ಕರ್ನಾಟಕ

karnataka

ETV Bharat / entertainment

ಅಭಿಮಾನಿ ಕೈ ಮೇಲೆ 'ತಮನ್ನಾ ಟ್ಯಾಟೂ'....ಫ್ಯಾನ್ಸ್ ಪ್ರೀತಿಗೆ ಬಹುಬೇಡಿಕೆ ನಟಿ ಭಾವುಕ - ತಮನ್ನಾ ಭಾಟಿಯಾ ಲೇಟೆಸ್ಟ್ ನ್ಯೂಸ್

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರ ಅಭಿಮಾನಿಯೊಬ್ಬರು ತಮ್ಮ ಕೈ ಮೇಲೆ ತಮನ್ನಾರ ಭಾವಚಿತ್ರದ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

Tamannaah Bhatia fan tattoo
ಅಭಿಮಾನಿ ಕೈ ಮೇಲೆ ತಮನ್ನಾ ಟ್ಯಾಟೂ

By

Published : Jun 27, 2023, 1:12 PM IST

ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಮಿಂಚು ಹರಿಸುವ ಸ್ಟಾರ್ ಕಲಾವಿದರಿಗೆ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗ ಇರುತ್ತದೆ. ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ತಮ್ಮ ಮೆಚ್ಚಿನ ನಟ ನಟಿಯರಿಗೆ ಪ್ರೀತಿ ವ್ಯಕ್ತಪಡಿಸುತ್ತಾರೆ. ಅದೇ ರೀತಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮೇಲೆ ಅಭಿಮಾನಿಯೊಬ್ಬರು ಪ್ರೀತಿಯ ಮಳೆಯನ್ನೇ ಹರಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ತಮ್ಮ ಅಭಿಮಾನಿಯೊಬ್ಬರನ್ನು ಭೇಟಿಯಾದ ವೇಳೆ ನಟಿ ತಮನ್ನಾ ಭಾಟಿಯಾ ಭಾವುಕರಾದರು.

ತಮನ್ನಾ ಪಾದ ಸ್ಪರ್ಶಿಸಿ ನಮಸ್ಕರಿಸಿದ ಅಭಿಮಾನಿ: ಸಾಮಾಜಿಕ ಮಾಧ್ಯಮದಲ್ಲಿ ಪಾಪರಾಜಿ ಒಬ್ಬರು ಹಂಚಿಕೊಂಡ ವಿಡಿಯೋದಲ್ಲಿ ನಟಿ ತಮನ್ನಾ ಭಾಟಿಯಾ ಮಹಿಳಾ ಅಭಿಮಾನಿಯೊಂದಿಗೆ ಸಂವಹನ ನಡೆಸುತ್ತಿರುವುದು ಕಂಡು ಬಂದಿದೆ. ವಿಡಿಯೋದಲ್ಲಿ ಅಭಿಮಾನಿಯೊಬ್ಬರು, ತಮನ್ನಾ ಅವರ ಪಾದ ಮುಟ್ಟಿ ನಮಸ್ಕಾರ ಮಾಡಿದ್ದಾರೆ. ಅವರು ನಟಿಗೆ ಪುಷ್ಪಗುಚ್ಛ ಸೇರಿದಂತೆ ಕೆಲ ಉಡುಗೊರೆಗಳನ್ನು ನೀಡಿದರು. ತಮನ್ನಾ ಭಾವುಕರಾಗಿ ಅಭಿಮಾನಿಯನ್ನು ತಬ್ಬಿಕೊಂಡರು.

ನಂತರ ಆ ಅಭಿಮಾನಿ ನಟಿಯೊಂದಿಗೆ ಮಾತನಾಡುವ ವೇಳೆ ತನ್ನ ಕೈ ಮೇಲೆ ಹಾಕಿಸಿಕೊಂಡಿದ್ದ ಹಚ್ಚೆಯನ್ನು ಪ್ರದರ್ಶಿಸಿದರು. ನಟಿ ತಮನ್ನಾ ಭಾಟಿಯಾ ಅವರ ಭಾವಚಿತ್ರದ ಟ್ಯಾಟೂ ಹಾಕಲಾಗಿತ್ತು. ಟ್ಯಾಟೂ ಕೆಳಗೆ 'ಲವ್ ಯು ತಮನ್ನಾ' ಎಂದು ಸಹ ಬರೆಸಿಕೊಂಡಿದ್ದರು. ನಟಿ ತಮನ್ನಾ ಭಾಟಿಯಾ ಅಭಿಮಾನಿಯನ್ನು ತಬ್ಬಿಕೊಂಡು ಅವರ ಪ್ರೀತಿಗಾಗಿ ಹಲವು ಬಾರಿ ಧನ್ಯವಾದಗಳನ್ನು ತಿಳಿಸಿದರು.

"ತಮನ್ನಾ ಬಹಳ ಅದೃಷ್ಟಶಾಲಿ"... ಮುಂಬೈ ವಿಮಾನ ನಿಲ್ದಾಣದ ತಮನ್ನಾ ಮತ್ತು ಅವರ ಅಭಿಮಾನಿಯ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈ ವಿಡಿಯೋಗೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು, "ತಮನ್ನಾ ಅವರ ಬಗ್ಗೆ ಸುಮಾರು 13 ವರ್ಷಗಳಿಂದ ನಾನು ತಿಳಿದುಕೊಂಡಿದ್ದೇನೆ, ಅವರು ಗೋಲ್ಡನ್​ ಹಾರ್ಟ್ ಗರ್ಲ್" ಎಂದು ಹೇಳಿದ್ದಾರೆ. ಇನ್ನೋರ್ವ ಬಳಕೆದಾರರು ಪ್ರತಿಕ್ರಿಯಿಸಿ, "ಯಾರಾದರೂ ನಿಮಗಾಗಿ ಟ್ಯಾಟೂ ಹಾಕಿಸಿಕೊಳ್ಳೋದು, ಎಂಥಾ ಭಾವನೆ" ಎಂದು ಕಾಮೆಂಟ್ ಮಾಡಿದ್ದಾರೆ. "ತಮನ್ನಾ ಬಹಳ ಅದೃಷ್ಟಶಾಲಿ" ಎಂದು ಅಭಿಮಾನಿಯೋರ್ವರು ತಿಳಿಸಿದ್ದಾರೆ.

ಇದನ್ನೂ ಓದಿ:ಬಹುತಾರಾಗಣದ 'ಪ್ರಾಜೆಕ್ಟ್ ಕೆ': ಈ ಬಿಗ್​​ ಸ್ಟಾರ್ಸ್​ ಪಡೆಯಲಿರುವ ಸಂಭಾವನೆ ಎಷ್ಟು ಗೊತ್ತಾ?

ಇತ್ತೀಚೆಗೆ ಅರುಣಿಮಾ ಶರ್ಮಾ ನಿರ್ದೇಶನದ ಮತ್ತು ದಿನೇಶ್ ವಿಜನ್ ಅವರ ಮ್ಯಾಡಾಕ್ ಫಿಲ್ಮ್ಸ್ ನಿರ್ಮಿಸಿದ 'ಜೀ ಕರ್ದಾ' ವೆಬ್ ಸೀರಿಸ್​ನಲ್ಲಿ ತಮನ್ನಾ ಕಾಣಿಸಿಕೊಂಡರು. ಈ ಸರಣಿಯು ಜೂನ್ 15 ರಂದು ಪ್ರೈಮ್ ವಿಡಿಯೋದಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಲಸ್ಟ್ ಸ್ಟೋರೀಸ್ 2 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೆರಡು ದಿನಗಳಲ್ಲಿ, ಜೂನ್​ 29ರಂದು ಸ್ಟ್ರೀಮಿಂಗ್​ ಪ್ರಾರಂಭಿಸಲಿದೆ. ಈ ಎರಡೂ ಸೀರಿಸ್​ನಲ್ಲಿ ನಟಿ ತಮನ್ನಾ ಭಾಟಿಯಾ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. 18 ವರ್ಷಗಳ ಸಿನಿ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಇಂತಹ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಹಲವರಿಂದ ಟೀಕೆ ಸ್ವೀಕರಿಸಿದ್ದು, ಓರ್ವ ನಟಿಯಾಗಿ ನಾನು ನನ್ನ ಕೆಲಸ ಮಾಡಿದ್ದೇನೆಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಇದನ್ನೂ ಓದಿ:ಕೆಲಸ ಕಳೆದುಕೊಂಡ ಮಹಿಳಾ ಬಸ್ ಡ್ರೈವರ್​ಗೆ ಕಾರ್​ ಗಿಫ್ಟ್​ ಕೊಟ್ಟ ನಟ ಕಮಲ್​ ಹಾಸನ್​

ABOUT THE AUTHOR

...view details