ಕರ್ನಾಟಕ

karnataka

ETV Bharat / entertainment

ಕಾಲಿವುಡ್​ ನಟ ಸೂರ್ಯ 43ನೇ ಸಿನಿಮಾ ಘೋಷಣೆ; ಮತ್ತೆ ಒಂದಾದ 'ಸೂರರೈ ಪೋಟ್ರು' ತಂಡ - ಈಟಿವಿ ಭಾರತ ಕನ್ನಡ

ಬ್ಲಾಕ್​ಬಸ್ಟರ್​ 'ಸೂರರೈ ಪೋಟ್ರು' ಚಿತ್ರತಂಡ ಮತ್ತೊಮ್ಮೆ ಒಂದಾಗಿದೆ. ಕಾಲಿವುಡ್​ ನಟ ಸೂರ್ಯ ಹಾಗೂ ನಿರ್ದೇಶಕಿ ಸುಧಾ ಕೊಂಗರ ಕಾಂಬೋದಲ್ಲಿ ಮತ್ತೊಂದು ಸಿನಿಮಾ ಬರಲು ಸಜ್ಜಾಗಿದೆ.

Tamil Actor Surya 43th movie announced
ಕಾಲಿವುಡ್​ ನಟ ಸೂರ್ಯ 43ನೇ ಸಿನಿಮಾ ಘೋಷಣೆ; ಮತ್ತೆ ಒಂದಾದ 'ಸೂರರೈ ಪೋಟ್ರು' ತಂಡ

By ETV Bharat Karnataka Team

Published : Oct 27, 2023, 1:11 PM IST

ತಮಿಳು ಚಿತ್ರರಂಗದ ಖ್ಯಾತ ನಟ ಸೂರ್ಯ ಹಾಗೂ ನಿರ್ದೇಶಕಿ ಸುಧಾ ಕೊಂಗರ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಕನ್ನಡಿಗ ಕ್ಯಾಪ್ಟನ್​ ಗೋಪಿನಾಥ್​ ಜೀವನ ಕಥಾಧಾರಿತ ಸಿನಿಮಾ 'ಸೂರರೈ ಪೋಟ್ರು' ಮೂಲಕ ಸಂಚಲನ ಮೂಡಿಸಿದ್ದ ಈ ಜೋಡಿ ಮಗದೊಮ್ಮೆ ಒಂದಾಗಿದ್ದಾರೆ. ಸೂರ್ಯನ 43ನೇ ಸಿನಿಮಾಗೆ ಸುಧಾ ಕೊಂಗರ ಆ್ಯಕ್ಷನ್​ ​ ಕಟ್​ ಹೇಳುತ್ತಿದ್ದಾರೆ.

'ಸೂರರೈ ಪೋಟ್ರು' ಸಿನಿಮಾವು ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದಲೂ ಭಾರಿ ಮೆಚ್ಚುಗೆ ಪಡೆದುಕೊಂಡಿತ್ತು. ಆಸ್ಕರ್​ ರೇಸ್​ಗೂ ಇಳಿದಿದ್ದ ಈ ಚಿತ್ರ ಹಲವು ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಬಾಚಿಕೊಂಡಿತ್ತು. ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಹಿನ್ನೆಲೆ ಸಂಗೀತ, ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಈ ತಂಡ ಇದೀಗ ಹೊಸ ಪ್ರಾಜೆಕ್ಟ್​ಗಾಗಿ ಮತ್ತೆ ಒಂದಾಗಿದೆ.

'ಸೂರರೈ ಪೋಟ್ರು' ಮೂಲಕ ಧಮಾಕ ಸೃಷ್ಟಿಸಿದ್ದ ಸೂರ್ಯ ಹಾಗೂ ಸುಧಾ ಕೊಂಗರ ಹೊಸ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಮಾಲಿವುಡ್​ ಹ್ಯಾಂಡ್ಸಮ್​ ಹಂಕ್​ ದುಲ್ಕರ್​ ಸಲ್ಮಾನ್​, ನಜ್ರಿಯಾ ಫಹದ್​ ಹಾಗೂ ವಿಜಯ್​ ವರ್ಮಾ ಅವರು ಸೂರ್ಯ ನಟನೆಯ 43ನೇ ಚಿತ್ರದ ಭಾಗವಾಗಿದ್ದಾರೆ.

ಇದನ್ನೂ ಓದಿ:Jyotika and Surya: ಕೋಪನ್‌ಹೇಗನ್‌ನಲ್ಲಿ ಮಗನ ಹುಟ್ಟುಹಬ್ಬ ಆಚರಿಸಿದ ನಟ ಸೂರ್ಯ ದಂಪತಿ

ತಾತ್ಕಾಲಿಕವಾಗಿ #Suriya43 ಎಂದು ಟೈಟಲ್​ ಇಡಲಾಗಿದೆ. ಸೂರ್ಯ ಒಡೆತನದ 2D ಎಂಟರ್​ಟೈನ್​ಮೆಂಟ್​ ಅಡಿ ಜ್ಯೋತಿಕಾ, ಸೂರ್ಯ ಮತ್ತು ರಾಜಶೇಖರ್​ ಕರ್ಪೂರ ಸುಂದರ ಪಾಂಡಿಯನ್​ ನಿರ್ಮಿಸಲಿದ್ದಾರೆ. ಮ್ಯೂಸಿಕ್​ ಮಾಂತ್ರಿಕ ಜಿ.ವಿ ಪ್ರಕಾಶ್​ ಸಂಗೀತ ನಿರ್ದೇಶಿಸುತ್ತಿರುವ 100ನೇ ಚಿತ್ರ ಇದಾಗಿರುವುದು ಮತ್ತೊಂದು ವಿಶೇಷ. 'ಸೂರರೈ ಪೋಟ್ರು' ಮೂಲಕ ಮೋಡಿ ಮಾಡಿದ್ದ ಸೂರ್ಯ, ಸುಧಾ ಹಾಗೂ ಜಿ.ವಿ ಪ್ರಕಾಶ್​ ಹೊಸ ಪ್ರಾಜೆಕ್ಟ್​ ಮೇಲೆ ನಿರೀಕ್ಷೆ ಇಮ್ಮಡಿಯಾಗಿದೆ.

ಸೂರ್ಯ ಅಭಿನಯನದಲ್ಲಿ ಬರ್ತಿದೆ 'ರೋಲೆಕ್ಸ್': ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್​ ಅವರ ವಿಕ್ರಮ್​ ಸಿನಿಮಾದಲ್ಲಿ ರೋಲೆಕ್ಸ್​ ಪಾತ್ರ ಸಂಚಲನ ಸೃಷ್ಟಿಸಿದ್ದು ನಿಮಗೆ ಗೊತ್ತಿದೆ. ಕಾಲಿವುಡ್​ ಸೂಪರ್​ ಸ್ಟಾರ್ ಸೂರ್ಯ ಅಭಿನಯ ಸಖತ್ ಸದ್ದು ಮಾಡಿತ್ತು. ಖಳನಾಯಕನ ಪಾತ್ರದಲ್ಲಿ ಸೂರ್ಯರನ್ನು ಕಂಡ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದರು. ಇದೇ ರೋಲೆಕ್ಸ್​ ಹೊಸ ಸಿನಿಮಾ ಆಗಲಿದೆ ಎಂಬ ಸುಳಿವನ್ನು ಈ ಮೊದಲೇ ಸೂರ್ಯ ನೀಡಿದ್ದರು. ಈ ಬಗ್ಗೆ ಅಭಿಮಾನಿಗಳು ಅಪ್​ಡೇಟ್​ ನಿರೀಕ್ಷಿಸುತ್ತಿದ್ದಾರೆ.

ಇದಲ್ಲದೇ, ನಟ ಸೂರ್ಯ ಅವರು ವಿಡುತಲೈ ಸೀಕ್ವೆಲ್​​ ಶೂಟಿಂಗ್​ ಪೂರ್ಣಗೊಂಡ ನಂತರ, ವೆಟ್ರಿಮಾರನ್​ ಜೊತೆಗಿನ ಬಹುನಿರೀಕ್ಷಿತ ಸಿನಿಮಾ ವಾಡಿವಾಸಲ್ ಪ್ರಾರಂಭವಾಗಲಿದೆ. ಶಿವ ನಿರ್ದೇಶನದ ನಟನ ಮುಂದಿನ ಸಿನಿಮಾ​ 'ಕಂಗುವ' ನಿರೀಕ್ಷಿಸಿದ್ದಕ್ಕಿಂತ ಉತ್ತಮವಾಗಿ ಮೂಡಿ ಬಂದಿದೆಯಂತೆ. ಯುವಿ ಕ್ರಿಯೇಷನ್ಸ್ ಮತ್ತು ಸ್ಟುಡಿಯೋ ಗ್ರೀನ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದಲ್ಲಿ ನಟಿ ದಿಶಾ ಪಟಾನಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು 3ಡಿಯಲ್ಲಿ 10 ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಮುಂದಿನ ವರ್ಷ ಸಿನಿಮಾ ತೆರೆ ಕಾಣಲಿದೆ.

ಇದನ್ನೂ ಓದಿ:'ಈ ಸಿನಿಮಾ ಚಿತ್ರೀಕರಣದ ವೇಳೆ ನನಗೆ 22 ವರ್ಷ': ನಟ ಸೂರ್ಯ ಜೊತೆಗಿನ ಅಪರೂಪದ ಫೋಟೋ ಹಂಚಿಕೊಂಡ ರಮ್ಯಾ

ABOUT THE AUTHOR

...view details