವರ ಕಾರ್ಯಕ್ರಮದಲ್ಲಿ ಶಕ್ತಿಧಾಮಕ್ಕೆ ಸಹಾಯ ಮಾಡುತ್ತೇನೆ ಎಂದಿದ್ದ ವಿಶಾಲ್ ಅವರು ಘೋಷಿಸಿದ್ದರು. ಇದೀಗ ಶಕ್ತಿಧಾಮಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಮಾತುಕತೆ ನಡೆಸಿದ್ದಾರೆ.