ತಮನ್ನಾ ಭಾಟಿಯಾ ಇವರ ಬಗ್ಗೆ ಹೆಚ್ಚು ಹೇಳಬೇಕೆಂದಿಲ್ಲ. ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಇವರು ಕೂಡಾ ಒಬ್ಬರು. ಬಾಲಿವುಡ್ಗೆ ಯಶಸ್ವಿಯಾಗಿ ಪ್ರವೇಶಿಸಿ, ಸದ್ಯ ಇಡೀ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ನಟಿ ತಮ್ಮ ಆಭರಣಗಳಿಂದ ಸುದ್ದಿಯಾಗಿದ್ದಾರೆ. 2 ಕೋಟಿ ಮೌಲ್ಯದ ವಜ್ರಾಭರಣವನ್ನು ಹೊಂದಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಈ ವಿಚಾರವನ್ನು ಸ್ವತಃ ತಮನ್ನಾ ಅವರೇ ತಳ್ಳಿ ಹಾಕಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ನಟಿ ತನ್ನ ಉಂಗುರದ ಬೆರಳಿಗೆ ದೊಡ್ಡ ಉಂಗುರ ಧರಿಸಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಆದರೆ, ಅದು ಡೈಮಂಡ್ ರಿಂಗ್ ಅಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಫೋಟೋವನ್ನು ಹಂಚಿಕೊಳ್ಳುತ್ತಾ, "ನಿಮಗೆ ಈ ಮಾತು ಇಷ್ಟವಾಗಲ್ಲ. ಆದರೆ ನಾವು ಬಾಟಲ್ ಓಪನರ್‌ನೊಂದಿಗೆ ಫೋಟೋಶೂಟ್ ಮಾಡುತ್ತಿದ್ದೆವು ಮತ್ತು ಅದು ನಿಜವಾದ ವಜ್ರವಲ್ಲ" ಎಂದು ಬರೆದಿದ್ದಾರೆ.
ಇದಕ್ಕೂ ಮೊದಲು, ಆರ್ಆರ್ಆರ್ ಸ್ಟಾರ್ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೊನಿಡೇಲಾ ಅವರು ಈ ವಜ್ರದ ಉಂಗುರವನ್ನು ತಮನ್ನಾಗೆ ಉಡುಗೊರೆಯಾಗಿ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದವು. ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿನ ಕೊಡುಗೆಗಾಗಿ ಉಪಾಸನಾ ಅವರು ಈ ಆಭರಣವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗಿತ್ತು. 2019ರಲ್ಲಿ ತೆರೆ ಕಂಡ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಾಕ್ಸ್ ಆಫೀಸ್ನಲ್ಲೂ ಭರ್ಜರಿ ಕಲೆಕ್ಷನ್ ಮಾಡಿತ್ತು.