ಬೆಂಗಳೂರು: ಬಾಲಿವುಡ್ ಜೋಡಿ ತಮ್ಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ನಡುವಿನ ಸಂಬಂಧ ಇದೀಗ ಅಧಿಕೃತಗೊಂಡಿದೆ. ಸದ್ಯ ಈ ಜೋಡಿಗಳು ತಮ್ಮ ಮುಂಬರುವ ಸಿನಿಮಾ 'ಲಸ್ಟ್ ಸ್ಟೋರಿ 2' ಪ್ರೊಮೊಷನ್ನಲ್ಲಿ ಬ್ಯುಸಿಯಾಗಿದ್ದಾರೆ. 'ಲಸ್ಟ್ ಸ್ಟೋರಿ 2' ಅಲ್ಲಿ ಈ ಇಬ್ಬರು ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದಾರೆ. ಮುಂಬೈನಲ್ಲಿ ನಡೆದ 'ಲಸ್ಟ್ ಸ್ಟೋರಿ 2' ರ ಪ್ರದರ್ಶನಕ್ಕೆ ಹಾಜರಾದ ವಿಜಯ್ ಮತ್ತು ತಮ್ಮನ್ನಾ ಸ್ಟೈಲಿಶ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
'ಲಸ್ಟ್ ಸ್ಟೋರಿ 2' ಅಲ್ಲಿ ನಟಿಸುತ್ತಿರುವ ಅನೇಕ ಪಾತ್ರಧಾರಿಗಳ ಚಿತ್ರಗಳು ಮತ್ತು ವಿಡಿಯೋಗಳು ಇದೀಗ ಆನ್ಲೈನ್ನಲ್ಲಿ ಹರಿದಾಡುತ್ತಿದೆ. ಮೃಣಲ್ ಠಾಕೂರ್ರಿಂದ ಅಂಗದ್ ಬೇಡಿ, ಕೊಂಕಣ್ ಸೇನ್ ಶರ್ಮಾ ಮತ್ತು ತಿಲೊತಮ ಶೊಮೆ ಸೇರಿದಂತೆ ಅನೇಕ ತಾರಾಗಣದಿಂದ ಕೂಡಿರುವ ಈ ಚಿತ್ರ ನೆಟ್ಫ್ಲಿಕ್ಸ್ನಲ್ಲಿ ಪ್ರದರ್ಶನಕ್ಕೆ ಸಜ್ಜಾಗಿದೆ. ಈ ಹಿನ್ನೆಲೆ ಈ ನಟ ನಟಿಯರೆಲ್ಲಾ ಚಿತ್ರ ಪ್ರದರ್ಶನಕ್ಕೆ ಆಗಮಿಸಿದ್ದು, ಸ್ಟೈಲಿಶ್ ಅವತಾರದಲ್ಲಿ ಗಮನ ಸೆಳೆದಿದ್ದಾರೆ. ಇನ್ನು ತಮ್ಮನ್ನಾ ಮತ್ತು ವಿಜಯ್ ಜೋಡಿಯ ಕೆಮಿಸ್ಟ್ರಿ ಚಿತ್ರದಲ್ಲಿ ಉತ್ತಮವಾಗಿ ಮೂಡಿ ಬಂದಿದೆ ಎಂದು 'ಲಸ್ಟ್ ಸ್ಟೋರಿ 2' ಪ್ರಿಮಿಯರ್ನಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಪ್ಯಾಪಾರಾಜಿಗಳು ಹಂಚಿಕೊಂಡಿರುವ ವಿಡಿಯೋದಲ್ಲಿ, ತಮ್ಮನ್ನಾ ಹೈ ವೇಸ್ಟ್ ಲೇಸ್ ಅಪ್ನ ಮಿನಿ ಸ್ಕರ್ಟ್ಗೆ ಬಿಳಿ ಶರ್ಟ್ ತೊಟ್ಟಿದ್ದಾರೆ. ಇನ್ನು ವಿಜಯ್ ಕಪ್ಪು ಬಣ್ಣದ ಫ್ಲೇರ್ಡ್ ಪ್ಯಾಂಟ್ಗೆ ಮ್ಯಾಚಿಂಗ್ ಶರ್ಟ್ ತೊಟ್ಟಿದ್ದಾರೆ. ವಿಜಯ್ ಮತ್ತು ತಮನ್ನಾ ಒಟ್ಟಾಗಿ ಕಾಣಿಸಿಕೊಂಡಿದ್ದು, ಒಬ್ಬರನ್ನು ಒಬ್ಬರಿ ದಿಟ್ಟಿಸುತ್ತಿರುವ ಚಿತ್ರಗಳು ಪ್ಯಾಪಾರಾಜಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.