ದಕ್ಷಿಣ ಚಿತ್ರರಂಗದ ಸುಂದರ ನಟಿ ತಮನ್ನಾ ಭಾಟಿಯಾ ಮತ್ತು ಬಾಲಿವುಡ್ನ ನಟ ವಿಜಯ್ ವರ್ಮಾ ಅವರ ಪ್ರೀತಿ ವಿಚಾರ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಸದ್ದು ಮಾಡುತ್ತಿದೆ. ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ಮುಂದುವರಿಸಿದ್ದಾರೆ. ಅಭಿಮಾನಿಗಳು ಸಹ ಈ ಜೋಡಿ ಮದುವೆ ಬಗ್ಗೆ ಉತ್ಸಾಹ ತೋರುತ್ತಿದ್ದಾರೆ.
ತಮನ್ನಾ ಮತ್ತು ವಿಜಯ್ ಸಂಬಂಧದ ಚರ್ಚೆ ಚಿತ್ರರಂಗದಲ್ಲಿ ಜೋರಾಗಿದೆ. ಆದ್ರೆ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಖಚಿತಪಡಿಸಿಲ್ಲ. 2023ರ ಹೊಸ ವರ್ಷಾಚರಣೆ ವೇಳೆ ಪರಸ್ಪರ ಚುಂಬಿಸಿದ ವಿಡಿಯೋ ವೈರಲ್ ಆಗಿ ಡೇಟಿಂಗ್ ವದಂತಿ ಹುಟ್ಟಿಕೊಂಡಿದೆ. ಕಳೆದ ಆರು ತಿಂಗಳಿನಿಂದ ಈ ಜೋಡಿ ಬಗ್ಗೆ ಗುಸುಗುಸು ಇದ್ದು ತಮ್ಮ ಸಂಬಂಧದ ಬಗ್ಗೆ ಮೌನ ವಹಿಸಿದ್ದಾರೆ. ಆದ್ರೆ ಆಗಾಗ್ಗೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದು, ಪಾಪರಾಜಿಗಳ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗುತ್ತಾರೆ.
ಸದ್ಯ ಬಾಂದ್ರಾದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಅದು ಕೂಡ ಮ್ಯಾಚಿಂಗ್ ಡ್ರೆಸ್ ತೊಟ್ಟು ಗಮನ ಸೆಳೆದಿದ್ದಾರೆ. ರೂಮರ್ ಲವ್ ಬರ್ಡ್ಸ್ನ ಈ ಲುಕ್ ಬಗ್ಗೆ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಪ್ರೀತಿ ಬಗ್ಗೆ ಅಧಿಕೃತ ಮಾಹಿತಿ ಕೊಡಿ, ಮದುವೆ ಯಾವಾಗ ಎಂಬ ರೀತಿ ಕಾಮೆಂಟ್ ಮಾಡುತ್ತಿದ್ದಾರೆ.
ತಮನ್ನಾ ಮತ್ತು ವಿಜಯ್ ಅವರ ಈ ಹೊಸ ಫೋಟೋ ಅಭಿಮಾನಿಗಳ ಗಮನ ಸೆಳೆದಿದೆ. ಜೋಡಿ ಮೇಲೆ ಸಾಕಷ್ಟು ಪ್ರೀತಿಯನ್ನು ಹರಿಸುತ್ತಿದ್ದಾರೆ. ವಿಜಯ್ ನೀವು ತುಂಬಾ ಅದೃಷ್ಟವಂತರು ಎಂದು ಒಬ್ಬರು ಬರೆದಿದ್ದಾರೆ. ನಿಮ್ಮಿಬ್ಬರ ಜೋಡಿ ಸುರಕ್ಷಿತವಾಗಿರಲಿ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ಅದೃಷ್ಟವಿದ್ದರೆ ವಿಜಯ್ ವರ್ಮಾ ಅವರ ಹಾಗೆ ಇರಬೇಕು ಎಂದಿದ್ದಾರೆ.