ಮುಂಬೈ: ನಟಿ ತಮನ್ನಾ ಭಾಟಿಯಾ ಬಬ್ಲಿ ಬೌನ್ಸರ್ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ. ಮೊದಲ ಬಾರಿಗೆ ಲೇಡಿ ಬಾಕ್ಸರ್ ಆಗಿ ಕಾಣಿಸಿಕೊಳ್ಳುತ್ತಿರುವ ಮಿಲ್ಕಿ ಬ್ಯೂಟಿ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಸ್ಯನಟ ಕಪಿಲ್ ಶರ್ಮಾ ನಡೆಸಿಕೊಡುವ 'ದಿ ಕಪಿಲ್ ಶರ್ಮಾ ಶೋ'ದಲ್ಲಿ ಅವರು ಮುಂಬರುವ ಸೀಸನ್ನಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದ ಬಗ್ಗೆ ನಿಮ್ಮ ತಯಾರಿ ಹೇಗಿತ್ತು? ಮತ್ತು ಈ ಪಾತ್ರದಲ್ಲಿ ಕಾಣಿಸಿಕಿಳ್ಳಲು ನಿಮಗೆ ಸ್ಫೂರ್ತಿ ಯಾರು? ಸದ್ಯ ನಿಮ್ಮ ಸಿನಿಮಾ ಪಯಣ ಹೇಗಿದೆ? ಎಂಬ ಹತ್ತಾರು ಪ್ರಶ್ನೆಗಳನ್ನು ಕೇಳಲಾಗಿದೆಯಂತೆ.
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ, ತಮ್ಮ ಪಾತ್ರದ ಬಗ್ಗೆ ಮತ್ತು ಮಹಿಳಾ ಬೌನ್ಸರ್ ಪಾತ್ರಕ್ಕಾಗಿ ಹೇಗೆ ತಯಾರಿ ನಡೆಸಿದ್ದಾಳೆ ಎಂಬುದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರಂತೆ. 'ಬಬ್ಲಿ ಬೌನ್ಸರ್' ಒಂದು ಕಾಮಿಡಿ ಟಚ್ ಜೊತೆಗೆ ಒಂದು ಸ್ಫೂರ್ತಿದಾಯಕ ಸಿನಿಮಾ ಆಗಿದೆ. ಈ ಚಿತ್ರಕ್ಕಾಗಿಯೇ ನಾನು ಕಂಪ್ಲೀಟ್ ಬದಲಾಗಿರುವೆ. ಇದಕ್ಕೆಲ್ಲ ಕಾರಣ ನನ್ನ ಕುಟುಂಬ ಎಂದು ಅವರು ಹೇಳಿಕೊಂಡಿದ್ದಾರಂತೆ.
ಆರಂಭದಲ್ಲಿ ಈ ಚಿತ್ರದ ಕಥೆ ಕೇಳಿದಾಗ ನಮ್ಮ ಸುತ್ತಮುತ್ತಲಿನ ನಡೆದಿರುವ ಘಟನೆ ಅನಿಸಿತು. ನನ್ನ ಜೀವನಕ್ಕೂ ಸಹ ಬಹಳ ಹತ್ತಿರವೆನಿಸಿತು. ಹಲವರಿಗೆ ನನ್ನ ಭಾಭೀ (ಸಹೋದರ ಪತ್ನಿ ಅಥವಾ ಅತ್ತಿಗೆ) ಬಗ್ಗೆ ಗೊತ್ತಿಲ್ಲ. ಈ ಚಿತ್ರ ಒಪ್ಪಿಕೊಳ್ಳಲು ಮೂಲ ಕಾರಣ ಅವಳೆ. ನನ್ನ ಮನೆಯ ಸದಸ್ಯರ ಕಥೆಯನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದೇನೆ ಎಂಬ ಭಾಸವಾಯಿತು.