ಕರ್ನಾಟಕ

karnataka

ETV Bharat / entertainment

ಅಕ್ಷಿತ್ ಶಶಿಕುಮಾರ್ ಸಿನಿಮಾ 'ಖೆಯೊಸ್‌' ಗೆ ತಮಿಳು ಸ್ಟಾರ್ ವಿಶಾಲ್​ ಸಪೋರ್ಟ್​ - ಖೆಯೊಸ್‌ ಅಪ್ಡೇಟ್​​

ಅಕ್ಷಿತ್ ಶಶಿಕುಮಾರ್ - ಅದಿತಿ ಪ್ರಭುದೇವ ನಟನೆಯ 'ಖೆಯೊಸ್‌' ಚಿತ್ರಕ್ಕೆ ಇದೀಗ ತಮಿಳು ನಟ ವಿಶಾಲ್ ಸಪೋರ್ಟ್ ಮಾಡುತ್ತಿದ್ದಾರೆ.

Akshith Shashikumar Starrer Chaos Movie
ಅಕ್ಷಿತ್ ಶಶಿಕುಮಾರ್ ಸಿನಿಮಾ ಸಪೋರ್ಟ್​ಗೆ ಬಂದ ತಮಿಳು ಸ್ಟಾರ್

By

Published : Feb 7, 2023, 12:37 PM IST

ಖೆಯೊಸ್ ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ. ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಕನ್ನಡ ಚಿತ್ರರಂಗದಲ್ಲಿ ಅಪ್ಪನಂತೆ ಸಕ್ಸಸ್ ಆಗಲು ಸರ್ಕಸ್ ಮಾಡುತ್ತಿದ್ದಾರೆ. ಹೀಗಾಗಿ ಈ ವರ್ಷ ಕ್ಯಾಚೀ ಟೈಟಲ್​​ನ ಖೆಯೊಸ್ ಎಂಬ ಚಿತ್ರದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಒಳ್ಳೆಯ ಕಂಟೆಂಟ್ ಹೊಂದಿರುವ ಖೆಯೊಸ್ ಚಿತ್ರಕ್ಕೆ ಇದೀಗ ತಮಿಳು ನಟ ವಿಶಾಲ್ ಸಪೋರ್ಟ್ ಮಾಡುತ್ತಿದ್ದಾರೆ. ಹೌದು ಸಿನಿಮಾದಲ್ಲಿ ಅಕ್ಷಿತ್ ಶಶಿಕುಮಾರ್ ಡಾಕ್ಟರ್ ಪಾತ್ರ ಮಾಡುತ್ತಿದ್ದು, ಚಿತ್ರದ ನಿರೀಕ್ಷೆ ಹೆಚ್ಚಿಸಿದೆ. ತಮಿಳು ನಟ ವಿಶಾಲ್ ಖೆಯೊಸ್ ಚಿತ್ರದ ಟ್ರೈಲರ್​​ನ್ನ ತಮ್ಮ ಸಾಮಾಜಿಕ ಖಾತೆಯಲ್ಲಿ ಬಿಡುಗಡೆ ಮಾಡುವ ಮೂಲಕ ಅಕ್ಷಿತ್ ಚಿತ್ರಕ್ಕೆ ಸಾಥ್ ನೀಡಿದ್ದಾರೆ.

'ಖೆಯೊಸ್‌' ಚಿತ್ರ ತಂಡ

ಸದ್ಯ ಪೋಸ್ಟರ್ ಹಾಗೂ ಟೀಸರ್​​ನಿಂದಲೇ ಸ್ಯಾಂಡಲ್​​​​ವುಡ್​​ನಲ್ಲಿ ಸದ್ದು ಮಾಡುತ್ತಿರುವ ಖೆಯೊಸ್ ಚಿತ್ರದ ಬಿಡುಗಡೆ ದಿನಾಂಕ ಸಹ ಘೋಷಣೆಯಾಗಿದೆ. ಚಿತ್ರದಲ್ಲಿ ಅಕ್ಷಿತ್ ಶಶಿಕುಮಾರ್ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಅದಿತಿ ಪ್ರಭುದೇವ್​ ನಟಿಸಿದ್ದಾರೆ. ಖೆಯೊಸ್ ಎಂದರೆ ಮನುಷ್ಯನ ಮನಸ್ಸಿನಲ್ಲಾಗುವ ಗೊಂದಲ. ಇದು ವೈದ್ಯಕೀಯ ಕಾಲೇಜೊಂದರಲ್ಲಿ ನಡೆಯುವ ಕಥೆ. ನಾಯಕ ಅನಿರೀಕ್ಷಿತವಾಗಿ ಒಂದು ಸಮಸ್ಯೆಗೆ ಸಿಲುಕಿಕೊಳ್ಳುತ್ತಾನೆ. ಆತ ತನ್ನ ಜಾಣ್ಮೆಯಿಂದ ಹೇಗೆ ಆ ಸಮಸ್ಯೆಯಿಂದ ಹೇಗೆ ಪಾರಾಗುತ್ತಾನೆ ಎಂಬುದು ಕಥಾ ಹಂದರ.

ಅಕ್ಷಿತ್ ಹಾಗೂ ಶಶಿಕುಮಾರ್

ನಾಯಕ ನಟಿ ಅದಿತಿ ಪ್ರಭುದೇವ್​ ಮಾತನಾಡಿ, 'ಖೆಯೊಸ್‌ ಎಂದರೆ ಮನಸ್ಸಿನಲ್ಲಾಗುವ ಗೊಂದಲ. ನಾನು ಕೂಡ ವೈದ್ಯಕೀಯ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದೇನೆ. ಇದರ ಜತೆಗೆ ಶಶಿಕುಮಾರ್, ಆರ್.ಕೆ ಚಂದನ್, ಶಿವಾನಂದ್ ಸೇರಿದಂತೆ ಸಾಕಷ್ಟು ಕಲಾವಿದರು ಈ‌ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದರು.

'ಖೆಯೊಸ್‌' ಚಿತ್ರ ತಂಡ

ಈ ಚಿತ್ರವನ್ನ ನಿರ್ದೇಶಕ ಜಿ.ವಿ ಪ್ರಸಾದ್ ನಿರ್ದೇಶನ ಮಾಡಿದ್ದಾರೆ.THE BLACK PEBBLE ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಪಾರುಲ್ ಅಗರವಾಲ್ ಹಾಗೂ ಹೇಮಚಂದ್ರ ರೆಡ್ಡಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ವಿಜಯ್ ಹರಿತ್ಸ ಸಂಗೀತ ನೀಡಿದ್ದಾರೆ. ಸಿನಿಮಾವನ್ನ ರಾಜ್ಯಾದ್ಯಂತ ಬೆಂಗಳೂರು ಕುಮಾರ್ ವಿತರಣೆ ಮಾಡುವ ಹೊಣೆ ಹೊತ್ತಿದ್ದಾರೆ. ಸದ್ಯ ಟೀಸರ್ ನಿಂದಲೇ ಭರವಸೆ ಮೂಡಿಸಿರುವ ಖೆಯೊಸ್ ಸಿನಿಮಾ ಇದೇ ತಿಂಗಳು 17ರಂದು ಚಿತ್ರ ಬಿಡುಗಡೆಯಾಗುತ್ತಿದೆ.

ಅದೃಷ್ಟ ಪರೀಕ್ಷೆಗಿಳಿದ ಅಕ್ಷಿತ್:ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಯಶಸ್ಸು ಕಾಣಬೇಕು ಎಂದು ಅದೆಷ್ಟೋ ಪ್ರತಿಭೆಗಳು ಕನಸು ಇಟ್ಟುಕೊಂಡು ಚಿತ್ರರಂಗಕ್ಕೆ ಬರುತ್ತಾರೆ. ಆದರೆ ಕೆಲವರಿಗೆ ಮಾತ್ರ ಈ ಬಣ್ಣದ ಲೋಕ‌ ಕೈ ಹಿಡಿಯುತ್ತದೆ. ಈ ಸಾಲಿನಲ್ಲಿ ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಕೂಡ ಇದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಂದೆಯಂತೆ ಸಕ್ಸಸ್ ಕಾಣಲು ಶ್ರಮ ಹಾಕುತ್ತಿದ್ದಾರೆ. ಕ್ಯಾಚಿ ಟೈಟಲ್ ಇರುವ ಖೆಯೊಸ್ ಎಂಬ ಚಿತ್ರದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಇದನ್ನೂ ಓದಿ:ಖೆಯೊಸ್ ಸಿನಿಮಾ‌ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗಿಳಿದ ಶಶಿಕುಮಾರ್ ಪುತ್ರ ಅಕ್ಷಿತ್

ABOUT THE AUTHOR

...view details