ಕರ್ನಾಟಕ

karnataka

ETV Bharat / entertainment

ನಿರ್ದೇಶಕ ರವಿಪುಡಿಯೊಂದಿಗೆ ತಮನ್ನಾ ಜಗಳ: ಮೌನ ಮುರಿದ ಮಿಲ್ಕಿ​ ಬ್ಯೂಟಿ - ತಮನ್ನಾ ಭಾಟಿಯಾ ಟ್ವೀಟ್

ತಮನ್ನಾ ಭಾಟಿಯಾ ನಿರ್ದೇಶಕ ಅನಿಲ್ ರವಿಪುಡಿ ಅವರೊಂದಿಗಿನ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ರವಿಪುಡಿಯೊಂದಿಗೆ ತಮನ್ನಾ ಜಗಳ
ರವಿಪುಡಿಯೊಂದಿಗೆ ತಮನ್ನಾ ಜಗಳ

By

Published : May 22, 2023, 8:20 PM IST

ಮುಂಬೈ: ಟಾಲಿವುಡ್​ನ ಸೂಪರ್​ ಸ್ಟಾರ್​ ನಂದಮೂರಿ ಬಾಲಕೃಷ್ಣ ಅವರ ಮುಂದಿನ ಚಿತ್ರ 'ಎನ್​ಬಿಕೆ108'ರ ಚಿತ್ರದಲ್ಲಿನ ಐಟಂ ಸಾಂಗ್​ ಡ್ಯಾನ್ಸ್​ ಸಂಭಾವನೆ ವಿಚಾರವಾಗಿ ಮಿಲ್ಕ್​ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ನಟಿ ತಮನ್ನಾ ಭಾಟಿಯಾ ಮತ್ತು ಚಿತ್ರ ನಿರ್ದೇಶಕ ಅನಿಲ್​ ರವಿಪುಡಿ ನಡುವೆ ಜಗಳವಾಗಿದೆ ಎಂಬ ಸುದ್ಧಿ ಟಾಲಿವುಡ್​ ಅಂಗಳದಲ್ಲಿ ಹರಿದಾಡಿತ್ತು. ಇದೀಗಾ ಇದೇ ವಿಚಾರಕ್ಕೆ ನಟಿ ತಮನ್ನಾ ಪ್ರತಿಕ್ರಿಯೆ ನೀಡಿ, ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ನಂದಮೂರಿ ಬಾಲಕೃಷ್ಣ ಅವರ ಮುಂದಿನ ಚಿತ್ರ 'ಎನ್​ಬಿಕೆ108'ರ ನಿರ್ಮಾಣ ಕಾರ್ಯ ಈಗಾಗಲೇ ಭರದಿಂದ ಸಾಗುತ್ತಿದ್ದು, ಇದರಲ್ಲಿ ಬಾಲಯ್ಯ ಆ್ಯಕ್ಷನ್​ ಮೋಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಇದು ಬಾಲಕೃಷ್ಣ ಅವರ ವೃತ್ತಿಜೀವನದ 108ನೇ ಸಿನಿಮಾವಾಗಿದ್ದರಿಂದ ಅಭಿಮಾನಿಗಳು ಚಿತ್ರದ ಮೇಲೆ ಬಹಳಷ್ಟು ನಿರೀಕ್ಷೆ ಹೊಂದಿದ್ದಾರೆ. ಈ ಹಿನ್ನೆಲೆ ಚಿತ್ರ ನಿರ್ದೇಶಕ ರವಿಪುಡಿ ಅವರು ಚಿತ್ರದಲ್ಲಿ ಖ್ಯಾತ ಕಲಾವಿದರ ಬಳಸಿಕೊಳ್ಳಲು ಮುಂದಾಗಿದ್ದಾರೆ. ಈ ಹಿನ್ನೆಲೆ ರವಿಪುಡಿ ಚಿತ್ರದಲ್ಲಿನ ಐಟಂ ಸಾಂಗ್​ನಲ್ಲಿ ಹೆಜ್ಜೆಹಾಕಲು ಮಿಲ್ಕ ಬ್ಯೂಟಿ ತಮನ್ನಾರನ್ನು ಆಯ್ಕೆ ಮಾಡಿದ್ದಾರೆ.

ಅಲ್ಲದೇ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಚಿತ್ರದ 'ದಂಗ್ ದಂಗ್' ಎಂಬ ಹಾಡಿಗೆ ತಮನ್ನಾ ಹೆಜ್ಜೆ ಹಾಕಿ ಅಭಿಮಾನಿಗಳನ್ನು ಆಕರ್ಷಿಸಿದ್ದರು. ಇದನ್ನು ಕಂಡ 'ಎನ್​ಬಿಕೆ108' ಚಿತ್ರದ ನಿರ್ಮಾಪಕ ರವಿಪುಡಿ ಚಿತ್ರದ ಐಟಂ ಸಾಂಗ್​ಗಾಗಿ ತಮನ್ನಾ ಅವರನ್ನು ಸಂಪರ್ಕಿಸಿದ್ದರು, ಆದರೆ ಸಂಭಾವನೆಯ ವಿಷಯದಲ್ಲಿ ಈ ಇಬ್ಬರ ನಡುವೆ ಜಗಳವಾಗಿದೆ ಎಂಬ ಸುದ್ದಿ ವೈರಲ್ ಟಾಲಿವುಡ್​ನಲ್ಲಿ ಹರಿದಾಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ತಮನ್ನಾ ಇದನ್ನು ಅಲ್ಲಗೆಳೆದಿದ್ದಾರೆ. ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ, "ನಾನು ನಿರ್ದೇಶಕ ಅನಿಲ್​ ರವಿಪುಡಿ ಅವರೊಂದಿಗೆ ಕೆಲಸ ಮಾದುವುದನ್ನು ಆನಂದಿಸುತ್ತೇನೆ. ನಂದಮೂರಿ ಬಾಲಕೃಷ್ಣ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನ ಬಗ್ಗೆ ಈ ಆಧಾರರಹಿತ ಸುದ್ದಿ, ಲೇಖನಗಳು ಮತ್ತು ಓದುವುದು ತುಂಬಾ ಬೇಸರವಾಗಿದೆ. ಆಧಾರರಹಿತ ಆರೋಪಗಳನ್ನು ಮಾಡುವ ಮೊದಲು ದಯವಿಟ್ಟು ಒಮ್ಮೆ ಸಂಶೋಧನೆ ಮಾಡಿ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:'ಆಹಾ'ದಲ್ಲಿ​ ಅಲ್ಲು ಅರ್ಜುನ್​.. ಫ್ಯಾನ್ಸ್​ಗೆ ಕಾದಿದೆ ಬಿಗ್​ ಸರ್ಪ್ರೈಸ್​..

ಇನ್ನು ನಟಿ ತಮನ್ನಾ ಈ ಹಿಂದೆ ಅನಿಲ್ ರವಿಪುಡಿ ನಿರ್ದೇಶನದ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸರಿಲೇರು ನೀಕೆವ್ವರು, ಆಗಡು, ಮತ್ತು ಎಫ್​2 (ಫನ್ ಅಂಡ್ ಫ್ರಸ್ಟ್ರೇಶನ್) ಚಿತ್ರದಲ್ಲಿ ತಮನ್ನಾ ಕಾಣಿಸಿಕೊಂಡಿದ್ದಾರೆ. ಇನ್ನು ಕಳೆದ ವರ್ಷ ಅನಿಲ್​ ರವಿಪುಡಿ ಅವರ ಚಲನಚಿತ್ರ ಎಫ್ 3 (ಫನ್ ಅಂಡ್ ಫ್ರಸ್ಟ್ರೇಶನ್) ಬಿಡುಗಡೆಯಾದ ನಂತರ, ಸಂದರ್ಶನವೊಂದರಲ್ಲಿ, ಅನಿಲ್ ರವಿಪುಡಿ ತಮನ್ನಾ ಅವರನ್ನು ಮದುವೆಯಾಗಲಿದ್ದಾರೆ ಎಂಬ ಬಗ್ಗೆ ಪ್ರಶ್ನೆ ಕೇಳಲಾಗಿತ್ತು ಇದಕ್ಕೆ ನಿರ್ದೇಶಕ ಇದು ತಪ್ಪುಗ್ರಹಿಕೆ ಎಂದು ಹೇಳಿದ್ದರು.

ಇದನ್ನೂ ಓದಿ:'ಎನ್​ಬಿಕೆ 108': ಕನ್ನಡತಿ ಶ್ರೀಲೀಲಾ​ಗೆ ನಂದಮೂರಿ ಬಾಲಕೃಷ್ಣ ಜೊತೆ ನಟಿಸುವ ಚಾನ್ಸ್‌!

ABOUT THE AUTHOR

...view details